22nd November 2024
Share

TUMAKURU:SHAKTHIPEETA FOUNDATION

 ತುಮಕೂರಿನಲ್ಲಿ ಡಿಎಫ್ ಆಗಿದ್ದ ಶ್ರೀ ಗಾ.ನಂ. ಶ್ರೀಕಂಠಯ್ಯನವರು ಕರ್ನಾಟಕ ರಾಜ್ಯದ  ಆಯುಷ್ ಇಲಾಖೆಯ ನಿರ್ಧೇಶಕರಾಗಿದ್ದರು. ಒಂದು ದಿವಸ ಯಾವುದೋ ವಿಚಾರಕ್ಕಾಗಿ ತುಮಕೂರು ಜಿಲ್ಲೆಯ ಕಡತ ನೋಡುವಾಗ ಅಲ್ಲಿ ಅಭಿವೃದ್ಧಿ ವಿಷಯಕ್ಕಾಗಿ ಇಲಾಖೆಗೆ ನಾನು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಲೆಟರ್ ಬರೆದಿದ್ದು ಸಿಕ್ಕಿದೆ.

  ತಕ್ಷಣ ಅವರು ನನಗೆ ಫೋನ್ ಮಾಡಿ ಮಾತನಾಡಿದರೂ, ನಿಮ್ಮ ಊರಿನ ಬಳಿ ಜಾಗದಲ್ಲಿ ಏಕೆಆಯುಷ್ ಯೂನಿವರ್ಸಿಟಿ ಮಾಡಬಾರದು ಎಂಬ ಸಲಹೆ ನೀಡಿದರು. ನನಗೆ ಬಹಳ ಖುಷಿಯಾಯಿತು ಮೊದಲು ನೀವು ಬಂದು ಜಾಗ ನೋಡಿ ನಂತರ ಕಾರ್ಯಾರಂಭ ಮಾಡೋಣ ಸಾರ್ ಎಂದು ತಿಳಿಸಿದೆ.

  ನಾನು ಶ್ರೀ ಜಿ.ಎಸ್.ಬಸವರಾಜ್ರವರಿಗೆ ವಿಷಯ ತಿಳಿಸಿದೆ. ಅವರು ಸಹ ಒಳ್ಳೆಯ ಸಲಹೆ ಹೇಳಿ ಮಾಡಿಸಿದ ಜಾಗ ಪ್ರಸ್ತಾವನೆ ಸಲ್ಲಿಸಲು ಪ್ರಯತ್ನ ಮಾಡಬಹುದು ಎಂದು ತಿಳಿಸಿದರು. ನಂತರ ಶ್ರೀ ಗಾ.ನಂ. ಶ್ರೀಕಂಠಯ್ಯನವರು ಸ್ಥಳಕ್ಕೆ ಬಂದು ಪರಿಶೀಲಿಸಿದರು ಎಂಥಹ ಅದ್ಭುತವಾದ ಜಾಗ ರಮೇಶ್ ಅವರೇ   ನಾನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

 ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಡೈರೆಕ್ಟರ್ ಜನರಲ್ ಆಗಿದ್ದ ಶ್ರೀ ರಮೇಶ್ಬಾಬು ಮತ್ತು ಅವರ ತಂಡ ಸ್ಥಳಕ್ಕೆ ಬಂದು ಪರಿಶೀಲಿಸಿದರು. ಅವರು ಸಹ ಅಂತರ ರಾಷ್ಟ್ರೀಯ ಮಟ್ಟದಆಯುಷ್ ವಿಶ್ವವಿದ್ಯಾನಿಲಯ ಮತ್ತು ಆಯುಷ್ ಹೆಲ್ತ್ ಹಬ್ ಮಾಡಬಹುದು ಎಂದು ಹರ್ಷ ವ್ಯಕ್ತಪಡಿಸಿದರು.

  ನಾನು ನಂತರ ದೆಹಲಿಗೆ ಹೋಗಿ ಆಯುಷ್ ಇಲಾಖೆಯ ಕಚೇರಿಗೆ ಹೋಗಿ ಬಗ್ಗೆ ವಿಚಾರಿಸಿದಾಗ ಅವರು ವರ್ಗಾವಣೆಯಾಗಿ ಬೇರೆಯವರು ಬಂದಿದ್ದರು, ಅವರ ಬಳಿ ವಿಷಯ ಪ್ರಸ್ತಾಪಿಸಿದಾಗ ಆತ ಇಂಗು ತಿಂದ ಮಂಗನಹಾಗೆ ಮಾತನಾಡಿದರುಅವರ ಬಳಿಯೇ ಕೇಳಿ ಎನ್ನುವ ರೀತಿಯಲ್ಲಿ ಮಾತನಾಡಿದರು. ಯೂ ಆರ್ ಅನ್ಫಿಟ್ ಟು ದಿಸ್  ಪೋಸ್ಟ್ ಅಂತ ಹೇಳಿ ವಾಪಾಸ್ಸು ಬಂದೆ. ಯೋಜನೆಯೂ ನೆನೆಗುದಿಗೆ ಬಿತ್ತು.

  ನೋಡಿ ಒಬ್ಬ ರಾಜಕಾರಣಿ ಸೋತ ಮೇಲೆ ನಂತರ ಬಂದವರು ಹಿಂದಿನ ಯೋಜನೆಗಳಿಗೆ ವಿರೋಧ ಮಾಡುತ್ತಾರೆ. ಹಾಗೇಯೇ ಕೆಲವು ಅಧಿಕಾರಿಗಳು ಸಹ ಮಾಡುತ್ತಾರೆ. ಪುಣ್ಯಾತ್ಮ ಅವರ ಗುಂಪಿಗೆ ಸೇರಿದವರು.