22nd December 2024
Share

TUMAKURU:SHAKTHIPEETA FOUNDATION

  2009 ರ ಲೋಕಸಭಾ ಚುನಾವಣೆಯಲ್ಲಿ  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ಬಿಡುಗಡೆ ಮಾಡಿದ್ದ ಮತದಾರರ ಪ್ರಣಾಳಿಕೆಯ ಅಂಶದಲ್ಲಿನ ಪ್ರತಿಯೊಂದು ವಿಚಾರಗಳ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಗಳಿಗೆ (ಫೋರಂ ವತಿಯಿಂದ ಸಿದ್ಧಪಡಿಸಲಾಗಿತ್ತು) ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ (ಶ್ರೀ.ಟಿ.ಆರ್. ರಘೋತ್ತಮರಾವ್‌ರವರು ಸಿದ್ಧಪಡಿಸಿದ್ದರು) ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಂದ ವಿವಿಧ ಇಲಾಖೆಗಳಿಗೆ ಪತ್ರ ಬರೆಸಲಾಗಿತ್ತು. ಈ ಪ್ರಕಾರ ಕೇಂದ್ರ ರಕ್ಷಣಾ ಸಚಿವರಿಗೆ ಶ್ರೀ ಜಿ.ಎಸ್.ಬಸವರಾಜ್‌ರವರಿಂದ ಮನವಿ ಸಲ್ಲಿಸಲಾಗಿತ್ತು.

  ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಪ್ರತಿಯೊಂದು ವಿಚಾರಗಳ ಬಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ರವರಿಂದ (ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ಡಾ.ಎ.ಆರ್. ಮಂಜುನಾಥ್‌ರವರು ಸ್ವಯಂ ಪ್ರೇರಣೆಯಿಂದ ಸಿದ್ಧಪಡಿಸಿದ್ದರು) ಪತ್ರ ಬರೆಯಲಾಗಿತ್ತು. ಸಚಿವರು ಕೇಂದ್ರ ಸರ್ಕಾರದ ರಕ್ಷಣಾ ಸಚಿವರಿಗೆ ಪತ್ರ ಬರೆಯಲಿಲ್ಲ. ಮಾನ್ಯ ಮುಖ್ಯಮಂತ್ರಿಗಳಿಂದ ಬರೆಸಲು ತಿರ್ಮಾನಿಸಿದೆವು.  

  ನಂತರ  ಗುಬ್ಬಿ ತಾಲ್ಲೂಕು ಬಿದರೆಹಳ್ಳ ಅಮೃತ್ ಮಹಲ್ ಕಾವಲ್‌ಗೆ ಮಂಜೂರಾಗಿದ್ದ ಪಿಎಂಬಿ ಮೆಟಾಲಿಕ್ ಪ್ರೈವೇಟ್ ಲಿಮಿಟೆಡ್‌ನ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಕರ್ನಾಟಕ ರಾಜ್ಯ ಉದ್ಯೋಗ ಮಿತ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಒಂದು ಮಿನಿ ಕುರುಕ್ಷೇತ್ರ’ ನಡೆದು ಹೋಯಿತು.

   ಕರ್ನಾಟಕ ರಾಜ್ಯ ಉದ್ಯೋಗ ಮಿತ್ರದಲ್ಲಿ ಒಂದೊಂದು ಸೆಕ್ಟರ್‌ಗೂ ಒಬ್ಬೊಬ್ಬ ಅಧಿಕಾರಿಗಳು ಇರುತ್ತಾರೆ. ನಾನು ಭೇಟಿ ಕೊಟ್ಟಾಗ ಪಿಎಂಬಿ ಮೆಟಾಲಿಕ್‌ಗೆ ಸಂಬಂಧಿಸಿದ ಅಧಿಕಾರಿ ನನಗೆ ಸಿಗಲಿಲ್ಲ. ಆದರೆ ಇಬ್ಬರು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದೆ. ಒಬ್ಬರು ಏರೋಸ್ಪೇಸ್ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ಗಂಗಾಧರಯ್ಯನವರು, ಇವರು ತುಮಕೂರು ಜಿಲ್ಲೆಯವರೇ, ಇನ್ನೊಬ್ಬರು ಇಂಧನ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ಶಶಿಧರ್‌ರವರು.

   ಅಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವರಿಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಈಗಾಗಲೇ ಪತ್ರ ಬರೆದಿದ್ದಾರೆ, ನಾವು ರಕ್ಷಣಾ ಇಲಾಖೆಯ ಯಾವುದಾದರೂ ಒಂದು ಯೋಜನೆ ಮಂಜೂರು ಮಾಡಿಸಬೇಕು. ನೋಡಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇವೆ ಎಂದು ಮತದಾರರ ಪ್ರಣಾಳಿಕೆ ನೀಡಿದೆ. ಸರ್ಕಾರಿ ಜಾಗ ಖಾಸಗಿಯವರಿಗೂ ನೀಡುವುದು ಸೂಕ್ತವಲ್ಲ. ಜಮೀನು ಎಂಥಹ ಪರಿಸರದಲ್ಲಿದೆ ಎಂದರೆ ನೋಡಲು ಖುಷಿಯಾಗುತ್ತಿದೆ. ಎಜುಕೇಷನ್ ಹಬ್ ಮತ್ತು ಹೆಲ್ತ್ ಹಬ್’ ಮಾಡಲು ಸೂಕ್ತ ಜಾಗ ಎಂದು ಹೇಳಿದೆ.

  ಅಲ್ಲಿ ಏರೋಸ್ಪೇಸ್ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ಗಂಗಾಧರಯ್ಯನವರ ಅಮೃತವಾಣಿಯಿಂದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಸ್ಥಾಪಿಸಲು ಜಮೀನು ಹುಡುಕುತ್ತಿದ್ದಾರೆ ಎಂಬ ಮಹತ್ತರವಾದ ಮಾಹಿತಿ ದೊರಕಿತು.

   ತಕ್ಷಣದಿಂದ ಬಿದರೆಹಳ್ಳ ಅಮೃತ ಮಹಲ್ ಕಾವಲ್‌ಗೆ ಶುಕ್ರ ದೆಸೆ ಆರಂಭವಾಯಿತು. ’ಸೈನಿಕರ ದೇವಾಲಯ’ ನಿರ್ಮಾಣ ಮಾಡಲು ವೇದಿಕೆ ಸಜ್ಜಾಯಿತು.

     ಜೊತೆಗೆ ಈ ವಿಭಾಗದ ಕೆಲಸದ ಹೊಣೆಗಾರಿಕೆ ಇವರದಾಗಿತ್ತು. ಇವರು ಶ್ರೀ ಜಿ.ಎಸ್.ಬಸವರಾಜ್ ರವರ ತೋಟದಲ್ಲಿ ‘ತೆಂಗಿನ ಸೊಸಿ ಮತ್ತು ಹಲಸಿನ ಸೊಸಿ ತೆಗೆದು ಕೊಂಡು’ಹೋಗಿದ್ದು, ಎಂಪಿಯವರ ಮಾವನವರಾದ ಶ್ರೀ ಶಿವಣ್ಣವರ ಶಿಸ್ತು, ನಾನು ಸಹ ಅವರ ಮತದಾರರ ಕ್ಷೇತ್ರದವರು ಎಂಬ ಮಾಹಿತಿ ತಿಳಿದು ನನಗೂ ಖುಷಿಯಾಯಿತು.