12th September 2024
Share

TUMAKURU:SHAKTHIPEETA FOUNDATION

ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರು ದಿನಾಂಕ:11.03.2014 ರಂದು ಲಿಂಗೈಕ್ಯರಾಗಿದ್ದರು. ಸಹಜವಾಗಿ ರಾಜ್ಯದ ನೀರಾವರಿ ಯೋಜನೆಗಳಿಗೆ ದೊಡ್ಡ ಪೆಟ್ಟು ಬಿದ್ದಿತ್ತು. ನಾನು ಅವರ ಪಾರ್ಥಿವ ಶರೀರವಿಟ್ಟ ಜಾಗದಲ್ಲಿ ಇದ್ದೆ.

 ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿರವರು ಮತ್ತು ಶ್ರೀ ಕೊಪ್ಪಳ್ ನಾಗರಾಜುರವರು ಬಂದರು, ನಾನು ಮಾತನಾಡಿಸಿದೆ, ಅವರು ಸ್ವಲ್ಪ ಸಮಯ ಇದ್ದರು ನಾನು ನನ್ನ ಪಾಡಿಗೆ ಕುಳಿತಿದ್ದೆ.

ಡಿಸಿ:– ಊ ಏನಪ್ಪ ಹೆಚ್.ಎ.ಎಲ್ ಆಗಲ್ಲ ಅಂತಾರೆ.

ನಾನು:- ಯಾರು ಸಾರ್ ಆಗಂದವರು, ನಿನ್ನೆ ಇನ್ನೂ ಮುಖ್ಯಮಂತ್ರಿಗಳೇ ಕ್ಲಿಯರ್ ಮಾಡಿದ್ದಾರೆ.

ಡಿಸಿ:- ಮಾಡಿದ್ದಾರೆ ಆದು ಜಿಓ ಆಗದೆ ಡೌಟ್ ಅವರೆಲ್ಲಾ ಕೋರ್ಟ್‌ಗೆ ಹೋಗುತ್ತಿದ್ದಾರೆ, ಸ್ಟೇ ಅಂತೂ ಸಿಗುತ್ತೆ.

ನಾನು:- ಹೋ ನೀವೇ ನ್ಯಾಯಾಧೀಶರು ಅಲ್ವ ಸಾರ್.

ಡಿಸಿ:– ಹೈಕೋರ್ಟ್, ಸುಪ್ರೀಂ ಕೋರ್ಟ್ ಅಷ್ಟು ಸುಲಭ ಇಲ್ಲ.

ನಾನು:– ಹಾಳಾಗಿ ಹೋಗಲಿ ನಡಿರಿ ಈಗ ಆಮೇಲೆ ನೋಡೋಣ.

ಡಿಸಿ:- ನಿಮ್ಮ ಕೈಲಿ ಅಂತೂ ಆಗಲ್ಲ ಮುಗಿತು.

ನಾನು:- ಸುಮ್ಮನೆ ಇಲ್ಲಿಂದ ಹೋಗಿ ಮತ್ತೆ ಮಾತನಾಡಬೇಡಿ. ಇದು ಮಾತನಾಡುವ ಜಾಗವಲ್ಲ, ಆದ್ಯಾಕೆ ಆಗಲ್ಲ ನಾನು ನೋಡ್ತಿನಿ.