12th September 2024
Share

TUMAKURU:SHAKTHIPEETA FOUNDATION

  ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು ಹೆಚ್.ಎ.ಎಲ್ ಘಟಕವನ್ನು ತನ್ನ ಸ್ವಂತ ಕ್ಷೇತ್ರ ಶಿರಾಕ್ಕೆ ಕೊಂಡೊಯ್ಯಲು ಶತ ಪ್ರಯತ್ನ ಮಾಡುತ್ತಿದ್ದರು. ಬಹುಷಃ ನಾನು ಮತ್ತು ಜಿಲ್ಲಾಧಿಕಾರಿ ಶ್ರೀಕೆ.ಎಸ್. ಸತ್ಯಮೂರ್ತಿರವರು ಸಭೆಯಲ್ಲಿಯೇ ಜಗಳವಾಡಿದ್ದು ಇದೇ ಕಾರಣಕ್ಕೆ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಮೇಲೆ ಅವರ ಮಾತು ಕೇಳಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಸೃಷ್ಠಿಯಾಗುವುದು ಸಹಜ.

  ನಾನು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಹೇಳಿದೆ ಸಾರ್ ಶ್ರೀ ಟಿ.ಬಿ.ಜಯಚಂದ್ರವರು ಜೊತೆ ಈ ವಿಚಾರ ಮಾತಾಡಲೇ ಬೇಕು, ಇಬ್ಬರ ಜಗಳ ಮೂರನೆಯವರಿಗೆ ಲಾಭ ಆಗಿ ಜಿಲ್ಲೆಗೆ ಯೋಜನೆ ಕೈತಪ್ಪುತ್ತೆ ಎಂದಾಗ ಅವರು ಮಾತಾಡು ನಾನು ಏನು ಬೇಡ ಅಂದಿಲ್ಲವಲ್ಲ ಎಂದರು.

  ನಾನು ಬೆಂಗಳೂರಿಗೆ ಹೋಗಿ ಶ್ರೀ ಟಿ.ಬಿ.ಜಯಚಂದ್ರವರ ಜೊತೆ ಮಾತಾಡಿ ಸಾರ್ ನೀವು, ಡಿಸಿ, ಎಂಪಿ ಕಳಿತುಕೊಂಡರೇ ಎಲ್ಲಾ ಸರಿ ಹೋಗುತ್ತೆ ಅಂದಾಗ ಅವರು ನಾಳೆ ಮಿಟಿಂಗ್ ಇದೆ ಡಿಸಿ ಆಫೀಸ್‌ನಲ್ಲಿ ಮಾತಾಡೋಣಾ ಎಂಪಿಯವರಿಗೂ ಹೇಳಿಬಿಡು ಅಂದ್ರು.

   ನಾನು ಮಿಟಿಂಗ್ ಮುಗಿಯುತ್ತಲೆ ಕಾಣಿಸಿಕೊಂಡೇ ಎಂಪಿಯವರು ಅಲ್ಲೇ ಮಿಟಿಂಗ್‌ನಲ್ಲಿದ್ದರು, ಬಾ ಕುಂದರನಹಳ್ಳಿ ಅಂತ ಕರೆದರು. ಶ್ರೀ ಟಿ.ಬಿ.ಜಯಚಂದ್ರವರು, ಶ್ರೀ ಜಿ.ಎಸ್.ಬಸವರಾಜ್‌ರವರು, ಶ್ರೀಕೆ.ಎಸ್. ಸತ್ಯಮೂರ್ತಿರವರು, ಶ್ರೀ ಗೊವಿಂದರಾಜುರವರು ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ನಾನು ಐದು ಜನ ಮಾತ್ರ ಡಿಸಿ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಇದ್ದೇವು.

   ಸರಿ ಟಿಬಿಜೆ ಶುರು ಮಾಡಿದ್ದರು ಡಿಸಿಯವರೇ ಏನು  ಈ ಕುಂದರನಹಳ್ಳಿ ಸಮಾಚಾರ, ಎಲ್ಲಿಗೆ ಬಂತು ಹೆಚ್.ಎ.ಎಲ್ ಘಟಕ ಅಂದ್ರು. ಡಿಸಿಯವರು ಸಾರ್ ಶ್ರೀ ವಿದ್ಯಾಶಂಕರ್‌ರವರು ಬೇಗ ರೆಕಾರ್ಡ್ ಕಳುಹಿಸಲು ತಿಳಿಸಿದ್ದಾರೆ ಅಂದ್ರು.  ‘ನಾನು ತಕ್ಷಣ ಶುರು ಮಾಡಿ ಸಾರ್ ನಿಮ್ಮ ಕಾಲಿಗೆ ಬೀಳುತ್ತೇನೆ ರೆಕಾರ್ಡ್ ಕಳುಹಿಸಲು ಹೇಳಿ’ ನೀವು ಅದೃಷ್ಟ ಇದ್ದರೆ ಮುಖ್ಯಮಂತ್ರಿ ಆಗುವವರು, ನೀವು ಯಾವ ಯೋಜನೆ ಬೇಕಾದರೂ ಮಾಡಿಸಿಕೊಳ್ಳಿ ಇದು ನನ್ನ ಬಹಳ ವರ್ಷಗಳ ಕನಸು ಸಾರ್ ಅಂದೆ.

  ಶ್ರೀ ಟಿ.ಬಿ.ಜಯಚಂದ್ರವರು ಸೇರಿದಂತೆ ಒಂದೆರಡು ನಿಮಿಷ ಯಾರು ಮಾತನಾಡಲಿಲ್ಲ ಮೌನ. ಸರಿ ಡಿಸಿಯವರೇ ಈ ಜಿಲ್ಲೇಲಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತೇನೆ ಆದರೇ ಈ ಕುಂದರನಹಳ್ಳಿ ರಮೇಶ್‌ಗೆ ತೊಂದರೆ ಕೊಡೊಕೆ ಮನಸ್ಸು ಬರಲ್ಲ ಆತನಿಗೆ ಕಮಿಟ್‌ಮೆಂಟ್ ಇದೆ, ರೆಕಾರ್ಡ್ ಕಳುಹಿಸಿ, ಬಸವರಾಜ್‌ರವರೇ ಬೇಗ ಮಾಡಿಸಿಬಿಡಿ, ಎಂದು ಸರಿ ಬರ್ತಿನಿ ಬಸವರಾಜ್ ಶಿರಾಕ್ಕೆ ಹೋಗಬೇಕು ಎಂದು ಹೊರಟೇ ಬಿಟ್ಟರು. ಇದು ಶಿರಾ ಮತ್ತು ಬಿದರೆಹಳ್ಳಕಾವಲ್ ಗೊಂದಲ ಬಗೆ ಹರಿದ ಇತಿಹಾಸ’ ಕೇವಲ ಮೂರು ನಿಮಿಷದಲ್ಲಿ. ಜಯಚಂದ್ರರವರು ದೊಡ್ಡ ಮನಸ್ಸು ಮಾಡಿ ತ್ಯಾಗ ಮಾಡಿದರು.

  ಹೊರಗಡೆ ಬಂದ ಮೇಲೆ ಬಸವರಾಜ್‌ರವರು ಏನಯ್ಯಾ ಒಂದು ಫೋರಂ ಅಧ್ಯಕ್ಷ ಆಗಿ ಜಯಚಂದ್ರನಿಗೆ ಕಾಲಿಗೆ ಬೀಳುತ್ತೇನೆ ಅಂತೀಯಾ ಎಂದು ಕಿಚಾಯಿಸಿದರು. ಸಾರ್ ನಾನು ನೀವು ಜೊತೆಯಾಗಿ ಎಷ್ಟು ವರ್ಷ ಆಯಿತು ಅಂದೆ. ಏಕೆ 25-30 ವರ್ಷ ಆಗಿರಬೇಕಲ್ಲವಾ ಅಂದ್ರು. ಯಾವತ್ತಾದರೂ ನಿಮ್ಮ ಕಾಲಿಗೆ ಬಿದ್ದೀದ್ದಿನಾ ಅಂದೆ. ಹುಕಣಯ್ಯಾ ಯಾವುತ್ತು ಬಿದ್ದಿಲ್ಲ ಅಲ್ವಾ ಅಂದ್ರು , ಸರಿ ಒಂದು ಒಳ್ಳೆ ಕೆಲಸಕ್ಕೆ ನೀವು ಮತ್ತು ಟಿಬಿಜೆ ಇಬ್ಬರೂ ಹಿರಿಯರು ಕಾಲಿಗೆ ಬಿದ್ದರು ತಪ್ಪಿಲ್ಲ ಆದರೆ ನನಗೆ ನಾಟಕ ಆಡೋಕೆ ಬರಲ್ಲ ಸಾರ್ ಅಂದೆ.

  ಬಸವರಾಜ್‌ರವರಿಗೂ ಸಮಾಧಾನ ಆಯಿತು, ಒಳ್ಳೆ ಕೆಲಸ ಮಾಡಿದೆ ಕಣಯ್ಯಾ ಸುಮ್ಮನೆ ಎರಡು ವರ್ಷ ಹಾಳಾಗಿ ಹೋಗಿತ್ತು, ಡಿಸಿ ಕಳುಹಿಸುತ್ತಾರೆ ತಿರುಗಾ ಬೈಯಬೇಡಪ್ಪಾ ಅಂದು ಬುದ್ದಿ ಹೇಳಿದರು. ಇದೂ ಒಂದು ಪ್ರಮುಖ ಘಟ್ಟ.