12th September 2024
Share

TUMAKURU:SHAKTHIPEETA FOUNDATION

  ಹೆಲಿಕ್ಯಾಪ್ಟರ್ ತಯಾರಿಕ ಘಟಕ ಗುಬ್ಬಿಗೆ ತಾನಾಗಿ ಬರಲಿಲ್ಲ, ಅನಧಿಕೃತವಾಗಿ ಒಂದು ತರಹ ಬೃಹತ್ ಕಾಂಫಿಟೇಷನ್ ಏರ್ಪಟ್ಟಿದ್ದು ಇತಿಹಾಸ, ಕೇಂದ್ರದಲ್ಲಿ ಯುಪಿಎ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸರ್ಕಾರಗಳ ಅವಧಿಯಲ್ಲಿ ಹೆಚ್.ಎ.ಎಲ್ ಘಟಕ ತರಲು ಹೋರಾಡಿದ  ’ಶ್ರೀ ಜಿ.ಎಸ್.ಬಸವರಾಜ್ ರವರು ಬಿಜೆಪಿಯಲ್ಲಿ ಗೆದ್ದು, ಕೆಜೆಪಿಗೆ ಬೆಂಬಲಿಸಿ, ನಂತರ ಕಾಂಗ್ರೆಸ್‌ಗೆ ಒಂದು ಕಾಲಿಟ್ಟ ವಿಚಿತ್ರವಾದ ಸಂದರ್ಭದಲ್ಲಿ ಘಟಕ ಮಂಜೂರು ಮಾಡಿಸಿದ್ದು’ ನಿಜಕ್ಕೂ ಅದ್ಭುತ.

ಹೆಚ್.ಎ.ಎಲ್ ಘಟಕ ಪಡೆಯಲು ಶ್ರಮಿಸಿದ ಘಟಾನುಘಟಿ ನಾಯಕರುಗಳು

  1. ಗುಜರಾತ್ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  2. ತಮಿಳುನಾಡು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಕು.ಜಯಲಲಿತರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  3. ಆಂಧ್ರ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಎಂ.ಪಲ್ಲಂರಾಜುರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  4. ಗೋವಾ ರಾಜ್ಯದ ಕೇಂದ್ರ ರಕ್ಷಣಾ ಸಚಿವರಾದ ಮಾನ್ಯ  ಶ್ರೀ ಮನೋಹರ್ ಪರಿಕ್ಕರ್‌ವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  5. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನಾವು ಶಿವಮೊಗ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  6. ಕರ್ನಾಟಕ ರಾಜ್ಯದ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎನ್.ಧರ್ಮಸಿಂಗ್ ರವರು ನಾವು ಬೀದರ್‌ನಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  7. ಕರ್ನಾಟಕ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಮಲ್ಲಿಕಾರ್ಜುನ್ ಖರ್ಗೆರವರು ನಾವು ಗುಲ್ಬರ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  8. ಕರ್ನಾಟಕ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಟಿ.ಬಿ.ಜಯಚಂದ್ರರವರು ನಾವು ಶಿರಾದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.
  9. ಕರ್ನಾಟಕ ರಾಜ್ಯದ ತುಮಕೂರು ಲೋಕಸಭಾ ಸದಸ್ಯರಾದ ಮಾನ್ಯ  ಶ್ರೀ ಜಿ.ಎಸ್.ಬಸವರಾಜ್ ರವರು ನಾವು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ  ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ.