12th October 2024
Share

TUMAKURU:SHAKTHIPEETA FOUNDATION

ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಎ.ಕೆ.ಆಂತೋನಿಯವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರಿಗೆ ಬಹಳ ವರ್ಷಗಳಿಂದ ಪರಿಚಿತರು. ಬಸವರಾಜ್‌ರವರು ಸುಮಾರು 45  ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದವರು.

  ಕಾಂಗ್ರೆಸ್ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಅಧ್ಯಕ್ಷರಾಗಿ ಶ್ರೀಮತಿ ಸೋನಿಯಾಗಾಂಧಿಯವರ ಜೊತೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್‌ರವರು ಸುಮಾರು 3 ವರ್ಷಗಳ ಪಾರ್ಲಿಮೆಂಟ್ ಬೋರ್ಡ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆಂಧ್ರ ಪ್ರದೇಶದ ಕಾಂಗ್ರೆಸ್ ಪಕ್ಷದ ಚುನವಣಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.

  ಜೊತೆಗೆ ಮಾಜಿಪ್ರಧಾನಿ ದಿ.ರಾಜೀವ್ ಗಾಂದಿಯವರ ಒಡನಾಟ ಎಲ್ಲರಿಗೂ ತಿಳಿದ ವಿಷಯ. ಈಗಲೂ ಶ್ರೀಮತಿ ಸೋನಿಯಾಗಾಂದಿಯವರು ಸೆಂಟ್ರಲ್ ಹಾಲ್‌ನಲ್ಲಿ ಬಸವರಾಜ್‌ರವರನ್ನು ನೋಡಿದರೆ ಮಾತನಾಡಿಸದೇ ಇರುವುದಿಲ್ಲ ಅಷ್ಟೊಂದು ಆತ್ಮೀಯತೆ ಇದೆ.

   ತುಮಕೂರಿನ ಸಿದ್ಧಗಂಗಾಮಠಕ್ಕೆ ಶ್ರೀಮತಿ ಸೋನಿಯಾಗಾಂಧಿಯವರು ಬಂದಾಗ ಬಸವರಾಜ್‌ರವರು ಬಿಜೆಪಿ ಪಕ್ಷದಿಂದ ಸಂಸದರಾಗಿದ್ದರು, ಹೆಲಿಪ್ಯಾಡ್‌ಗೆ ಹೋಗಿದ್ದು ಒಂದು ಸುದ್ಧಿಯಾದರೆ, ಇಳಿದಾಗ ಬಸವರಾಜ್‌ರವರನ್ನು ನೋಡಿದ ತಕ್ಷಣ ಸೋನಿಯಾಗಾಂಧಿಯವರು ಮಾತನಾಡಿಸಿದ್ದು ಬಹಳಷ್ಟು ಸುದ್ಧಿಮಾಡಿತ್ತು.

 ಶ್ರೀ ಎ.ಕೆ.ಆಂತೋನಿಯವರು ಮತ್ತು ಶ್ರೀ ಜಿ.ಎಸ್.ಬಸವರಾಜ್‌ರವರು ಒಂದೇ ಕಡೆ ವಾಸವಾಗಿದ್ದವರು, ಈ ಎಲ್ಲಾ ಬೆಳವಣಿಗೆಗೆಳು ಸಹ ಅವರು ನೇರವಾಗಿ ರಕ್ಷಣಾ ಸಚಿವರಿಗೆ ವಸ್ತು ಸ್ಥಿತಿ ವರದಿಯನ್ನು ವಿವರಿಸಿ ಗುಬ್ಬಿಗೆ ಹೆಚ್.ಎ.ಎಲ್ ಘಟಕ ನೀಡಲು ಮನವಿ ಮಾಡಲು ಅನೂಕೂಲವಾಗಿರ ಬಹುದು.

 ಶ್ರೀ ಎ.ಕೆ.ಆಂತೋನಿಯವರದು ನೇರವಾದ ವ್ಯಕ್ತಿತ್ವ, ಪ್ರಾಮಾಣಿಕರು, ಅವರ ಬಳಿ ಯಾವುದೇ ನಾಯಕರು ಶಿಫಾರಸ್ಸು ಮಾಡಿಸಲು ಅವರನ್ನು ಕೇಳಲು ಹಿಂಜರಿಯುತ್ತಾರೆ ಎಂಬ ಸುದ್ಧಿ ಕಾಂಗ್ರೆಸ್ ಪಕ್ಷದ ವಲಯದಲ್ಲಿದೆ.

  ಬಸವರಾಜ್‌ರವರು ಎರಡು ಭಾರಿ ಹೆಚ್.ಎ.ಎಲ್ ಘಟಕದ ಬಗ್ಗೆ ಆಂತೋನಿಯವರನ್ನು ಭೇಟಿಮಾಡಿ ಸಮಾಲೋಚನೆ ನಡೆಸಿದ್ದಾರೆ. ಅವರು ಅಧಿಕಾರಿಗಳಿಗೆ ಸೂಚಿಸಿ ನಿಯಮ ಮತ್ತು ಕಾನೂನಿನ ಪ್ರಕಾರ ಅತಿ ಶೀಘ್ರವಾಗಿ ಜಮೀನು ಆಯ್ಕೆ ಮಾಡಿ ಘಟಕ ಆರಂಭಿಸಿ, ತುಮಕೂರಿನ ಜಾಗದ ಬಗ್ಗೆ ಶ್ರೀ ಬಸವರಾಜ್ ಜೊತೆ ಚರ್ಚಿಸಿ, ಸ್ಥಳ ಪರಿಶೀಲನೆ ಮಾಡಿ ಎಂದಷ್ಟೆ ಹೇಳಿದ್ದಾರೆ ಎಂಬ ಸುದ್ದಿಯಿದೆ.

  ಬಸವರಾಜ್‌ರವರಿಗೆ ನಿಮ್ಮ ಪತ್ರಗಳ ರಾಶಿ ಈಗಾಗಲೇ ಬಂದಾಗಿದೆ, ಬರುತ್ತಲೇ ಇವೆ ನೀವು ಬರುವ ಅಗತ್ಯವೇ ಇರಲಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ರಕ್ಷಣಾ ಇಲಾಖೆ ಅತ್ಯಂತ ರಹಸ್ಯ ಯಾರಿಗೂ, ಯಾವುದು ಗೊತ್ತಾಗುವುದಿಲ್ಲ. ಗೊತ್ತಾದರೂ ಮಾತನಾಡುವುದು ಕಷ್ಟ.