22nd December 2024
Share

  TUMAKURU:SHAKTHIPEETA FOUNDATION

  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್.ಧರ್ಮಸಿಂಗ್‌ರವರಿಗೆ ಪತ್ರದಲ್ಲಿರುವಂತೆ ಫೋರಂನಿಂದ ಮನವಿ ಸಲ್ಲಿಸಲಾಯಿತು. ಮುಖ್ಯ ಮಂತ್ರಿಗಳ ಒಎಸ್‌ಡಿ ಯವರಾದ ಶ್ರೀ ಹನುಂತರಾವ್‌ರವರು ಸಾರ್ ತುಮಕೂರು ಬೆಂಗಳೂರಿನ ಸೆಟಿಲೆಟ್ ಟೌನ್ ಮಾಡಲು ರಮೇಶ್ ಶ್ರಮಿಸುತ್ತಿದ್ದಾರೆ. ಇದು ಆಗಲೇ ಬೇಕು ಸಾರ್ ಎಂದು ಮುಖ್ಯ ಮಂತ್ರಿಯವರಿಗೆ ನೀಡಿದರು, ಏನು ಬರಿಬೇಕಾಪ್ಪ ಎಂದು ನನ್ನ ನೋಡಿದರು, ಸ್ಪೆಷಲ್ ಪ್ಯಾಕೇಜ್ ಗಾಗಿ ಒಂದು ಮಾಸ್ಟರ್ ಮಾಡಲು ಖಡಕ್ ಆಗಿ ಆದೇಶ ನೀಡಬೇಕು ಸಾರ್ ಎಂದಾಗ ಅವರು ಪತ್ರದ ಮೇಲೆ ’ಕೋರಿಕೆಯಂತೆ ಮಂಡಿಸಿ ಕ್ರಮಜರುಗಿಸಲು ಕಟ್ಟಪ್ಪಣೆ’ ಎಂದು ಬರೆದರು

   ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಾದ ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು, ತುಮಕೂರು ನಗರದ ಮಾಜಿ ಶಾಸಕರಾದ ಶ್ರೀ ಎಸ್.ಷಫಿಅಹಮ್ಮದ್‌ರವರು, ಮಾಜಿ ಎಂ.ಎಲ್.ಸಿ. ಶ್ರೀ ವಿ.ಎಸ್.ಉಗ್ರಪ್ಪನವರು, ಕೊರಟಗೆರೆ ಮಾಜಿ ಶಾಸಕರಾದ ಶ್ರೀ ಸಿ.ವೀರಭದ್ರಯ್ಯನವರು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುನಂದಮ್ಮನವರು, ತುಮಕೂರು ಡೈರಿ ಅಧ್ಯಕ್ಷರಾದ ಶ್ರೀ ಹಳೇಮನೆ ಶಿವನಂಜಪ್ಪನವರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಗೌಡರವರು, ಟೂಡಾ ಸದಸ್ಯರಾದ ಶ್ರೀ ಹೆಚ್.ಎಸ್.ಹೇಮಂತ್ ಕುಮಾರ್‌ರವರು, ತುಮಕೂರು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಹುಚ್ಚಯ್ಯ, ತುಮಕೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷರಾದ ಶ್ರೀ ಇಕ್ಬಾಲ್‌ರವರು ಇನ್ನೂ ಮಂತಾದವರು ಸಹಿ ಹಾಕುವ ಮೂಲಕ ಬೆಂಬಲಿಸಿದ್ದರು.

  ನಗರಾಭಿವೃದ್ಧಿ ಇಲಾಖೆ ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಸಿಡಿಪಿ ಮಾಸ್ಟರ್ ಪ್ಲಾನ್ ಮಾಡಲು ಆದೇಶಿಸಿತು.  ಇದರಿಂದ ಲ್ಯಾಂಡ್ ಯೂಸ್ ಬದಲಾವಣೆ ಮಾಡಿ ಕೆಲವರಿಗೆ ಹಣ ಮಾಡಲು ಅನೂಕೂಲವಾಯಿತು.

  ನಾನು ಕಂಡ ಕನಸಿನ ಮೂಲಭೂತ ಸೌಕರ್ಯ ಮಾಸ್ಟರ್ ಪ್ಲಾನ್ ಮಾಡಲೂ ಇಲ್ಲ, ಸೆಟಿಲೆಟ್ ಟೌನ್ ಇಲ್ಲ, ವಿಶೇಷ ಪ್ಯಾಕೇಜ್‌ಗೆ ಪ್ರಸ್ತಾವನೆಯೂ ಆಗಲಿಲ್ಲ. ವಿಶೇಷ ಪ್ಯಾಕೇಜ್ ಪಡೆಯುವುದು ನನ್ನ ಪ್ರಮುಖ ಉದ್ದೇಶ ನೆನೆಗುದಿಗೆ ಬಿತ್ತು.