16th September 2024
Share

 TUMAKURU:SHAKTHIPEETA FOUNDATION

  ಮಾಜಿ ಸಚಿವರು ಹಾಗೂ ಗುಬ್ಬಿ ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್. ಶ್ರೀನಿವಾಸ್ರವರು ಬಿದರೆಹಳ್ಳಕಾವಲ್ನಲ್ಲಿ ಯಾವುದಾದರೂ ಯೋಜನೆ ಬರಲಿದೆ ಎಂದು ನನ್ನ ಸ್ಟೇಟ್ ಮಾಧ್ಯಮದಲ್ಲಿ ಬಂದರೆ ಅವರು ಅಥವಾ ಅವರ ಪಕ್ಷದ ಹೊಸಕೆರೆ ರೇಣುಕಾರಾಧ್ಯರವರು ಮತ್ತು ಇತರೆಯವರು ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲಾ ಎಂದು ಸ್ಟೇಟ್ ಮೆಂಟ್ ಮಾಡುವುದು ಸಾಮಾನ್ಯವಾಗಿತ್ತು.

  ಒಂದು ದಿವಸ ಹೊಯ್ಸಳ ಹೋಟೆಲ್ ಮುಂದೆ ಅಕ್ಮಾತ್ ಆಗಿ ಎದುರು ಬದುರು ಆದೇವು. ನಾನು ನಮಸ್ಕಾರ ಸಾರ್ ಅಂದೆ ತಕ್ಷಣ ಅವರು ಅದೇನೋ ಮಾಡುತ್ತಿನಿ ಅಂತಿದ್ದಲ್ಲಾ ಎಲ್ಲಿಗೆ ಬಂತು ಅಂದ್ರು. ಯಾವ ವಿಚಾರ ಸಾರ್ ಅಂದೆ ಅವರು ಅದೇ ಬಿ.ಹೆಚ್.ರಸ್ತೆ ಎಂದರು.

  ಅದು ಬಿಡಿ ಸಾರ್ ಮೊದಲು ಬಿದರೆಹಳ್ಳಕಾವಲ್ ಬಗ್ಗೆ ಹೇಳಿ ಅಂದೆ. ಅದೇನೋ ಅದು ಮಾಡ್ತಿನಿ, ಇದು ಮಾಡ್ತಿನಿ ಅಂತಿಯಾ ಒಂದು ಆಗಲಿಲ್ಲ, ಅಂದಾಗ ನೀವು ಬಿಡಬೇಕಲ್ಲಾ ವಿರುದ್ಧ ಸ್ಟೇಟ್ ಮೆಂಟ್ ಮಾಡ್ತೀರಾ ಅಂದೆ. ನೋಡಪ್ಪಾ ನನಗೆ ಓಟು ಬೇಕು, ನಾನು ಹೇಳ್ತನಿ ನೀವು ಮಾಡೊದು ಮಾಡಿ ಅಂದ್ರು ಅಷ್ಟರ ವೇಳೆಗೆ ಯಾರ್ಯಾರೊ ಬಂದ್ರು ವಿಷಯ ಬದಲಾಯಿತು.

  ಜಿಲ್ಲಾಧಿಕಾರಿ ಮತ್ತು ನನಗೂ ಜಗಳ ಆದ ಮೇಲೆ ಬಿದರೆಹಳ್ಳಕಾವಲ್ನಲ್ಲಿ ರೈತರ ಸಭೆ ಮಾಡಲು ಶ್ರೀ ಜಿ.ಎಸ್.ಬಸವರಾಜ್ರವರು ತಿರ್ಮಾನ ಮಾಡಿದರು. ಎಂಪಿಯವರು ದೆಹಲಿಯಲ್ಲಿದ್ದರು ನಾನು ಫೋನ್ ಮಾಡಿ ಸಾರ್ ಇವತ್ತು ಗುಬ್ಬಿ ಎಂಎಲ್ ಭೇಟಿ ಮಾಡುತ್ತೇನೆ ಎಂದೆ. ಯಾಕೆ ಅಂದ್ರು ಬಿದರೆಹಳ್ಳಕಾವಲ್ ಸಭೆಯ ಬಗ್ಗೆ ಮಾತಾಡಲು ಅಂದೆ. ನೀನು ಮಾಡಿದ್ದಕ್ಕೆಲ್ಲಾ ಪತ್ರಿಕೆಯಲ್ಲಿ ವಿರುದ್ಧ ಹೇಳಿಕೆ ಇರುತ್ತೆ ಬೇಡ ಬಿಡು ಒಬ್ಬೊರಿಗೊಬ್ಬರು ಕಿತ್ತಾಡಿರಾ? ಅಂದಾಗ ಇಲ್ಲ ಹೋಗಿ ಭೇಟಿಯಾಗಿ ಬರುತ್ತೇನೆ ಎಂದು ಹೇಳಿದೆ.

  ಕಾವೇರಿ ಸರ್ವಿಸ್ ಸ್ಟೇಷನ್ ಶ್ರೀ ಲೋಕೇಶ್ರವರು ಮತ್ತು ಹೊದಲೂರು ಶ್ರೀ ವಿಜಯಕುಮಾರ್ರವರಿಗೆ ಫೋನ್ ಮಾಡಿ ನಾಳೆ ಶಾಸಕರನ್ನು ಭೇಟಿ ಮಾಡಬೇಕು ಬರುತ್ತೇನೆ ಬೆಳಿಗ್ಗೆ ಎಲ್ಲಿಗೆ ಬರಲಿ ಹೇಳಿ ಅಂದಾಗ ಇಬ್ಬರೂ ಸಹ ಸ್ಟೇಡಿಯಂ ಬಳಿ ಬರಲು ತಿಳಿಸಿದರು.

  ಸಾಯಂಕಾಲ ಎಂಪಿಯವರು ಮತ್ತೇ ಫೋನ್ ಮಾಡಿದರು, ಡಿಸಿಗೆ ಮಿಟಿಂಗ್ಗೆ ಎಂ.ಎಲ್.  ಕರೆಯೋಕೆ ಹೇಳಿದಿನೆ ಕಣಯ್ಯಾ, ಅವರ ಅಧ್ಯಕ್ಷತೆಯಲ್ಲಿ ಸಭೆ ಆಗಲಿ ಅಂದ್ರು, ಒಳ್ಳೆ ಕೆಲಸ ಆಯಿತು ಬಿಡಿ ಎಂದು ಬೇರೆ ವಿಚಾರ ಮಾತನಾಡಿದೆವು.

  ಬೆಳಿಗ್ಗೆ ವಿಜಿ ಫೋನ್ ಮಾಡಿ ಬಾರಪ್ಪಾ ಎಂ.ಎಲ್.. ಯವರಿಗೆ ಹೇಳಿದಿವೆ ಇಲ್ಲೆ ಇದಾರೆ ಅಂದ್ರು. ನಾನು ಹೋದೆ. ಶ್ರೀ ಶ್ರೀನಿವಾಸ್ರವರು ಏನು ಸಮಾಚಾರ ಅಂದಾಗ ಸಾರ್ ಬಿದರೆಹಳ್ಳಕಾವಲ್ನಲ್ಲಿ  ಸಭೆ ಮಾಡಬೇಕು ಡಿಸಿಗೆ ಹೇಳಿ ಅಂದೆ, ಹೆಚ್..ಎಲ್  ಬಗ್ಗೆನಾಹೌದು ಸಾರ್ ಅಂದಾಗ. ಡಿಸಿಗೆ ಫೋನ್ ಮಾಡಿ ಎಂಪಿಯವರು ಇರೋ ಟೈಮ್ನಲ್ಲಿ ಮಿಟಿಂಗ್ ಕರೆದು ಬಿಡಿ, ಹೆಚ್..ಎಲ್ ವಿಚಾರ ಬಗೆ ಹರಿಸೋಣ ಎಂದು ಹೇಳಿದರು.

  ಮೇಲೆ ಏನ್ ಮಾರಾಯ ಅದು ಆಗುತ್ತಾ ಕಷ್ಟ ಅಂತಾರೆ ಅಂದ್ರು, ಇಲ್ಲ ಸಾರ್ ಶೇ 100 ರಷ್ಟು ಆಗುತ್ತೆ. ಶ್ರೀ ಟಿ.ಬಿ.ಜಯಚಂದ್ರವರು ಒಪ್ಪಿದ್ದಾರೆ ಎಂದೆ. ಸರಿ ಬಿದರೆಹಳ್ಳಕಾವಲ್ನವರು ಅಂದ್ರು, ಅವರ ವಿಚಾರವೇ ಬರಲ್ಲಾ   ಹೆಚ್..ಎಲ್ಗೆ ಸುಮಾರು 650 ಎಕರೆ ಕೊಡೊಣಾ ಉಳಿದಿದ್ದು ಅವರಿಗೆ ಬಿಡಣೋ ಅಂದೆ, ಎಂಪಿಯವರು ಏನು ಹೇಳ್ತಾರೆ ಅವರು ಸಹ ಯಾವ ಕಾರಣಕ್ಕೂ ಅವರಿಗೆ ತೊಂದರೆ ಮಾಡಬಾರದು ಎಂಬ ನಿಲುವಿಗೆ ಬದ್ಧರಾಗಿದ್ದರೇ ಎಂದೆ.

 ಸರಿ ಏನೋ ಒಂದು ಮಾಡಿಸಿ ಬಿಡ್ರಪ್ಪಾ ನಾನು ಸಣ್ಣ ಹುಡುಗನಿಂದಲೂ ಎಂಪಿ, ನೀನು ಹೇಳಿದ್ದೇ ಆಗಿದೆ ಎಂದರು. ಅಂಬಿಕಾ ಹೋಟೆಲ್ಗೆ ಹೋಗಿ ಕಾಫಿ ಕುಡಿದು ಅವರಿಬ್ಬರಿಗೂ ಥ್ಯಾಂಕ್ಸ್ ಹೇಳಿ ಬಂದೆ. ಎಂಪಿಯವರಿಗೆ ಫೋನ್ ಮಾಡಿದೆ  ಏನಾಯ್ತಪ್ಪಾ ಅಂದ್ರು ನಿವೆಲ್ಲಾ ಕಳ್ಳರು ಬಿಡಿ ನಾವು ಮಧ್ಯೆದಲ್ಲಿ ಬಂದ್ರೆ ಅಷ್ಟೆ ಎಂದೆ ಏಕೆ ಅಂದ್ರು.

  ಅಲ್ಲಾ ಸ್ವಾಮಿ ನೀವು ಡಿಸಿಗೆ ಎಂ.ಎಲ್. ಅಧ್ಯಕ್ಷತೆಗೆ ಮಿಟಿಂಗ್ ಕರೆಯೋಕೆ ಹೇಳಿದ್ದೀನಿ ಅಂತಿರಾ, ಎಂ.ಎಲ್. ಯವರು ಡಿಸಿಯವರಿಗೆ ಎಂಪಿಯವರು ಇದ್ದಾಗ ಮಿಟಿಂಗ್ ಕರೆಯಿರಿ ಅಂತಾರೆ. ಯಾರನ್ನು ನಂಬೋದು ಅಂದಾಗ ಸರಿ ಏನು ಹೇಳಿನಪ್ಪ ಅಂದ್ರು ಅವರು  650 ಎಕರೆ ಕೊಡಲು ಒಪ್ಪಿದ್ದಾರೆ ಎಂದಾಗ ಒಳ್ಳೆ ಕೆಲಸ ಮಾಡಿದೆ ಕಣಯ್ಯಾ ಏನೋ ಒಂದು ಬಹಳ ವರ್ಷದ ಯೋಜನೆಗೆ ಮುಕ್ತಿ ಸಿಗುತ್ತೆ ಎಂದರು.

  ಮತ್ತೆ ಏಕೆ ವಿರೋಧ ಮಾಡ್ತಿದ್ದೆ ಅಂತ ಕೇಳಿಲಿಲ್ಲವ ಅಂದ್ರು, ಸಾರ್ ಅವರು ಕ್ಷೇತ್ರದ ಶಾಸಕರು ಒಂದು ಸರಿನಾದರೂ ಬಗ್ಗೆ ಒಂದು ಮಿಟಿಂಗ್ ಮಾಡಿಲ್ಲ ತಪ್ಪಲ್ವ ಅಂದಾಗ, ಅದು ಸರಿ ಬಿಡು ಅಂದ್ರು. ಯೋಜನೆಗೆ ಶ್ರೀನಿವಾಸ್ರವರು ಸಹ ವಿರೋಧ ಮಾಡಲಿಲ್ಲ ಕಮ್ಮುನಿಕೇಷನ್ ಗ್ಯಾಪ್ ಅಷ್ಟೆ. ಕಾಲ ಕೂಡಿ ಬಂದಾಗ ಎಲ್ಲವೂ ಸರಿಹೋಗುತ್ತೆ ಎಂಬ ಹಿರಿಯರ ಮಾತು ಸತ್ಯ.