21st November 2024
Share
KUNDARANAHALLI RAMESH AND TEAM ARRESTED

TUMAKURU: SHAKTHIPEETA FOUNDATION

   ವಿಧಾನ ಪರಿಷತ್ ಸದಸ್ಯರಾಗಿದ್ದ ಶ್ರೀ ವಿ.ಎಸ್. ಉಗ್ರಪ್ಪನವರೊಂದಿಗೆ ಮಾತನಾಡಿ, ಈ ಜಮೀನನ್ನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಕೊಡಿಸುವ ಬಗ್ಗೆ ಪರಿಷತ್‌ನಲ್ಲಿ ಚರ್ಚಿಸಲು ಮನವಿ ಮಾಡಿದೆ. ನೋಡಿ ರಮೇಶ್ ಮೊದಲೇ ಹೇಳಿದರೆ ಪ್ರಶ್ನೆ ಹಾಕುತ್ತಿದ್ದೆ, ಈಗ ಒಂದು ಕೆಲಸ ಮಾಡು ಒಂದು ಸ್ಟ್ರೈಕ್ ಮಾಡಿ ಅರೆಸ್ಟ್ ಆಗಿ ಬಾ ತುರ್ತು ಅಂತ ಚರ್ಚೆಗೆ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

 ಸರಿ ನಾನು ಅಲ್ಲಿಂದಲೇ ಪೋನ್ ಮೂಲಕ ತುಮಕೂರಿನ ಬಹಳ ಸಂಘಟನೆಗಳ ಪದಾಧಿಕಾರಿಗಳಿಗೆ ವಿಷಯ ತಿಳಿಸಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡೋಣ, ಅರೆಸ್ಟ್ ಆಗೋಣ ಎಂದೆ ಎಲ್ಲರೂ ಜೈ ಎಂದರು. ಪತ್ರಿಕೆಯವರಿಗೂ ಮಾಹಿತಿ ರವಾನಿಸಿದೆ.

ದಿ: 11.04.2007 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಆರಂಭಿಸಲು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಆರಂಭವಾಯಿತು. ಇಬ್ಬರು ಮಾತ್ರ ಪೋಲೀಸ್ ಬಂದಿದ್ದರು. ನಾನು ಅರೆಸ್ಟ್ ಮಾಡ್ರಪ್ಪ ಎಂದರೆ, ಅವರು ಸಾರ್ ಸದನ ನಡೆಯುತ್ತಿದೆ ಈಗ ಅರೆಸ್ಟ್ ಮಾಡೋಕಾಗಲ್ಲ.

 ಸರಿ ನಾನು ಈಗ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗುತ್ತೇನೆ ಎಷ್ಟು ವರ್ಷ ಆಯಿತು ಇನ್ನೂ ಯೂನಿವರ್ಸಿಟಿಗೆ ಜಾಗ ಕೊಟ್ಟಿಲ್ಲ ಎಂದು ಅಬ್ಬರಿಸಿ ಒಳಕ್ಕೆ ನುಗ್ಗಲು ಪ್ರಯತ್ನಿಸಿದೆ. ಬಹಳ ಜನರು ಜಮಾಯಿಸಿದ್ದರು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತ ತಲುಪಿತು.

  ಡಿವೈಎಸ್‌ಪಿಯವರೇ ಖುದ್ದಾಗಿ ಬಂದರೂ, ಯಾರು ಏನೂ ಹೇಳಿದರೂ ನಾನು ಕೇಳುವ ಮನಸ್ಥಿತಿ ಇರಲಿಲ್ಲ, ಶ್ರೀ ಉಗ್ರಪ್ಪನವರಿಗೆ ಹೇಳಿ ಬಂದಿದ್ದೇ. ಇವರು ಏನೂ ಮಾಡಿದರು ಎಷ್ಟು ಬೈದರೂ ಜಪ್ಪಯ್ಯ ಅನ್ನಲಿಲ್ಲ. ಸರಿ ಎಲ್ಲಾ ಮಾತನಾಡಿಕೊಂಡು ನಾನು ಒಳಕ್ಕೆ ನುಗ್ಗುತ್ತೇನೆ ನೀವು ಸ್ವಲ್ಪ ಯಾರು ಜಾಸ್ತಿ ಜನ ಬರೋದು ಬೇಡ. ಜಿಲ್ಲಾಧಿಕಾರಿಗಳ ಕಚೇರಿ ಬಾಗಿಲುವರೆಗೂ ತಳ್ಳಿಕೊಂಡು ನುಗ್ಗಿದಾಗ ಅವರಿಗೂ ತಿಳಿಯಿತು, ಕೊನೆಗೂ ಅರೆಸ್ಟ್ ಮಾಡಿದರು.

  ಈ ಹೋರಾಟದಲ್ಲಿ ಶ್ರೀ ಪಾವಗಡ ಶ್ರೀರಾಮ್, ಶ್ರೀ ಹಾಲನೂರು ಲೇಪಾಕ್ಷ, ಶ್ರೀ ಶಂಕರ್, ಶ್ರೀ ದೀಪು, ಶ್ರೀ ಸಿದ್ಧು, ಶ್ರೀ ವೀರಭದ್ರಪ್ಪ, ಶ್ರೀ ವಿಶ್ವನಾಥ್ ಸೇರಿದಂತೆ ತುಮಕೂರು ನಗರದ ಹಲವಾರು ಸಂಘ ಸಂಸ್ಥೆಗಳು ಭಾಗವಹಿಸಿದ್ದವು.

 ಸರಿ ಬೆಳಿಗ್ಗೆ ಎಲ್ಲಾ ಪೇಪರ್ ತಗೊಂಡು ಬೆಂಗಳೂರಿಗೆ ಹೋದೆ, ರಾತ್ರಿ 9 ಘಂಟೆಗೆ ಶ್ರೀ ಉಗ್ರಪ್ಪನವರ ಬೇಟಿಯಾಯಿತು. ಸರಿ ಬೆಳಿಗ್ಗೆ 9 ಗಂಟೆಗೆ ಈ ಲೆಟರ್ ಟೈಪ್ ಮಾಡಿಸಿ, ಅವರ ಸೈನ್ ಹಾಕಿಸಿ ಪರಿಷತ್‌ಗೆ ಕೊಡಲು ಸೂಚಿಸಿದರು.

  ನಾನು ತುಮಕೂರಿಗೆ ಬರುವ ವೇಳೆಗೆ 12 ಗಂಟೆಯಾಯಿತು. ನನಗೆ ಟೈಪ್ ಮಾಡೋಕೆ ಬರುತ್ತಿರಲಿಲ್ಲ, ನಮ್ಮ ಮನೆಯವರನ್ನು ಎಬ್ಬಿರಿಸಿ ಟೈಪ್ ಮಾಡಿಸಿದೆ, ಬೆಳಿಗ್ಗೆ 4 ಗಂಟೆಗೆ ಎದ್ದು ರೆಡಿಯಾಗಿ ಬೆಂಗಳೂರಿಗೆ 6 ಗಂಟೆಗೆ ಶ್ರೀ ಉಗ್ರಪ್ಪನವರ ಮನೆಗೆ ಹೋಗಿ ಸೈನ್ ಹಾಕಿಸಿ, 9 ಗಂಟೆಗೆ ವಿಧಾನ ಪರಿಷತ್ ಬಾಗಿಲು ಕಾಯಲು ಆರಂಭಿಸಿದೆ. ಅಧಿಕಾರಿ ಬಂದ ತಕ್ಷಣ ಉಗ್ರಪ್ಪನವರು ಕಳುಹಿಸಿದರೂ ಅಂತ ಹೇಳಿಕೊಟ್ಟೆ ಸರಿ ಸಾರ್ ಸೇರ್ಪಡೆ ಮಾಡುತ್ತೇವೆ, ಈಗಾಗಲೇ ಪೋನ್ ಮಾಡಿ ಹೇಳಿದ್ದಾರೆ. ಅಂದಾಗ ನನಗೆ ಸಮಾದಾನ.

  ನಾನು ಏಕೆ ಇದನ್ನೆಲ್ಲಾ ಹೇಳಿದೆ ಅಂದರೆ ನಿಜವಾದ ಒಬ್ಬ ಹೋರಾಟಗಾರರಿಗೆ ಎಷ್ಟು ಕಷ್ಟ ಇರುತ್ತೆ. ಎಷ್ಟು ಜನರ ಸಹಕಾರ ಬೇಕು, ಮನೇಲಿ ಹೆಂಡತಿ ಮಕ್ಕಳಿಗೂ ತೊಂದರೆ ಕೊಟ್ಟುಕೊಂಡು, ಯಾವುದೋ ಕೆಲಸಕ್ಕೆ ಮನೆ ಮಠ ಬಿಟ್ಟು ಎಷ್ಟು ಶ್ರಮಿಸಬೇಕು ಎನ್ನುವ ಬಗ್ಗೆ ವಿಷಯ ಹಂಚಿಕೊಂಡಿದ್ದೇನೆ ಅಷ್ಟೆ.

  ಈ ಹಿನ್ನೆಲೆಯಲ್ಲಿ ದಿ: 13.04.2007 ರಂದು ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ  ಆಗಿನ  ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ವಿ.ಎಸ್. ಉಗ್ರಪ್ಪನವರು ಮತ್ತು ಶ್ರೀ ಹೆಚ್.ಎಸ್. ಶಿವಶಂಕರ್‌ರವರು ಮಾನ್ಯ ಸಭಾಪತಿಯವರಲ್ಲಿ  ಮನವಿ ಮಾಡಿ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿರುವ 792 ಎಕರೆ ಸರ್ಕಾರಿ ಭೂಮಿಯಲ್ಲಿ ತುಮಕೂರು ವಿಶ್ವವಿದ್ಯಾಲಯ ಆರಂಭಿಸಲು ಗಮನ ಸೆಳೆದಿರುವುದು ದಾಖಲೆಯಾಗಿದೆ.

  ದಿ: 24.03.2007 ರಂದು ಈ ಜಮೀನಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಆರಂಭಿಸಲು ಆಗಿನ ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಿ.ಹೆಚ್. ಶಂಕರಮೂರ್ತಿರವರಿಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಮನವಿ ಸಲ್ಲಿಸಲಾಯಿತು.