5th December 2022
Share

TUMAKURU:SHAKTHIPEETA FOUNDATION

  ಬಿದರೆಹಳ್ಳ ಕಾವಲ್ ಜಮೀನನ್ನು ಮಠಗಳಿಗೆ ಕೊಡುತ್ತಾರೆ ಎಂಬ ಬಹಳ ಪುಕಾರು ಆಗಿಂದಾಗ್ಗೆ ಪ್ರಚಾರದಲ್ಲಿ ಇರುತ್ತಿತ್ತು. ವಕ್ಕಲಿಗರು ಮುಖ್ಯ ಮಂತ್ರಿಗಳಾಗಿದ್ದಾಗ ಶ್ರೀ ಚುಂಚನಗಿರಿ ಮಠದ ಹೆಸರು ಮತ್ತು ಲಿಂಗಾಯಿತರು ಮುಖ್ಯ ಮಂತ್ರಿಗಳಾಗಿದ್ದಾಗ ಶ್ರೀ ಸಿದ್ಧಗಂಗಾ ಮಠದ ಹೆಸರು ಮಂಚೂಣೆಯಲ್ಲಿ ಬರುತ್ತಿದ್ದವು.

   ಧರ್ಮಸ್ಥಳದವರಿಗೆ ನೀಡುತ್ತಾರೆ ಎಂಬ ಸುದ್ದಿ ಬಹಳವಾಗಿ ಹಬ್ಬಿತ್ತು, ಈ ಹಿನ್ನೆಲೆಯಲ್ಲಿ ನಾನು ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಪತ್ರ ಬರೆದೆ. ಅವರು ಉತ್ತರಿಸಿದ ಪತ್ರ ನೀವೇ ಓದಿ. ನಾನು ಯಾವ ಮಠದ ಅರ್ಜಿಯನ್ನು ಸಹ ಅಧೀಕೃತವಾಗಿ ಈವರೆಗೂ ನೋಡಿಲ್ಲ.

  ಒಮ್ಮೆ ಕಂಚಿ ಮಠದವರು ಅರ್ಜಿ ಹಾಕಿದ್ದಾರೆ ಎಂಬ ಸುದ್ದಿಯೂ ಇತ್ತು. ಈಗಲೂ ಉಳಿದ ಸರ್ಕಾರಿ ಜಮೀನಿಗೆ ಯಾರೋ ಅರ್ಜಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಹಿಂದಿನ ತಹಶೀಲ್ದಾರ್ ಜೊತೆ ಈ ಬಗ್ಗೆ ಮಾತನಾಡಿದ್ದೆ. ಯಾರೋ ಪುಣ್ಯಾತ್ಮ ಪ್ರಧಾನಿ ಶ್ರೀ ನರೇಂದ್ರಮೋದಿಯವರ ಸ್ನೇಹಿತ ಅಂತ ಬೇರೆ ಬಂದಿದ್ದರಂತೆ.

  ಗುಬ್ಬಿ ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು ಕೈಗಾರಿಕಾ ಉದ್ದೇಶಕ್ಕೆ ಉಳಿದ ಸರ್ಕಾರಿ ಜಮೀನಿನನ್ನು ನೀಡಲು ಸಚಿವರಾಗಿದ್ದಾಗಲೇ ಪತ್ರ ಬರೆದಿದ್ದಾರೆ. ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರು ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಸರ್ಕಾರಿ ಉದ್ದೇಶಗಳಿಗೆ ಮೀಸಲಿಡಲು ಸೂಚಿಸಿದ್ದಾರೆ.