22nd December 2024
Share

TUMAKURU:SHAKTHIPEETA FOUNDATION

     ಮೂಲಭೂತ ಸೌಕರ್ಯ ಇಲಾಖೆಯಿಂದ ತುಮಕೂರಿನ ದೊಡ್ಡೇರಿ ಬಳಿ ಅನಿಲ ಆಧಾರಿತ ವಿದ್ಯುತ್ ಘಟಕ ಆರಂಭಿಸಲು ಕಾಲ್ಪನಿಕ /ಫಿಸಿಬಿಲಿಟಿ ವರದಿಯನ್ನು ತಯಾರಿಸಲಾಗಿತ್ತು. ನಮ್ಮ ಶ್ರೀ ಟಿ.ಆರ್.ರಘೊತ್ತಮರಾವ್‌ರವರು ಈ ಯೋಜನೆಯನ್ನು ಬಿದರೆಹಳ್ಳಕಾವಲ್ ಜಮೀನಿಗೆ ಏಕೆ ತೆಗೆದುಕೊಂಡು ಹೋಗಬಾರದು ಎಂದು ಹುಳು ಬಿಟ್ಟರು.

  ಶ್ರೀ ಜಿ.ಎಸ್.ಬಸವರಾಜ್‌ರವರನ್ನು ಕೇಳಿದೆ ಅವರು ಅಲ್ಲಿ ಎನಾದರೂ ಮಾಡುವರೆಗೂ ನಿನಗೆ ಮುಕ್ತಿ ಸಿಗಲ್ಲ ಪ್ರಯತ್ನ ಮಾಡು ಎಂದು ಕಿಚಾಯಿಸಿದರು.  ರಾಜ್ಯ ಸರ್ಕಾರದ ಇಂಧನ ಸಚಿವಾಲಯಕ್ಕೆ ಭೇಟಿ ನೀಡಿದಾಗ ಕೇಂದ್ರ ಸರ್ಕಾರದ ಪಿಜಿಸಿಎಲ್ ವತಿಯಿಂದ ದಾಬೋಲ್‌ನಿಂದ ಬೆಂಗಳೂರುವರೆಗೆ ಅನಿಲ ಕೊಳವೆ ಮಾರ್ಗಗಳನ್ನು ನಿರ್ಮಿಸಿರುವುದರಿಂದ ರಾಜ್ಯದ ನಾಲ್ಕು ಕಡೆ ಬೆಳಗಾಂ, ಗದಗ್, ಚಳ್ಳಕೆರೆ ಮತ್ತು ತುಮಕೂರಿನಲ್ಲಿ ಅನಿಲ ಆಧಾರಿತ ವಿದ್ಯುತ್ ಘಟಕಗಳನ್ನು ಮಾಡಲು ದಿನಾಂಕ:24.07.2009 ರಂದು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು, ಈ ನಕಲು ಸಿಕ್ಕಿತು.

  ಅಲ್ಲಿಂದ ಪಿಸಿಕೆಎಲ್‌ಗೆ ಭೇಟಿ ನೀಡಿದಾಗ ನಮ್ಮ ಜಿಲ್ಲೆಯವರೇ ಆದ ಮುಖ್ಯ ಇಂಜಿನಿಯರ್ ಶ್ರೀ ಲಕ್ಷ್ಮಣ್ರವರು ಇದ್ದರು. ಹೇಮಾವತಿ ನೀರು ಕೊಡಿಸಿದರೆ ಎಂಪಿಯವರು ಮನಸ್ಸು ಮಾಡಿದರೇ ಗ್ಯಾರಂಟಿ ಮಾಡಬಹುದು. ಮಾರ್ಚ್ 31 ರೊಳಗೆ ಸುಮಾರು 2000 ಮೆಘಾವ್ಯಾಟ್ ಯೋಜನೆಗೆ ಶಂಕುಸ್ಥಾಪನೆಯನ್ನು NTPC/PCKL ವತಿಯಿಂದ ಮಾಡಬಹುದು ಹಣ ರೆಡಿಯಿದೆ  ಎಂಬ ಮಾಹಿತಿ ನೀಡಿದರು.

 ಹೇಮಾವತಿ ನೀರು ಪಡೆಯಲು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಲು ಅವರಿಗೆ ಹೇಳಿದಾಗ ಅವರು ಬರೆದರು. ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ನಾನು ಸುಮಾರು 25 ಭಾರಿ ಜಲಸಂಪನ್ಮೂಲ ಸಚಿವರಾದ ಶ್ರೀ ಬಸವರಾಜ್ ಬೊಮ್ಮಾಯಿರವರನ್ನು ಭೇಟಿ ಮಾಡಿದರೂ ಅವರು ನೀರಿಗೆ ಆದೇಶ ಮಾಡಲಿಲ್ಲ.

 ಅವರ ಉದ್ದೇಶ ಇವರಿಗೆ ನೀರು ಕೊಟ್ಟರೆ ಮೊದಲ ಯೋಜನೆಯನ್ನು ಇವರು ಮಾಡಿಸುತ್ತಾರೆ. ಉತ್ತರ ಕರ್ನಾಟಕದ ಯೋಜನೆ ನೆನೆಗುದಿಗೆ ಬೀಳಲಿದೆ ಎಂಬುದಾಗಿತ್ತು. ಅವರು ನೇರವಾಗಿ ಒಂದು ದಿವಸ ಹೇಳಿಯೇ ಬಿಟ್ಟರು ಏನಣ್ಣಾ ಬಸಣ್ಣ ಎಲ್ಲಾ ನಿಮ್ಮೂರಿಗೆ ಆಗಬೇಕಾ? ನಮಗೇನು ಬ್ಯಾಡವಾ? ಅಂದ್ರು ಸರಿ ಈ ವಿಷಯ ಮೊದಲೇ ಹೇಳಿದ್ದರೆ ಏನಾಗುತಿತ್ತು. ಆಯಿತು ನೀವೇ ಮಾಡಿಕೊಳ್ಳಿ ಎಂದು ಹೇಳಿ ಬಂದೆವು. 

 ಇಂಧನ ಸಚಿವರಾದ ಕು! ಶೋಭಾಕರಂದ್ಲಾಜೆಯವರ ಬಳಿ ಶ್ರೀ ಜಿ.ಎಸ್.ಬಸವರಾಜ್‌ರವರು, ಶ್ರೀ ಟಿ.ಆರ್.ರಘೊತ್ತಮರಾವ್‌ರವರು ಮತ್ತು ನಾನು ಹೋದೆವು. ಅವರು ಇನ್ನೂ ಬಹಳ ಲೇಟ್ ಆಗುತ್ತೆ ಅಣ್ಣ ದರ ನಿಗದಿಯಾಗಿಲ್ಲ ಎಂದರು, ಎಂಪಿಯವರು ಇವರೆಲ್ಲಾ ಮಾತಾಡಿಕೊಂಡಿದ್ದಾರೆ ಇದು ಆಗಲ್ಲ, ಬೇರೆ ಯೋಜನೆ ಹುಡುಕಿ ಎಂದರು. ಅಲ್ಲಿಗೆ ಈ ಯೋಜನೆಯ ಕನಸು ನೆನೆಗುದಿಗೆ ಬಿತ್ತು. ಈಗಲೂ ಯಾರಾದರೂ ಪ್ರಯತ್ನ ಮಾಡಿದರೆ ಯೋಜನೆ ಮಾಡಬಹುದು.

  NTPC/PCKL ಪಧಾದಿಕಾರಿಗಳು ಬಂದು ಸ್ಥಳ ಪರಿಶೀಲಿಸಿ ಒಪ್ಪಿಗೆಯನ್ನು ಸೂಚಿಸಿದರು, ಕೇಂದ್ರ ಸರ್ಕಾರದಲ್ಲಿ ಮಾರ್ಚ್ 31 ರ  ನಂತರ ಹೊಸ ಕಾನೂನು ಜಾರಿಯಾಗುವ ವೇಳೆಗೆ ನಾವು ಘಟಕ ಆರಂಭ ಮಾಡಲೇ ಬೇಕು, ನೀರು ಮತ್ತು ಜಮೀನು ಕೊಡಿಸಿ ಎಂದು ದುಂಬಾಲು ಬಿದ್ದರೂ, ಕೇಂದ್ರ ಸರ್ಕಾರದ ಯೋಜನೆಯಾದರೂ ಪ್ರಯೋಜನವಾಗಲಿಲ್ಲ.

NTPC : National Thermal Power Corporation Ltd

PCKL : ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್: