21st September 2023
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ, ನಂತರ ಎಪಿಎಂಸಿ ನಿರ್ಧೇಶಕರಾದ ಶ್ರೀ ಡಾ.ಸಿ.ಸೋಮಶೇಖರ್ ರವರು  ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಮಾತನಾಡಿ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಜಮೀನಿನನಲ್ಲಿ ಕೊಕೊನಟ್ ಪಾರ್ಕ್  ಮಾಡುವುದಾಗಿ ತಿಳಿಸಿದ್ದಾರೆ.

 ಎಂಪಿಯವರು ನನಗೆ ಮಾತನಾಡಿ ನೋಡಪ್ಪ ನಿನ್ನ ಫ್ರೆಂಡ್ ಡಿಸಿ ಸೋಮಶೇಖರ್ ಮಾತನಾಡಿದ್ದರು, ನಿಮ್ಮೂರಿನಲ್ಲಿ ಕೊಕೊನಟ್ ಪಾರ್ಕ್  ಮಾಡುತ್ತಾರಂತೆ ಹೋಗಿ ಮಾತನಾಡು ಅಂದ್ರು. ನಾನು ಇದು ಆಗಲ್ಲ ಬಿಡಿ ಎಂದೆ, ಏಕೆ ಅಂದ್ರು, ತಿಪಟೂರಿನಲ್ಲಿ ಶ್ರೀ ನಾಗೇಶ್‌ರವರು ಮಾಡಲು ಸಜ್ಜಾಗಿದ್ದಾರೆ ನನಗೆ ಗೊತ್ತು ಎಂದೆ.

 ಅವರೇ ಫೋನ್ ಮಾಡಿದ್ದಾರೆ, ನಾನು ನಿನ್ನ ಕಳುಹಿಸುತ್ತೇನೆ ಅಂದಿದ್ದೇನೆ ಮಾತನಾಡು ಅಂದ್ರು. ಪುನಃ ನಾನು ಶ್ರೀ ಡಾ.ಸಿ.ಸೋಮಶೇಖರ್ ರವರ ಕಚೇರಿಗೆ ಹೋದೆ, ವಿವರ ನೀಡಿದೆ ಅವರು ಎಲ್ಲಾ ಟೈಪ್ ಮಾಡಿಸಿ ಗುಬ್ಬಿ ಅಥವಾ ತಿಪಟೂರು ಅಂತ ಸೇರಿಸಿದರೂ, ಆದರೂ ಮುಂಗಡ ಪತ್ರದಲ್ಲಿ ತಿಪಟೂರಿನಲ್ಲಿ ಕೋಕೊನಟ್ ಪಾರ್ಕ್ ಅಂತ ಬಂತು. ಅವರು ಯಾಕೋ ಮಾಡಲಿಲ್ಲ. ಈ ವರ್ಷವೂ ಪುನಃ ಆಯವ್ಯಯದಲ್ಲಿ ಬಂದಿದೆ ಏನು ಮಾಡುತ್ತಾರೋ ನೋಡೋಣ.