TUMAKURU:SHAKTHIPEETA FOUNDATION
ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಎಸ್. ಮಲ್ಲಿಕಾರ್ಜುನಯ್ಯನವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ದಿ: 23.07.2007 ರಂದು ಪತ್ರ ಬರೆದು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನಿನಲ್ಲಿ ತುಮಕೂರು ವಿಶ್ವ ವಿದ್ಯಾಲಯ ಆರಂಭಿಸಲು ಮನವಿ ಮಾಡಲಾಯಿತು.
ನಿಟ್ಟೂರಿನ ಬಿಜೆಪಿ ಮುಖಂಡರುಗಳಾದ ಶ್ರೀ ಡಾ. ಚಂದ್ರಶೇಖರಾಚಾರ್ಯ, ಶ್ರೀ ಬಸವರಾಜ್, ಶ್ರೀ ಶೆಟ್ಟರು, ಶ್ರೀ ನಂದೀಶ್ ಸೇರಿದಂತೆ ಬಹಳಷ್ಟು ಜನ ಸಹ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ನಂತರ ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಶ್ರೀ ಅನಂತ ರಾಮಯ್ಯನವರು, ಪ್ರಜಾಪ್ರಗತಿ ಸಂಪಾದಕರಾದ ಶ್ರೀ ನಾಗಣ್ಣನವರು ಬಂದು ಸ್ಥಳ ವೀಕ್ಷಣೆ ಮಾಡಿದರು. ಇಷ್ಟು ವಿಶಾಲವಾದ ಇಂಥಹ ಪರಿಸರದ ಮಧ್ಯೆ ವಿಶ್ವವಿದ್ಯಾನಿಲಯಕ್ಕೆ ಹೇಳಿ ಮಾಡಿಸಿದ ಜಾಗ ಎಂದು ಬಂದರು.
ನಂತರ ತುಮಕೂರು ವಿಶ್ವವಿದ್ಯಾನಿಲಯವನ್ನು ಹಾಸನಕ್ಕೆ ಸ್ಥಳಾಂತರಿಸಲು ಪ್ರಕ್ರಿಯೇ ಆರಂಭವಾಗಿದ್ದನ್ನು ಮಾಜಿ ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಬಯಲಿಗೆಳೆದ ನಂತರ ಇಲ್ಲಿಗೆ ವಿಶ್ವವಿದ್ಯಾನಿಲಯ ಹೋಗುವುದು ಬೇಡ ಎಂಬ ಪರ-ವಿರೋಧಗಳು ಬಂದವು ನಾನು ಸಹ ಸುಮ್ಮನಾದೆ.