22nd December 2024
Share

TUMAKURU:SHAKTHIPEETA FOUNDATION

2014 ರ ಲೋಕಸಭಾ ಚುನಾವಣೆ ದಿನಾಂಕ:17.04.2014 ರಂದು ನಡೆಯಿತು. ದಿನಾಂಕ:16.05.2014 ರಂದು ಚುನಾವಣೆ ಪಲಿತಾಂಶದಲ್ಲಿ ತುಮಕೂರು ಲೋಕಸಭಾ ಸದಸ್ಯರಾಗಿ ಶ್ರೀ. ಎಸ್.ಪಿ.ಮುದ್ದುಹನುಮೇಗೌಡರವರು ಆಯ್ಕೆಯಾದರು. ಶ್ರೀ ಜಿ.ಎಸ್.ಬಸವರಾಜ್‌ರವರು ಸೋಲುಂಡುರು.

  ಚುನಾವಣಾ ಪಲಿತಾಂಶ ಬಂದು ಒಂದು ವಾರ ಕಳೆದಿರಬಹುದು, ಬಸವರಾಜ್‌ರವರು ಹೆಚ್.ಎ.ಎಲ್ ವಿಚಾರದಲ್ಲಿ ‘ಒಂದು ಪಾರ್ಟಿ ‘ನಡೆದಿದೆ ಗೊತ್ತಾಯಿತೋ ಈ ವಿಚಾರ ಎಂದು ಫೋನ್ ಮಾಡಿದರು. ಇಲ್ಲ ಸಾರ್ ಎಂದೆ ಯಾವುದೇ ಕಾರಣಕ್ಕೂ ಹೆಚ್.ಎ.ಎಲ್ ಬಿದರೆಹಳ್ಳಕಾವಲ್‌ನಲ್ಲಿ ಆಗಬಾರದು ಎಂದು ಕುಣಿದು ಕುಪ್ಪಳಿಸಿದ್ದಾರೆ. ಇಂತವರು ಹೇಳಿದರು ಎಂದರು.

 ನೋಡೋಣ ಬಿಡಿ ಸಾರ್, ಕುಣಿಯೋರೋ ಕುಣಿಲಿ ಎಂದು ನಾನು ಇನ್ವೇಸ್ಟಿಗೇಷನ್ ಮಾಡಲು ಹೊರಟೆ ಸತ್ಯಾನುಸತ್ಯ’ ತಿಳಿಯಿತು. ಈಗ ಬಿದರೆಹಳ್ಳಕಾವಲ್‌ನವರಿಂದ ಒಂದು ಕೇಸ್, ಮಾರಶೆಟ್ಟಿಹಳ್ಳಿ ಗೊಲ್ಲರಹಟ್ಟಿಯವರಿಂದ ಒಂದು ಕೇಸ್. ಕಾರೇಹಳ್ಳಿಯವರಿಂದ ಒಂದು ಕೇಸ್, ಪಿಎಂಬಿ ಮೆಟಾಲಿಕ್ಸ್ ಮೈನ್ಸ್ ನವರಿಂದ ಒಂದು ಕೇಸ್ ‘ಒಟ್ಟಿಗೆ ನಾಲ್ಕು ಕೇಸ್ ‘ಹಾಕಲು ತೀರ್ಮಾನಿಸಲಾಗಿದೆಯಂತೆ.

 ಎಲ್ಲರಿಗೂ ದಾಖಲೆ ಕೊಟ್ಟು ಕೇಸ್ ಸ್ಟ್ರಾಂಗ್ ಆಗಿ ನಡಿಯಬೇಕು, ರಾಜಕಾರಣಿಗಳು ಯಾರು ಈ ಯೋಜನೆಗೆ ಬೆಂಬಲಿಸುವುದಿಲ್ಲ, ಯಾರಿಗೂ ಕುಂದರನಹಳ್ಳಿಯಲ್ಲಿ ಆಗುವುದು ಇಷ್ಟವಿಲ್ಲ, ಕೇಂದ್ರ ಸರ್ಕಾರ ಕೇಸ್ ಬಿದ್ದಲ್ಲಿ ಹಿಂಜರಿಯುತ್ತಾರೆ ಎಂದು ಮಹತ್ತರವಾದ ವಿಷಯ ಚರ್ಚೆಯಾಯಿತಂತೆ.

 ನಾನು ಸಚಿವ ಸಂಪುಟದ ನಿರ್ಣಯ ಆಗೂವವರೆಗೂ ಮೌನವಾಗಿ ಕಡತದ ಅನುಸರಣೆ ಮಾಡಲು ತೀರ್ಮಾನಿಸಿದೆ. ಬಸವರಾಜ್‌ರವರಿಗೂ ಏನು ಇಂತಹ ವಿಚಾರ ಹೇಳಬಾರದು ಎಂದು ನಿರ್ಣಯಿಸಿದೆ. ಸರ್ಕಾರಿ ಆದೇಶ ಪಡೆಯುವ ವೇಳೆಗೆ ಜುಲೈ ತಿಂಗಳು ಆಯಿತು.

 ಆದರೂ ಪ್ರತಿಯೊಂದು ಕಡತದ ಅನುಸರಣೆ ಆದಾಗಲೆಲ್ಲಾ ಹೆಚ್.ಎ.ಎಲ್‌ನವರಿಗೂ ಸೇರಿದಂತೆ ಹಲವಾರು ಅಧಿಕಾರಿಗಳಿಗೆ ಮೆಸೆಜ್ ಹಾಕುವುದು ವಾಡಿಕೆಯಾಗಿತ್ತು. ಅದೇ ರೀತಿ ಮಾಡುತ್ತಾ ಬಂದೆ.