22nd November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್.ಎ.ಎಲ್ ಗೆ ನೀಡಿದ್ದ 610 ಎಕರೆ ಭೂಮಿ ವಿವಾದ ಹೈಕೋರ್ಟ್‌ನಲ್ಲಿರುವುದರಿಂದ ಗೋವಾದಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪಿಸಲು ಫಿಸಿಬಿಲಿಟಿ ರಿಪೋರ್ಟ್ ತಯಾರಿಸಲು 2015 ರಲ್ಲಿ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ಸೂಚನೆ ಇಲಾಖಾ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿತು. ಗುಬ್ಬಿ ಹೆಚ್.ಎ.ಎಲ್ ಘಟಕವನ್ನೇ ಗೋವಾಕ್ಕೆ ಶಿಪ್ಟ್ ಮಾಡುವುದು ಬಹತೇಕ ಖಚಿತ ಎಂಬ ನಿಲುವು ಎಲ್ಲರಲ್ಲೂ ಮನೆ ಮಾಡಿತ್ತು.

 ಹಿನ್ನೆಲೆಯಲ್ಲಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ತುಮಕೂರು ಮಾಜಿ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ಮಾತನಾಡಿದಾಗ ನಾನು ದೆಹಲಿಗೆ ಬರುವುದಿಲ್ಲ. ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ ಶ್ರೀ ಮನೋಹರ್ ಪರಿಕ್ಕರ್‌ರವರಿಗೆ ಪತ್ರ ಬರೆಸೋಣ. ಮುಖ್ಯ ಮಂತ್ರಿಗಳು ಬರೆಯುತ್ತಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ನಾವು ಚಳುವಳಿ, ಹೋರಾಟ ಮಾಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದರು. ಆಗ ಸರಿ ಸಾರ್ ನಾವು ನಮ್ಮ ಹೋರಾಟವನ್ನು ಆರಂಭಿಸುವುದಾಗಿ ತಿಳಿಸಿದೆ. ಫೋರಂನಿಂದ ಮಾಡುವ ಹೋರಾಟಕ್ಕೆ ನನ್ನ ಬೆಂಬಲವಿದೆ ನಿಮ್ಮ ಪ್ರಯತ್ನ ಮಾಡಿ ಎಂದು ಸಲಹೆನೀಡಿದರು. ಮೊದಲು ಶ್ರೀ ಮನೋಹರ್ ಪರಿಕ್ಕರ್‌ರವರಿಗೆ ಪತ್ರ ಬರೆಯಲಾಯಿತು.