11th December 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳ ಅಮೃತ್ ಮಹಲ್ ಕಾವಲ್ ಸರ್ವೆ ನಂ 1 ರಲ್ಲಿ ಪ್ರಸ್ತುತ ಹೆಚ್.ಎ.ಎಲ್ ಘಟಕ ಕಾಮಗಾರಿ ಆರಂಭವಾಗಿರುವ ಜಮೀನಿನಲ್ಲಿ ಕೋಕೋನಟ್ ರೀಸರ್ಚ್ ಸೆಂಟರ್ ಸ್ಥಾಪನೆಗೆ  1984 ರಿಂದ 1989 ರವರೆಗೆ ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರಯತ್ನ ಪಟ್ಟಿದ್ದರು.

 ಅವರು ಕೇಂದ್ರ ಸರ್ಕಾರದ ಕೋಕೋನಟ್ ಡೆವಲಪ್ ಮೆಂಟ್ ಬೋರ್ಡ್‌ನ ಉಪಾಧ್ಯಕ್ಷರು ಹಾಗೂ ಕೆಲವು ಕಾಲ ಪ್ರಭಾರ ಅಧ್ಯಕ್ಷರಾಗಿದ್ದರಂತೆ. ಆ  ಅವಧಿಯಲ್ಲಿ  ಕೋಕೋನಟ್ ರೀಸರ್ಚ್ ಸೆಂಟರ್‌ನ್ನು ಈ ಜಮೀನಿಗೆ ಮಂಜೂರು ಮಾಡಿಸಲು ಪ್ರಯತ್ನಿಸಿದ್ದರಂತೆ, ಯೋಜನೆ ಮಂಜೂರಾತಿ ಆಗುವ ವೇಳೆಗೆ ಚುನಾವಣೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರು ಪರಾಭವ ಹೊಂದಿದ ಹಿನ್ನೆಲೆಯಲ್ಲಿ, ಯೋಜನೆ ಕೈತಪ್ಪಿ ನಂತರ ಭಾರತದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರಸಿಂಹರಾವ್‌ರವರು ಆಂಧ್ರ ಪ್ರದೇಶಕ್ಕೆ  ಮಂಜೂರು ಮಾಡಿಸಿದರು ಎಂದು ಬಸವರಾಜ್‌ರವರು ಹೇಳುತ್ತಾರೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲ.