6th December 2023
Share

TUMAKURU:SHAKTHIPEETA FOUNDATION

ರಾಜ್ಯದ ಬಹಳಷ್ಟು ಜನ ರೈತರು ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರ ಮತ್ತು ಹತ್ತಿರದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೇ ಅವರು ಬೆಳಿಗ್ಗೆ ಹಳ್ಳಿಗಳಿಗೆ ಹೋಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಯಂಕಾಲ ನಗರಗಳಿಗೆ ಬರುವುದು ವಾಡಿಕೆ.

 ನಾಳೆಯಿಂದ ಅಂದರೆ ದಿನಾಂಕ:20.04.2020 ರಿಂದ ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್ ಸಡಿಲಗೊಳ್ಳಲಿದೆ. ನಗರಗಳಲ್ಲಿರುವ ರೈತರಿಗೆ ಹಳ್ಳಿಗಳಿಗೆ ಹೋಗಿ ಬರಲು ಕೃಷಿ ಪಾಸ್ ನೀಡಲಾಗುವುದೇ ಅಥವಾ ಅವರ ಸ್ವಂತ ವಾಹನದಲ್ಲಿ ಓಡಾಡಲು ಅನುಮತಿ ಇದೆಯೇ ಎಂಬ ಬಗ್ಗೆ ರಾಜ್ಯ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ರವರು ಸ್ಪಷ್ಟಪಡಿಸುವುದು ಅಗತ್ಯವಾಗಿದೆ.

  ಎರಡು ವಿಧಗಳಿಂದ ಹಳ್ಳಿಗಳ ರೈತರು ನಗರಗಳಲ್ಲಿ ವಾಸವಾಗಿರುತ್ತಾರೆ, ಒಂದು ಮಕ್ಕಳ ವಿದ್ಯಾಬ್ಯಾಸಕ್ಕಾಗಿ, ಎರಡನೆಯದು ಹಳ್ಳಿಗಳ ಜನರ ಕಿರುಕುಳ, ಹೊಟ್ಟೆಹುರಿಗೆ ಬೇಸತ್ತು ಕೆಲವರು ವಲಸೆ ಬಂದಿರುತ್ತಾರೆ. ಕೊರೊನಾ ಪವಾಡದಿಂದ ಈಗ ಇವರೆಲ್ಲಾ ಶಾಶ್ವತವಾಗಿ ಹಳ್ಳಿಗಳಿಗೆ ವಾಪಸ್ಸು ಹೋಗುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯಾಧ್ಯಾಂತ ಜಿಲ್ಲಾಧಿಕಾರಿಗಳು ಬಗ್ಗೆ ಮಾಹಿತಿ ನೀಡುವುದು ಸೂಕ್ತವಾಗಿದೆ.

About The Author