31st March 2023
Share

TUMAKURU:SHAKTHI PEETA FOUNDATION

  ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಕೈಗಾರಿಕಾ ವಸಾಹತು ಬಗ್ಗೆ ಯಾವ ಕೈಗಾರಿಕೆಗಳಿಗೆ ಆಧ್ಯತೆ ನೀಡಬೇಕು ಎಂಬ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಎಸ್.ಸುರೇಶ್ ಕುಮಾರ್ ರವರಿಗೆ ಪತ್ರ ಬರೆದಿದ್ದೆ.

  ಒಂದು ದಿವಸ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ಧೇಶಕರು ಫೋನ್ ಮಾಡಿ ಸಾರ್ ನಿಮ್ಮೂರಿಗೆ ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಒಂದು ಯೋಜನೆ ಅಪ್ರೂವ್ ಆಗಿದೆ. ನಿಮಗೆ ಗೊತ್ತಿಲ್ಲವಾ ಸಾರ್ ಅಂದ್ರು ನನಗೆ ಶಾಕ್ ಯಾವ ಯೋಜನೆ ಅಂದಾಗ ಮೈನ್ಸ್ ಯೋಜನೆ ಅಂದ್ರು, ನನಗೆ ನೀವೂ ಈಗ್ಯಾಕೆ ಹೇಳ್ತಾ ಇದ್ದೀರಿ ಅಂದೆ. ಸುರೇಶ್ ಕುಮಾರ್ ರವರಿಗೆ ನೀವೂ ಬರೆದ ಪತ್ರ ಬಂದಿತ್ತು ಅದಕ್ಕೆ ಹೇಳಿದೆ ಸಾರ್.

ನಾನು ತಕ್ಷಣ ಶ್ರೀ ಟಿ.ಆರ್.ರಘೋತ್ತಮರಾವ್ ಅವರಿಗೆ ಫೋನ್ ಮಾಡಿದೆ, ಅವರು ನೋಡಿ ಹೇಳ್ತೀನಿ ಅಂದ್ರು, ನಾನು ಹೊರಗಡೆ ಇದ್ದೆ ಸುಮ್ಮನಾದೆ.