TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿರುವ ಸರ್ಕಾರಿ ಜಮೀನಿನಲ್ಲಿ ಯಾವುದಾದರೂ ಒಂದು ಬೃಹತ್ ಯೋಜನೆಯನ್ನು ಸ್ಥಾಪಿಸಬೇಕು ಎಂಬ ಕನಸನ್ನು
- ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕಂಡಿದ್ದು-1984 ರಲ್ಲಿ. ಇಲ್ಲಿಗೆ 36 ವರ್ಷಗಳು.
- ಈ ಜಮೀನಿನನಲ್ಲಿ ದನಕಾಯುವಾಗ ಕುಂದರನಹಳ್ಳಿ ರಮೇಶ್ ಕಂಡಿದ್ದು-1980 ರಲ್ಲಿ. ಇಲ್ಲಿಗೆ 40 ವರ್ಷಗಳು.
- ಕುಂದರನಹಳ್ಳಿ ಗಂಗಮಲ್ಲಮ್ಮ ದೇವಿಗೆ ಪೂಜೆ ಮಾಡಿ ಕುಂದರನಹಳ್ಳಿ ರಮೇಶ್ ಪ್ರತಿಜ್ಞೆ ಮಾಡಿದ್ದು- 01.08.1988 ಇಲ್ಲಿಗೆ ಅಂದರೆ ದಿನಾಂಕ:15.04.2020 ಕ್ಕೆ ಸರಿಯಾಗಿ 31 ವರ್ಷ 8 ತಿಂಗಳು 14 ದಿವಸಗಳು.
- ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಈ ಜಮೀನಿನಲ್ಲಿ ಹೆಚ್.ಎ.ಎಲ್ ಘಟಕ ಮಂಜೂರು ಮಾಡಲು ಕೇಂದ್ರ ರಕ್ಷಣಾ ಸಚಿವರಿಗೆ ಪತ್ರ ಬರೆಯುವ ಮೂಲಕ ಆರಂಭಿಸಿದ್ದು ದಿನಾಂಕ: 17.06.2011 ಇಲ್ಲಿಗೆ ಅಂದರೆ ದಿನಾಂಕ:15.04.2020 ಕ್ಕೆ ಸರಿಯಾಗಿ 8 ವರ್ಷ 9 ತಿಂಗಳು 28 ದಿವಸಗಳು.
- ಕರ್ನಾಟಕ ಸರ್ಕಾರದ SHLCC ಸಮಿತಿಯು ಈ ಜಮೀನಿನಲ್ಲಿ ಹೆಚ್.ಎ.ಎಲ್ ಘಟಕ ಮಂಜೂರು ಮಾಡಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ನಿರ್ಣಯ ಕೈಗೊಂಡಿದ್ದು 04.03.2014 ಇಲ್ಲಿಗೆ ಅಂದರೆ ದಿನಾಂಕ:15.04.2020 ಕ್ಕೆ ಸರಿಯಾಗಿ 6 ವರ್ಷ 1 ತಿಂಗಳು 11 ದಿವಸಗಳು.
- ಹೆಚ್.ಎ.ಎಲ್ ಘಟಕ ಶಂಕುಸ್ಥಾಪನೆಯಾಗಿದ್ದು ದಿನಾಂಕ: 03.01.2016 ಇಲ್ಲಿಗೆ ಅಂದರೆ ದಿನಾಂಕ:15.04.2020 ಕ್ಕೆ ಸರಿಯಾಗಿ 4 ವರ್ಷ 3 ತಿಂಗಳು 12 ದಿವಸಗಳು.
ಇನ್ನೂ ಘಟಕದ ಲೋಕಾರ್ಪಣೆ ಆಗಿಲ್ಲ, ಇಷ್ಟೊಂದು ವಿಳಂಬವಾಗಲು ನ್ಯಾಯಾಲಯಗಳ ಮೊಕೊದ್ದಮೆಗಳು, ದ್ವೇಷದ ಅಡಚಣೆಗಳು, ಗೋವಾಕ್ಕೆ ಸ್ಥಳಾಂತರ ಇತ್ಯಾದಿ ವಿವಿದ ಮಜಲುಗಳ ಬಗ್ಗೆ ಮತ್ತು ಯೋಜನೆ ಜಾರಿಗೆ ಸಹಕಾರ ನೀಡಿರುವ ಹಲವಾರು ರೈತರು, ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾಧ್ಯಮದವರ ಘಟನೆಗಳ ಬಗ್ಗೆ ಬರವಣಿಗೆ ಮುಂದುವರೆಯಲಿದೆ.
ಸಂತ್ರಸ್ಥರ ಬೇಡಿಕೆಗಳು ಮತ್ತು ನಿರುದ್ಯೋಗಿಗಳ ಕನಸು ಹಾಗೂ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಬಗ್ಗೆಯೂ ಬರವಣಿಗೆ ಮುಂದುವರೆಯಲಿದೆ.
ಇಷ್ಟೊಂದು ಧೀರ್ಘಕಾಲದ ಹೋರಾಟ ನಿಜಕ್ಕೂ ತೃಪ್ತಿ ತಂದಿದೆ.