TUMAKURU:SHAKTHIPEETA FOUNDATION
ಕೆ.ಎಸ್.ಸತ್ಯಮೂರ್ತಿ ಸತ್ಯದ ವರದಿ- ದಿನಾಂಕ: 02.08.2013 ರಂದು 772 ಎಕರೆ 3 ಗುಂಟೆ
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ ಸರ್ಕಾರಿ ಜಮೀನು ಇದೆ, ಇಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸ್ವಾಮ್ಯದ ಹೆಚ್.ಎ.ಎಲ್.ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸುವ ಘಟಕವನ್ನು ಆರಂಭಿಸಬಹುದು ಎಂಬ ವರದಿಯನ್ನು ಒಬ್ಬರೇ ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿಯವರು ಸುಮಾರು 100 ದಿವಸದ ಅವಧಿಯಲ್ಲಿ ಮೂರು ರೀತಿ ವರದಿಗಳನ್ನು ನೀಡುತ್ತಾರೆ. ’ಅಸತ್ಯದ ವರದಿ’ಗೆ ತುಮಕೂರು ಉಪವಿಭಾಗಾಧಿಕಾರಿಯಾಗಿದ್ದ ಶ್ರೀ ನಕುಲ್‌ರವರು ಇಂತಹ ವರದಿ ನೀಡಲು ನಾನು ’ಐಎಎಸ್’ ಮಾಡಿ ಬಂದಿಲ್ಲ ಎಂದು ವರದಿ ನೀಡಲೇ ಇಲ್ಲವಂತೆ. ತಹಶೀಲ್ದಾರ್‌ರವರು ಪಾಪ ಭಯಭೀತರಾಗಿ ನೀಡಿದ್ದಾರಂತೆ.
ಕೆ.ಎಸ್.ಸತ್ಯಮೂರ್ತಿ ಸತ್ಯದ ವರದಿ- ದಿನಾಂಕ: 02.08.2013 ರಂದು 772 ಎಕರೆ 3 ಗುಂಟೆ
ಕೆ.ಎಸ್.ಸತ್ಯಮೂರ್ತಿ ಅಸತ್ಯದ ವರದಿ- ದಿನಾಂಕ: 23.08.2013 ರಂದು 300 ಎಕರೆ
ಕೆ.ಎಸ್.ಸತ್ಯಮೂರ್ತಿ ಮಂಗಳಾರತಿ ವರದಿ- ದಿನಾಂಕ: 16.11.2013 ರಂದು 610 ಎಕರೆ
’ಗುಮಾಸ್ತ ಇಟ್ಟ ಚುಕ್ಕೆಯನ್ನು ಗೌರ್ವನರ್ ಕಿತ್ತರು ಬರಲ್ಲವಂತೆ’ ಎಂಬ ಅಮಲಿನಲ್ಲಿ ಈ ರೀತಿ ನೀಡಿರ ಬಹುದು. ಸತ್ಯದ ಮತ್ತು ಅಸತ್ಯದ ವರದಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರತಿ ರವಾನಿಸಿದ್ದಾರೆ, ’ಮಂಗಳಾರತಿ’ ವರದಿಯಲ್ಲಿ ಕೇಸ್ ಹಾಕಲು ಅನೂಕೂಲವಾಗುವಂತೆ ಅರ್ಜಿ ಹಾಕಿದವರಿಗೂ ವಿಳಂಭವಾಗಬಾರದು ಎಂದು ಪ್ರತಿಯನ್ನು ಕಳುಹಿಸಿರುವ ತಂತ್ರ ನಿಜಕ್ಕೂ ಅದ್ಭುತ.
ಇವರ ಮಹಾನ್ ಉದ್ದೇಶ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿನ ಸರ್ಕಾರಿ ಜಮೀನಿಗೆ ಕೇಂದ್ರ ಸರ್ಕಾರದ ಹೆಚ್.ಎ.ಎಲ್ ಘಟಕ ಬರಬಾರದು. ಇವರು ಮಣಿದ ಲಾಭಿ ನೀಗೂಢ ರಹಸ್ಯ. ರಾಜಕೀಯ ಒತ್ತಡವೋ? ಇದೆ ಜಾಗದಲ್ಲಿ ಖಾಸಗಿ ಕಂಪನಿಗೆ ಕಬ್ಬಿಣದ ಪ್ಯಾಕ್ಟರಿ ಮಾಡಲು ಜಮೀನು ನೀಡಲಾಗಿತ್ತು, ಪಾಪ ಖಾಸಗಿ ಮೈನ್ಸ್ ಪ್ರೀತಿಯೋ/ಮಮತೆಯೋ ? ಅವರೇ ಉತ್ತರಿಸಬೇಕು. ಇಂತಹ ಪುಣ್ಯಾತ್ಮರ ವಿರುದ್ದ ಹೋರಾಟ ಸಾಕಪ್ಪಾ ಸಾಕು!