22nd December 2024
Share

TUMAKURU:SHAKTHIPEETA FOUNDATION

ದಿ: 10.09.1992 ರಂದು ಕುಂದರನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ, ಜಮೀನು ಉಳುಮೆ ಮಾಡುತ್ತಿದ್ದ ಸುತ್ತಮುತ್ತಲಿನ ರೈತರ ಸಭೆ ಕರೆದು, ಜಮೀನನ್ನು ರೈತರಿಗೆ ಮಂಜೂರು ಮಾಡಿಸಲು ಅಥವಾ ಯಾವುದಾದರು ಒಂದು ಉದ್ದಿಮೆಯನ್ನು  ಆರಂಭಿಸಲು ನಿರ್ಣಯ ಕೈಗೊಳ್ಳಲಾಯಿತು.

  ನಮ್ಮ ತೋಟದ ಕೆಲಸ ಮಾಡುವ ಕಾಲೋನಿ ಶ್ರೀ ಸಿದ್ದಯ್ಯನವರು ಮತ್ತು ನಾನು ಮಾತನಾಡುವಾಗ ನೋಡೋ ರಾಜ್ಯದ ಮುಖ್ಯಮಂತ್ರಿ ಹೆಲಿಕ್ಯಾಪ್ಟರ್ನಲ್ಲಿ ಬಂದು ಯೋಜನೆ ಉದ್ಘಾಟನೆ ಮಾಡಬೇಕು. ಆಗ ಮಾಡುತ್ತೇನೆ ಎಂದರೆ ಸಾಹುಕಾರ್ರು ರೇವಣ್ಣನಂತವರ  ಕೈಲಿ ಆಗಿಲ್ಲ ನೀವೂ ಹೇಗೆ ಮಾಡುತ್ತೀರಿ ಅಂತ ನಗುತ್ತಿದ್ದ ಈಗಲೂ ಇದ್ದಾರೆ.

  ಎಲ್ಲಾ ಗ್ರಾಮಗಳ ಜನರು ನನಗೆ ಬಗ್ಗೆ ಮಾಹಿತಿ ಸಂಗ್ರಹಿಸಲು ನೇಮಿಸಿದರು. ಹಿನ್ನೆಲೆಯಲ್ಲಿ ನಾನು ಮೊದಲು ಸಾಗರನಹಳ್ಳಿ ರೇವಣ್ಣನವರ ಬಳಿ ಮಾತನಾಡಿದೆ. ಅವರು ನೋಡೋ ನನ್ನ ಮಾತು ಯಾರು ಕೇಳಲ್ಲ, ಎಂಪಿ ಮತ್ತು ಎಂಎಲ್ ಇವರ್ಯಾರು ಮಾಡಲ್ಲ ಎಂದು ಖಡಕ್ ಆಗಿ ಹೇಳಿದರು.

  ನಂತರ ನಾನು ಗುಬ್ಬಿ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಎಸ್.ಶಿವನಂಜಪ್ಪನವರ ಬಳಿ ಮಾತನಾಡಿದೆ. ಬಾಣಸಂದ್ರದ ಹುಚ್ಚೆಗೌಡರ ಮಗಳು ಏನೋ ಕೇಸ್ ಹಾಕಿದಾರೆ ಅಂತರೆ ನನಗೂ ಗೊತ್ತಿಲ್ಲ. ನಾನು ಬಿದರೆಹಳ್ಳ ಹಳ್ಳಕಾವಲ್ ಕೆಂಪಯ್ಯನಿಗೆ ಜಮೀನು ಕೊಡುತ್ತೇನೆ ಅಂತ ಮಾತುಕೊಟ್ಟಿದ್ದೇನೆ. ದಾಖಲೆ ನೋಡು ಆಮೇಲೆ ಯೋಚನೆ ಮಾಡೋಣ ಅಂತ ಸಲಹೆ ನೀಡಿದರು.

  ನಂತರ ನಾನು ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್ ಬಳಿ ವಿಚಾರಿಸಿದೆ. ಅವರು ನೋಡಯ್ಯಾ ಅಧಿಕಾರ ಇದ್ದರೆ ಮಾತ್ರ ಏನಾರಾ ಮಾಡಬಹುದು, ಈಗ ಬೇಡ ಇರು ನೋಡೋಣ ಎಂದರು.

ಸಂಸದರಾದ ಶ್ರೀ ಎಸ್.ಮಲ್ಲಿಕಾರ್ಜುನಯ್ಯನವರ ಬಳಿ ಮಾತನಾಡಿದಾಗ, ಒಳ್ಳೆ ಸಲಹೆ ರಾಜ ಯಾವುದಾದರೂ ಯೋಜನೆ ತಗೊಂಡು ಬಾ, ಯಾರಿಗೆ ಬೇಕಾದರೂ ಪತ್ರ ನೀಡುತ್ತೇನೆ, ನೀನು ಯಾವ ಕಚೇರಿಗೆ ಕರೆದರು ಬರ್ತಿನಿ, ಸರ್ಕಾರದ ಹಂತದಲ್ಲಿ ಕೆಲಸ ಆಗಬೇಕಾದರೆ ಬಹಳ ಕಷ್ಟ, ಪ್ರಯತ್ನ ಪಡು ಎಂಬ ಸಲಹೆ ನೀಡಿದರು.

  ದಾಖಲೆ ಹುಡುಕಿಕೊಂಡು ಚಿಕ್ಕಮಂಗಳೂರು ಜಿಲ್ಲೆ ಅಜ್ಜಂಪುರ, ಮೈಸೂರು ಮತ್ತು ಬೆಂಗಳೂರು ಪತ್ರಗಾರ ಎಲ್ಲಾ ಹುಡುಕಿದೆ. ಕಾವಲುಗಾರರಿಗೆ ಜಮೀನು ಹಂಚಲು ಬರುವುದಿಲ್ಲ ಎಂಬ ಮಾಹಿತಿ ಖಚಿತವಾಗಿ ದೊರೆಯಿತು.

 ಮಾರಶೆಟ್ಟಿಹಳ್ಳಿ ಗೊಲ್ಲರಹಟ್ಟಿ  ಶ್ರೀ ಗೊವಿಂದಪ್ಪನವರು ಸೇರಿದಂತೆ ಕಾವಲುಗಾರರ ಕುಟುಂಬಗಳ ಸದಸ್ಯರುಗಳು ಬಂದು ಏನಾದರೂ ಮಾಡಿ ನಿಮಗೂ ಜಮೀನು ಬುರುತ್ತೆ, ನಮಗೂ ಕೊಡಿಸಿ ಎಂದು ದುಂಬಾಲು ಬಿದ್ದರು. ನಾನು ಅವರಿಗೆ ಇಲ್ಲಾ ಸಾಧ್ಯವೇ ಇಲ್ಲಾ ನಿಮಗೆ ಜಮೀನು ಮಂಜೂರು ಆಗಲ್ಲ, ಇಲ್ಲಿ ಯಾವುದಾದರೂ ಯೋಜನೆ ಮಂಜೂರು ಮಾಡಿಸಲೇ ಬೇಕು ಸ್ವಾಮಿ ಸುಮ್ಮನೆ ಪ್ರಯತ್ನ ಮಾಡಬೇಡಿ ಎಂದು ನೇರವಾಗಿ ಹೇಳಿಕಳುಹಿಸಿದೆ.

   ಅವರ ಮನೆಗೆ ಇತ್ತೀಚೆಗೆ ನಾನು ಹೋದಾಗ ಗೋವಿಂದಪ್ಪನವರು ನೀನು ಸಣ್ಣ ಹುಡುಗ ಇದ್ದಾಗಲೇ ಏನಾದರೂ ಯೋಜನೆ ತರ್ತಿನಿ ಎಂದಿದ್ದೆ, ನಾನು ಆವತ್ತು ನಿನ್ನ ಬೈದುಕೊಂಡು ಬಂದಿದ್ದೆ. ಏನಾದರೂ ಆಗಲಿ ಪ್ರಯತ್ನ ಬಿದ್ದು ತಂದೆ ಬಿಡಪ್ಪ ಅಂದರು.

  ನಂತರ ನಡೆದ ಬೆಳವಣಿಗೆಯಲ್ಲಿ ಜಮೀನಿನ ಸುತ್ತಮುತ್ತ ಬಗರ್ ಹುಕುಂ ಯೋಜನೆಯಡಿಯಲ್ಲಿ ಉಳುಮೆ ಮಾಡುತ್ತಿದ್ದ ಸುತ್ತಮುತ್ತಲಿನ ಗ್ರಾಮಗಳ ಸುಮಾರು 1000 ಜನ ಹಾಗೂ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 6-7  ಕುಟುಂಬಗಳು ಎಲ್ಲರನ್ನು ಕಡೆಗಣಿಸಿ, ಸ್ಥಳೀಯ ದಲಿತರಿಗೂ ನೀಡದೆ ಎಲ್ಲಿಂದಲೋ ಬಂದು  ಗುಡಿಸಲು ಹಾಕಿಕೊಂಡು ಇದ್ದವರಿಗೆ ಬಗರ್ ಹುಕುಂ ಯೋಜನೆಯಲ್ಲಿ ಶ್ರೀ.ಜಿ.ಎಸ್.ಶಿವನಂಜಪ್ಪನವರು ಸುಮಾರು 151 ಎಕರೆ 35 ಗುಂಟೆ ಜಮೀನನ್ನು ಮಂಜೂರು ಮಾಡಿರುವ ಮಾಹಿತಿ ತೆಗೆದುಕೊಂಡು ಬಿದರೆಹಳ್ಳಕಾವಲ್ ಕೆಲವರು ಕೊಟ್ಟರು.

  ಅವರ ಉದ್ದೇಶ ನಮಗೆ ಜಮೀನು ಕೊಟ್ಟಿಲ್ಲ ಬೇಕಾದವರಿಗೆ ಮಾತ್ರ ಜಾಸ್ತಿ ಜಮೀನು ಮಂಜೂರು ಮಾಡಿದ್ದಾರೆ ಎಂಬುದಾಗಿತ್ತು. ವಿಷಯ ಸುತ್ತಲಿನ ಜನರಿಗೆ ಕೋಪ ಬರಿಸಿತು. ಯಾರಿಗೂ ಬೇಡ ಏನಾದರೂ ಮಾಡಿಸುವುದು ಸೂಕ್ತ ಎಂಬ ಸಲಹೆ ನೀಡಿದರು.