19th April 2024
Share

TUMAKURU:SHAKTHIPEETA FOUNDATION

ಹೆಚ್.ಎ.ಎಲ್. ಗೆ ಭೂಮಿ ಹಸ್ತಾಂತರ ಮಾಡುವುದು ವಿಳಂಭವಾದ ಹಿನ್ನೆಲೆಯಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವುದಾಗಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಘೋಶಿಸಿದಾಗ, ಲೋಕಸಭಾ ಸದಸ್ಯರಾದ ಶ್ರೀ ಎಸ್.ಪಿ.ಮುದ್ದಹನುಮೇಗೌಡರವರು, ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು ಮತ್ತು ಅಧಿಕಾರಿಗಳು  ಸ್ಥಳ ವೀಕ್ಷಣೆಗೆ ದಿನ ನಿಗದಿ ಮಾಡಿದರು.

 ಅಂದು ಹೆಚ್.ಎ.ಎಲ್ ಮತ್ತು ವಿಜ್ಞಾನ ಗುಡ್ಡ ಎರಡು ಕಡೆಯೂ ಸ್ಥಳ ವೀಕ್ಷಣೆ ಕಾರ್ಯಕ್ರಮವಿತ್ತು. ನಾನು ಹೆಚ್.ಎ.ಎಲ್ ಜಾಗಕ್ಕೆ ಭೇಟಿ ನೀಡಲು ಹೋದಾಗ ದಾರಿಯಲ್ಲಿ ಇದ್ದ ಕಾಂಗ್ರೆಸ್‌ನ ನನ್ನ ಸ್ನೇಹಿತರು ದಯವಿಟ್ಟು ನೀವು ಅಲ್ಲಿಗೆ ಹೋಗಬ್ಯಾಡಿ, ಅಲ್ಲಿರುವ ಎಲ್ಲರೂ ನಿಮ್ಮ ಮೇಲೆ ದೂರು ಹೇಳುತ್ತಿದ್ದಾರೆ. ಇಲ್ಲಿ ವಾತವಾರಣ ಸರಿಯಿಲ್ಲ ವಾಪಾಸ್ಸು ಹೋಗಿ ಎಂದು ತಿಳಿಸಿದರು.

 ನಾನು ಆಮೇಲೆ ಎಡವಟ್ಟು ಆದೀತು ಎಂದು ಸ್ಥಳಕ್ಕೆ ಹೋದೆ, ಶ್ರೀ ಎಸ್.ಪಿ.ಮುದ್ದಹನುಮೇಗೌಡರವರು, ಶಾಸಕರಾದ ಶ್ರೀ ಎಸ್.ಆರ್.ಶ್ರೀನಿವಾಸ್‌ರವರು ಇಬ್ಬರೂ  ಕಾರಿನಲ್ಲಿ ಕುಳಿತು ಹೊರಟಿದ್ದರು ನಮಸ್ಕಾರ ಹೇಳಿ ಬಂದೆ. ಅಲ್ಲಿನ ಕಾಲೋನಿ ಜನ ಏನಣ್ಣಾ ಸೋತರು ಬಂದಿದೀಯಾ, ಏನು ಮಾಡೋಣಪ್ಪಾ ಹೆಚ್.ಎ.ಎಲ್ ಆಗೋವರೆಗೂ ನಿದ್ದೆ ಬರಲ್ಲವಣ್ಣ ಅಂದೆ. ಇಲ್ಲ ಕಣಣ್ಣ ಆಗಲ್ಲ ವಾಪಸ್ಸು ಹೋಗುತ್ತೆ ಅಂದಿದ್ದು ನಿಜಕ್ಕೂ ನನಗೆ ಶಾಕ್. ಇರಲಿ ನೋಡೋಣ ಅಂದು ಬಂದೆ.

ಶ್ರೀ ಎಸ್.ಪಿ.ಮುದ್ದಹನುಮೇಗೌಡರವರು ವಿಜ್ಞಾನಗುಡ್ಡಕ್ಕೆ ಹೊರಟರು ಆ ಯೋಜನೆಯೂ ನನ್ನ ಕನಸಿನ ಯೋಜನೆಯಾದ್ದರಿಂದ ಅಲ್ಲಿಗೂ ಹೋದೆ. ಜಾಗದ ಬಗ್ಗೆ ಮಾತನಾಡುವಾಗ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದಾಗ ನಾನು ಮಧ್ಯೆ ಬಾಯಿ ಹಾಕಿದೆ.

 ತಕ್ಷಣ ಅಲ್ಲಿದ್ದ ಕೆಲವರು ಒಂದು ಕಡೆ ಹೋಗಿ ಏನೋ ಮಾತನಾಡಿ ಬಂದು, ಎಸ್.ಪಿ.ಎಂ ರವರನ್ನು ಕರೆದು ಏನೋ ಹೇಳಿದರು, ಮತ್ತೆ ನಾನು ಮಾತನಾಡುವಾಗ  ನಾನು ಅಧಿಕಾರಿಗಳನ್ನು ಕೇಳುತ್ತಿದ್ದೇನೆ ಅವರು ಹೇಳುತ್ತಾರೆ ಎಂದಾಗ, ನಾನು ತಕ್ಷಣ ಅಲ್ಲಿಂದ ಹೊರಟು ಜೀವಮಾನದಲ್ಲಿ ಎಲ್ಲಿ ಗೌರವ ಇರುತ್ತದೆಯೋ ಅಲ್ಲಿಗೆ ಮಾತ್ರ ಹೋಗಬೇಕು ನಾನು ತಪ್ಪುಮಾಡಿದೆ ಎಂಬ ಅರಿವು ಆಯಿತು ವಾಪಸ್ಸು ಬಂದೆ.

  ಅಂದಿನಿಂದ ಶ್ರೀ ಎಸ್.ಪಿ.ಮುದ್ದಹನುಮೇಗೌಡರವರ ಒಂದು ಕಾರ್ಯಕ್ರಮಕ್ಕೂ ನಾನು ಹೋಗಲಿಲ್ಲ, ನಾನು ಸದಸ್ಯನಾಗಿರುವ ಸರ್ಕಾರಿ ಸಮಿತಿಗಳ ಸಭೆಯಲ್ಲಿ  ಮಾತ್ರ ಹೋಗುತ್ತಿದ್ದೆ. ಅಂದಿನಿಂದ ಹೆಚ್.ಎ.ಎಲ್ ಹೋರಾಟ ಗಂಭೀರ ಹೊಸ ತಿರುವು ಪಡೆಯಿತು.