27th September 2023
Share

TUMAKURU:SHAKTHIPEETA FOUNDATION

  ಆಂದ್ರ ಪ್ರದೇಶದಿಂದ ಬಂದು ನಮ್ಮೂರಿನಲ್ಲಿ ತಾಯಿ ನೆಲಸಿದ್ದಾಳೆ, ಇದು ಮೂಲ ಕುಂಚಿಟಿಗರ ಗಾಳೇರು ಬೆಡಗುರವರ ಮನೆ ದೇವರು, ಕರ್ನಾಟಕ ಮತು ಆಂದ್ರ ಎರಡು ರಾಜ್ಯಗಳ ಸುಮಾರು 65 ಕುಟುಂಬಗಳ ಮನೆ ದೇವರು. ನಮ್ಮೂರಿನಲ್ಲಿ ನೆಲಸಿರುವ ಗ್ರಾಮದೇವತೆ. 

  ಕ್ಯಾತಸಂದ್ರದ ವಾಲ್ಮೀಕಿ ಜನಾಂಗದ  ಶ್ರೀ ಹನುಂತಪ್ಪನವರು ನಮ್ಮೂರಿನಲ್ಲಿ ವಾಸವಾಗಿದ್ದರು.  ಅವರು ಅದಲಗೆರೆ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದರು,  ಅವರು ಜೋತಿಷ್ಯ, ಶಾಸ್ತ್ರ, ಪಂಚಾಂಗ ಹೀಗೆ ಜನತೆಯ ಕಷ್ಟ ಸುಖಗಳಿಗೆ ಪರಿಹಾರ ಸೂಚಿಸುತ್ತಿದ್ದರು.

  ಅವರು ನಮ್ಮ ತಂದೆಗೆ ಕಾಯಿಲೆಯಾದಾಗ ದೇವಿ ಪುಸ್ತಕ ತಂದು ಕೊಟ್ಟು, ಪುಸ್ತಕ ಪೂಜಿಸಿ ಓದಲು ಮತ್ತು ಮಲಗುವಾಗ ಅವರ ತಲೆದಿಂಬು ಕೆಳಗೆ ಇಡಲು ಸಲಹೆ ನೀಡಿದರು. ಆ ಪುಸ್ತಕದಲ್ಲಿ ದೇವಿಗೆ ಅರಿಕೆ ಮಾಡಿದ ಯಾವುದೇ ಕೆಲಸ ಗ್ಯಾರಂಟಿ ಆಗಲಿದೆ ಎಂದು ಬರೆದಿತ್ತು.

  ದಿನಾಂಕ:01.08.1988 ರಂದು ಕುಂದರನಹಳ್ಳಿ ಗ್ರಾಮದಲ್ಲಿರುವ ಶ್ರೀ ಗಂಗಮಲ್ಲಮ್ಮ ದೇವಾಲಯದಲ್ಲಿ ಅರಿಕೆ ಮಾಡಿ ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‌ನಲ್ಲಿರುವ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಆರಂಭಿಸಲು ಶಕ್ತಿಕೊಡು ತಾಯಿ ಎಂದು ಪ್ರಾರ್ಥಿಸಿದ್ದೆ.