15th September 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್.ಎ.ಎಲ್ ಗೆ ನೀಡಿದ್ದ 610 ಎಕರೆ ಭೂಮಿ ವಿವಾದ ಹೈಕೋರ್ಟ್‌ನಲ್ಲಿರುವುದರಿಂದ ಗೋವಾದಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪಿಸಲು ಫಿಸಿಬಿಲಿಟಿ ರಿಪೋರ್ಟ್ ತಯಾರಿಸಲು 2015  ರಲ್ಲಿ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ಸೂಚನೆ ಇಲಾಖಾ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿತು. ಗುಬ್ಬಿ ಹೆಚ್.ಎ.ಎಲ್ ಘಟಕವನ್ನೇ ಗೋವಾಕ್ಕೆ ಶಿಪ್ಟ್ ಮಾಡುವುದು ಬಹತೇಕ ಖಚಿತ ಎಂಬ ನಿಲುವು ಎಲ್ಲರಲ್ಲೂ ಮನೆ ಮಾಡಿತ್ತು.

 ಈ ಹಿನ್ನೆಲೆಯಲ್ಲಿ ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಈ ಬಗ್ಗೆ ಪತ್ರಿಕಾ ಘೋಷ್ಠಿ ನಡೆಸಿದಾಗ ನಮ್ಮ ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರವರು ಅನಧಿಕೃತ ವ್ಯಕ್ತಿಗಳ’ ಮಾತು ಕೇಳಬೇಡಿ, ಇದೆಲ್ಲಾ ಸುಳ್ಳು ಎಂದು ತಮ್ಮ ಅಣಿಮುತ್ತುಗಳೊಂದಿಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದರು.

 ಶ್ರೀ ಜಿ.ಎಸ್.ಬಸವರಾಜ್‌ರವರು ಹೆಚ್.ಎ.ಎಲ್ ತಂದಿದ್ದು ಎಲ್ಲಾ ಸರಿ ಆದರೆ ಆ ಕುಂದರನಹಳ್ಳಿಗೆ ತಂದಿದ್ದು ಸರಿಯಿಲ್ಲ ಎಂದು ಹೇಳುತ್ತಾರೆ ನಿಮ್ಮ ಆತ್ಮೀಯರು  ಎಂದು ನನಗೆ ಕೆಲವರು ಹೇಳುತ್ತಿದ್ದರು.

 ನಮ್ಮದೊಂದು ಹೆಚ್.ಎ.ಎಲ್ ಟೀಮ್ ಇದೆ. ಅವರೆಲ್ಲರ ಅಭಿಪ್ರಾಯ ತೆಗೆದು ಕೊಂಡೆ ನಮ್ಮ ರಾಜ್ಯದಲ್ಲಿ 28 ಜನ ಲೋಕಸಭಾ ಸದಸ್ಯರು ಇದ್ದಾರೆ, 12 ಜನ ರಾಜ್ಯಸಭಾ ಸದಸ್ಯರು ಇದ್ದಾರೆ, ಈಗ ನಾಮಿಷನ್ ರಾಜ್ಯಸಭಾ ಸದಸ್ಯರು ಇದ್ದಾರೆ. ಒಟ್ಟು 41 ಜನರಲ್ಲಿ ಒಬ್ಬರು ನಮಗೆ ಸ್ಪಂಧಿಸಲಿಲ್ಲ ಎಂದರೆ ಉಳಿದವರಲ್ಲಿ ನಮಗೆ ಬೆಂಬಲ ನೀಡುವ ಕನಿಷ್ಟ ಒಬ್ಬರು ಸಿಗುವುದಿಲ್ಲವೇ?

ಯೋಜನೆ ನಮ್ಮೂರಿಗೆ ಸೀಮಿತವಾಗಿಲ್ಲ, ನಮ್ಮ ತಾಲ್ಲೂಕಿಗೆ ಸೀಮಿತವಾಗಿಲ್ಲ, ನಮ್ಮ ಜಿಲ್ಲೆಗೆ ಸೀಮಿತವಾಗಿಲ್ಲ,  ರಾಜ್ಯಕ್ಕೆ ಕೀರಿಟ ತರುವ ಯೋಜನೆ ಎಂದು ನಿರ್ಣಯಿಸಿ ರಾಜ್ಯದ ಎಲ್ಲಾ ಸಂಸದರಿಗೆ ಬರೆದ ಪತ್ರ.