TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಹೆಚ್.ಎ.ಎಲ್ ಗೆ ನೀಡಿದ್ದ 610 ಎಕರೆ ಭೂಮಿ ವಿವಾದ ಹೈಕೋರ್ಟ್‌ನಲ್ಲಿರುವುದರಿಂದ ಗೋವಾದಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪಿಸಲು ಫಿಸಿಬಿಲಿಟಿ ರಿಪೋರ್ಟ್ ತಯಾರಿಸಲು 2015 ರಲ್ಲಿ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ಸೂಚನೆ ಇಲಾಖಾ ಅಧಿಕಾರಿಗಳಲ್ಲಿ ತಲ್ಲಣ ಮೂಡಿಸಿತು. ಗುಬ್ಬಿ ಹೆಚ್.ಎ.ಎಲ್ ಘಟಕವನ್ನೇ ಗೋವಾಕ್ಕೆ ಶಿಪ್ಟ್ ಮಾಡುವುದು ಬಹತೇಕ ಖಚಿತ ಎಂಬ ನಿಲುವು ಎಲ್ಲರಲ್ಲೂ ಮನೆ ಮಾಡಿತ್ತು.
ಚುನಾಯಿತ ಜನಪತ್ರಿನಿಧಿಗಳಿಗೆ, ಸಾರ್ವಜನಿಕರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮದವರಿಗೆ ’ಈಗ ಏನಾಗಿದೆ ಮತ್ತು ಮುಂದೆ ಏನಾಗಬೇಕು’ ಎಂಬ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ತಂಡ ’ಹೆಚ್.ಎ.ಎಲ್ ಉಳಿಸಿ’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಿತು.