22nd December 2024
Share

TUMAKURU:SHAKTHIPEETA FOUNDATION

  ಗುಬ್ಬಿ ತಾಲ್ಲೂಕು ಬಿದರೆಹಳ್ಳ ಅಮೃತ್ ಮಹಲ್ ಕಾವಲ್‌ನಲ್ಲಿ ಈ ಕಬ್ಬಿಣದ  ಕೈಗಾರಿಕೆ ಆರಂಭವಾಗಿದ್ದರೆ ಅದಕ್ಕಿಂತ ಹೇಯಕೃತ್ಯ ಇನ್ನೊಂದಿರಲಿಲ್ಲ. ಇದರ ಇತಿಹಾಸವನ್ನು ಈಗ ಹೇಳುವುದು ಅಗತ್ಯವಿಲ್ಲ, ಈ ಯೋಜನೆ ರದ್ದಾಗಿದೆ. ಈ ಯೋಜನೆಯ ಹಿಂದೆ ಇರುವ ಲಾಭಿ ನಿಜಕ್ಕೂ ಅದ್ಭುತವಾಗಿದೆ.

  ಈ ಯೋಜನೆಯನ್ನು ಮೊದಲು ವಿರೋಧ ಮಾಡಿದ್ದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕುಂದರನಹಳ್ಳಿಯ ನಮ್ಮ ಮನೆಯ ಒಂದು ಸಭೆಯಲ್ಲಿ ಭಾಗವಹಿಸಿದ್ಧ ನೀರಾವರಿ ತಜ್ಞ ಶ್ರೀ ಜಿ.ಎಸ್.ಪರಮಶಿವಯ್ಯನವರು, ಸಾಹಿತಿ ಶ್ರೀ ಕವಿತಾಕೃಷ್ಣರವರು, ಶ್ರೀ ಟಿ.ಆರ್ ರಘೋತ್ತಮರಾವ್‌ರವರು ಇನ್ನೂ ಮುಂತಾದವರೂ ಭಾಗವಹಿಸಿದ್ದ ಸಭೆಯಲ್ಲಿ ವಿರೋಧ ಮಾಡಿದಾಗ ಗುಬ್ಬಿಯ ಕೆಲವು ಮಹಾನ್ ನಾಯಕರುಗಳು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಗುಬ್ಬಿಯ ಯೋಜನೆ ಬಗ್ಗೆ ಏಕೆ ಮಾತನಾಡಬೇಕು ಎಂದು ಹೇಳಿಕೆ ನೀಡಿದ್ದು ಹಾಸ್ಯಾಸ್ಪದ ಮತ್ತು ಇತಿಹಾಸ.

  ಶ್ರೀ ಜಿ.ಎಸ್.ಬಸವರಾಜ್‌ರವರು ಪ್ರಭಲ ವಿರೋಧ ಮಾಡಿ ಈ ಯೋಜನೆಯನ್ನು ರದ್ಧುಗೊಳಿಸುವ ಮೂಲಕ ಈ ಭಾಗದ ರೈತರ ಜೀವನ ಉಳಿಸಿದ್ದಾರೆ. ಇಡೀ ಜೀವಮಾನವೆಲ್ಲಾ ಕಬ್ಬಿಣದ ಅಧಿರಿನ ಧೂಳು ಕುಡಿಯುವ ನರಕವನ್ನು ತಪ್ಪಿಸಿದ್ದಾರೆ.

ಪಾಪಿಗಳು??? ಹೆಂಜಲು ಕಾಸಿಗೆ ಏನುಬೇಕಾದರೂ ಮಾಡುತ್ತಾರೆ.