TUMAKURU:SHAKTHIPEETA FOUNDATION
ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರ ಆಶಯದಂತೆ, 2022-2023 ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರದ ಯೋಜನೆಗಳಿಗೆ ರಾಜ್ಯದ ಪಾಲಿನ ಹಣ ನಿಗದಿ ಮಾಡುವುದರಿಂದ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳ ಯೋಜನೆಗಳನ್ನು ಘೋಷಣೆ ಮಾಡಲು ಅನೂಕೂಲವಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರದಿಂದ ಹೆಚ್ಚು ಅನುದಾನ ಪಡೆಯಲು ಸಹಕಾರಿಯಾಗಲಿದೆ.
ಮುಂದಿನ ‘100 ದಿವಸಗಳ ಆಂದೋಲನ’ ಕೈಗೊಂಡು ಎಲ್ಲಾ ಇಲಾಖೆಗಳಿಗೂ ಭೇಟಿ ನೀಡಿ ಸಮಾಲೋಚನೆ ನಡೆಸಲು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ರಾಜ್ಯ ಮಟ್ಟದ ದಿಶಾ ಸಮಿತಿ ಪದಾಧಿಕಾರಿಗಳು, ಖಾಸಗಿ ಸಂಸ್ಥೆಗಳು, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನಡೆಸಲು ವಿಶೇಷ ಆಸಕ್ತಿ ವಹಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಕೇಂದ್ರ ಸರ್ಕಾರದಲ್ಲಿ ಪ್ರಧಾನ ಮಂತ್ರಿಯವರು ಸೇರಿದಂತೆ ಹಾಲಿ 31 ಜನ ಸಂಪುಟ ದರ್ಜೆ ಸಚಿವರು, ಇಬ್ಬರು ಸ್ವತಂತ್ರ್ಯ ಖಾತೆ ನಿರ್ವಹಣೆ ರಾಜ್ಯ ಸಚಿವರು ಮತ್ತು 20 ಜನ ರಾಜ್ಯ ಸಚಿವರು ಇದ್ದಾರೆ. ಇವರ ಖಾತೆಗಳಿಗೆ ಸಂಭಂಧಿಸಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ, ನಿಗಮ, ಮಂಡಳಿ,ಕಾರ್ಪೋರೇಷನ್, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಗಳಿಂದ
- ಬರೆದಿರುವ ಪತ್ರಗಳು,
- ಕಳುಹಿಸಿರುವ ಪ್ರಸ್ತಾವನೆಗಳು,
- ಮಂಜೂರಾತಿ ಹಂತದಲ್ಲಿರುವ ಯೋಜನೆಗಳು.
- ಮಂಜೂರಾಗಿರುವ ಯೋಜನೆಗಳು,
- ಪ್ರಗತಿಯಲ್ಲಿರುವ ಯೋಜನೆಗಳು.
- ನನೆಗುದಿಗೆ ಬಿದ್ದಿರುವ ಯೋಜನೆಗಳು.
- ಪ್ರಸ್ತಾವನೆ ಕಳುಹಿಸದಿರುವ ಯೋಜನೆಗಳ ಇಲಾಖಾವಾರು ಪಟ್ಟಿ
ಈ ಎಲ್ಲಾ ಮಾಹಿತಿಗಳನ್ನು ಸಂಗ್ರಹ ಮಾಡಬೇಕಾಗಿರುವುದರಿಂದ, ಅವಲೋಕನ ಪೋರ್ಟಲ್ ನಲ್ಲಿರುವ 42 ಇಲಾಖೆಗಳು, 148 ಲೈನ್ ಡಿಪಾರ್ಟ್‍ಮೆಂಟ್‍ಗಳು ಮತ್ತು 223 ನಿಗಮ, ಮಂಡಳಿ ಕಾರ್ಪೋರೇಷನ್ ಸೇರಿದಂತೆ ಇತರೆ ಇಲಾಖೆಗಳು ಇದ್ದಲ್ಲಿ ಮಾಹಿತಿ ಕೋರಿ ಒಂದು ವಾರದ ಕಾಲಾವಕಾಶ ನೀಡಿ ಪತ್ರ ಬರೆಯಲು ರಾಜ್ಯ ಮಟ್ಟದ ದಿಶಾ ಸಮಿತಿ ಚಿಂತನೆ ನಡೆಸಿದೆಯಂತೆ.