TUMAKURU:SHAKTHIPEETA FOUNDATION
1999 ರಲ್ಲಿ ಶ್ರೀ ಜಿ.ಎಸ್. ಬಸವರಾಜ್‌ರವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು, ಅಂದಿನಿಂದಲೇ ನನ್ನ ಕಾರ್ಯಾರಂಭ ಶುರುವಾಯಿತು. 2000 ರಲ್ಲಿ ಬೆಂಗಳೂರು ಮೂಲದ M/s. Ind Euro Pharma Limited ಕಂಪನಿಯು Anti –Canser Drugs Madicinal Plants ಬೆಳೆದು ಕ್ಯಾನ್ಸರ್ ಔಷದ ತಯಾರಿಕಾ ಘಟಕ ಸ್ಥಾಪಿಸುವುದಕ್ಕೆ ಜಮೀನು ಮಂಜೂರು ಮಾಡಿಸಲು ಆಗಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್. ಬಸವರಾಜ್‌ರವರನ್ನು ಸಂಪರ್ಕಿಸಿ ಪ್ರಯತ್ನಿಸಿದ್ದರು.
ಅವರು ಮೊದಲು ಎಸ್.ಇ.ಝಡ್ ಎಂದಾಗ ನನಗೂ ಖುಷಿಯಾಯಿತು. ದಾಖಲೆಗಳನ್ನು ನಾನೇ ಕೊಡಿಸಿದೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣರವರ ಬಳಿಯೂ ಬಸವರಾಜ್‌ರವರು ಅವರನ್ನು ಕರೆದು ಕೊಂಡು ಹೋದರೂ. ನಾನು ಸಹ ಹೋಗಿದ್ದೆ, ಅಲ್ಲಿಯೇ ಕಾಸಿಕಣಗಲೇ ಗಿಡದಿಂದ ಔಷಧಿ ತೆಗೆದರೆ ಗಬ್ಬು ವಾಸನೆ ಬರಲಿದೆ ಎಂಬ ವಿಷಯ ತಿಳಿಯಿತು.
ಆದರೂ ಆ ಮನುಷ್ಯ ಹಿಂದೆ ಬಿದ್ದರು, ನಾನು ಇದನ್ನು ನಿಲ್ಲಿಸಲು ತಂತ್ರ ಹುಡುಕಬೇಕಾಯಿತು. ಆಗ ಅಧಿಕಾರಿಗಳಿಂದ ನನಗೆ ಬಗರ್ ಹುಕುಂ ಅರ್ಜಿ ಇರುವುದರಿಂದ ಈ ಜಮೀನನ್ನು ಮಂಜೂರು ಮಾಡಲು ಬರುವುದಿಲ್ಲಾ ಎಂಬ ಮಾಹಿತಿ ತಿಳಿಯಿತು. ಅವರಿಗೆ ಈ ಕಾರಣ ಹೇಳಿ ಖಾಸಗಿ ಕಂಪನಿ ಆಗಿದ್ದರಿಂದ ಈ ಜಮೀನನ್ನು ಅವರಿಗೆ ನೀಡುವುದು ಬೇಡ ಎಂಬ ಉದ್ದೇಶದಿಂದ ಅವರಿಗೆ ಸಹಕರಿಸಲಿಲ್ಲ.
ಕರ್ನಾಟಕ ರಾಜ್ಯ ಸರ್ಕಾರದ ಹಂತದಲ್ಲಿ ರೂ 1012.5 ಕೋಟಿ ವೆಚ್ಚದ ಸುಮಾರು 2730 ಜನರಿಗೆ ಉದ್ಯೋಗ ನೀಡುವ ಯೋಜನೆಗೆ ಈ ಕಂಪನಿಗೆ ಬೇರೆ ಅನುಮತಿ ನೀಡಿತು. ಅವರು ಪುನಃ ಬಂದು ಅವರು ಬಹಳ ಪ್ರಯತ್ನ ಪಟ್ಟರೂ ಪ್ರಯೋಜನ ಆಗಲಿಲ್ಲ. ಒಂದು ವೇಳೆ ಈ ಯೋಜನೆ ಅಲ್ಲಿ ಆಗಿದ್ದರೆ ಸುತ್ತಮತ್ತಲ ಗ್ರಾಮಗಳು ಗಬ್ಬುನಾಥ ಹೊಡೆಯುವ ಪ್ರಸಂಗ ಬರಿತಿತ್ತು.