27th July 2024
Share

TUMAKURU:SHAKTHIPEETA FOUNDATION

 ತುಮಕೂರು ನಗರಕ್ಕೆ ಕುಡಿಯುವ ನೀರಿಗಾಗಿ ಹೇಮಾವತಿ ನೀರು ಬಿಡಲು ಇದೇ ಮೊದಲ ಭಾರಿಗೆ ಜಿಐಎಸ್ ಆಧಾರಿತ ಸೆಕ್ಯೂರಿಟಿ ಮತ್ತು ನಿರ್ಧಿಷ್ಠ ನೀರಿನ ಲೇಯರ್ ಮಾಡುವ ಕೆಲಸವನ್ನು ‘ತುಮಕೂರು-ಜಿಐಎಸ್’ಅಂತಿಮಗೊಳಿಸುವ ಹಂತಕ್ಕೆ ಬಂದಿದೆ ಎಂದು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.

  ಈ ತಿಂಗಳ ಕೊನೆಯವಾರ ಅಥವಾ ಮುಂದಿನ ತಿಂಗಳ ಮೊದಲನೆ ವಾರದಲ್ಲಿ ಹಾಸನ ಜಿಲ್ಲೆಯ ಹೇಮಾವತಿ ಡ್ಯಾಂನಿಂದ ನೀರು ಬಿಡಲು ಸಿದ್ಧತೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಆದೇಶ ನೀಡುವ ಮೊದಲು ಎಷ್ಟು ನೀರಿದೆ, ಎಲ್ಲೆಲ್ಲಿಗೆ ಎಷ್ಟೆಷ್ಟು ನೀರು ಬಿಡಬೇಕು ಎಂಬ ಬಗ್ಗೆ ರೂಪುರೇಷೆ ನಿರ್ಧರಿಸುವಾಗ, ‘ಆಯಾ ಶಾಸಕರು ಒಪ್ಪಿದ ನಂತರ ಯಾರು ಸಹ ರಾಜಕೀಯ ಮಾಡದೆ ‘ನೀರು ಹಂಚಿಕೊಳ್ಳುವ ಕೆಲಸ ಮಾಡುವುದು ಅನಿವಾರ್ಯವಾಗಿದೆ.

 ಹಾಸನ ಮತ್ತು ತುಮಕೂರು ಎರಡು ಜಿಲ್ಲೆಗಳ ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿರವರು, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ರಾಕೇಶ್‌ಸಿಂಗ್‌ರವರು, ಜಿಲ್ಲಾಧಿಕಾರಿ ಶ್ರೀ ರಾಕೇಶ್‌ಕುಮಾರ್ ರವರು, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ನೀರಿನ ದಾಹ ಇರುವ ಸಂದರ್ಭದಲ್ಲಿ ‘ಕುಡಿಯುವ ನೀರನ್ನು ತುಪ್ಪ ಬಳಸುವ’ ರೀತಿಯಲ್ಲಿ ಬಳಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಚಿಂತನೆ ನಡೆಸಿದ್ದಾರಂತೆ.

  ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಜಿಪಂ ಸಿ.ಇ.ಓ ಮತ್ತು ತುಮಕೂರು ಜಿಲ್ಲಾ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್ ರವರು ತುಮಕೂರು-ಜಿಐಎಸ್’ ನಲ್ಲಿ ಹೇಮಾವತಿ ನೀರಿನ ಬಳಕೆ ಮತ್ತು ಸೆಕ್ಯೂರಿಟಿ ಬಗ್ಗೆ ವಿಶೇಷ ಲೇಯರ್ ಮಾಡಲು ಈ ಹಿಂದೆಯೇ ಸೂಚಿಸಿದ್ದರ ‘ದಿಶಾ ಸಮಿತಿಯ ದಿಟ್ಟ ನಿರ್ಧಾರದ ಪರಿಣಾಮ ‘ ಈಗ ಬಳಕೆಗೆ ಬರಲಿದೆಯಂತೆ.

 ತುಮಕೂರು ಪೋಲೀಸ್ ಮುಖ್ಯಸ್ಥರಾದ ಶ್ರೀ ಕೋನಾ ವಂಶಿಕೃಷ್ಣರವರು ಯಾವ ಯಾವ ಡಿಸ್ಟ್ರಿಬ್ಯೂಟರ್ ಬಳಿ ಸೆಕ್ಯೂರಿಟಿ ಹಾಕಬೇಕು, ಅವರಿಗೆ ಎಷ್ಟು ದೂರದ ಕೆನಾಲ್ ಜವಾಬ್ಧಾರಿ ನೀಡಬೇಕು. ಎಂಬ ಬಗ್ಗೆ ‘ಜಿಐಎಸ್ ಲೇಯರ್’ ಸಿದ್ಧತೆ ಮಾಡುತ್ತಿದ್ದಾರಂತೆ ಅಲ್ಲಿ ಕಾರ್ಯನಿರ್ವಹಿಸುವವರ ಮೊಬೈಲ್ ಸಂಖ್ಯೆ, ವೇಳೆ ಇತ್ಯಾದಿ ಹಾಗೂ ತುಮಕೂರಿಗೆ ನೀರು ಬಿಡುವ ಈ ಸಮಯದಲ್ಲಿ ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿ ಮತ್ತು ತುಮಕೂರು ಜಿಲ್ಲೆ ಪೋಲೀಸ್ ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆಯೂ ರೂಪುರೇಷೆ ನಿರ್ಧರಿಸುತ್ತಾರಂತೆ.

 ಹೇಮಾವತಿ ಮುಖ್ಯ ಇಂಜಿನಿಯರ್‌ಗಳಾದ ಶ್ರೀ ಮಂಜಪ್ಪನವರು, ಶ್ರೀ ಬಾಲಕೃಷ್ಣರವರು, ಎಸ್.ಇ. ಶ್ರೀ ವರದಯ್ಯನವರು ಮತ್ತು ಇಇ ಶ್ರೀ ಮೋಹನ್ ಕುಮಾರ್ ರವರು ಸೇರಿದಂತೆ ಹೇಮಾವತಿ ಇಂಜಿನಿಯರ್ ತಂಡ ಎಲ್ಲೆಲ್ಲಿ ಎಷ್ಟೆಷ್ಟು ಪ್ರಮಾಣದ ನೀರನ್ನು ಎಷ್ಟು ದಿವಸ ಬಿಡಬೇಕು ಎಂಬ ಬಗ್ಗೆ ‘ನೀರಿನ ಪ್ರಮಾಣದ ಜಿಐಎಸ್ ಲೇಯರ್ ‘ಸಿದ್ಧತೆ ಮಾಡುತ್ತಿದ್ದಾರಂತೆ. ಹೇಮಾವತಿ ವ್ಯಾಪ್ತಿಯ ಎಲ್ಲಾ ಕಾಲುವೆಗಳ, ಕೆರೆಗಳ ಅಚ್ಚುಕಟ್ಟು ಪ್ರದೇಶಗಳ, ಜಿಐಎಸ್ ಲೇಯರ್ ಮಾಡುವ ಮೂಲಕ ಬೆರಳ ತುದಿಯಲ್ಲಿ ಇತಿಹಾಸ ಸಹಿತ ಮಾಹಿತಿ ಸಂಗ್ರಹಿಸಿದ್ದಾರಂತೆ.

 ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿ ಹಾಗೂ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಶ್ರೀ ಭೂಬಾಲನ್ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಇಂಜಿನಿಯರ್‌ಗಳ  ತಂಡ ‘ತುಮಕೂರು ನಗರದ ನೀರಿಗೆ ಸಂಬಂಧಿಸಿದ ವಿವಿಧ ಜಿಐಎಸ್ ಆಧಾರಿತ ಲೇಯರ್‌’ಗಳನ್ನು ಶೀಘ್ರವಾಗಿ ಅಂತಿಮಗೊಳಿಸಲು ಕ್ರಮ ಕೈಗೊಂಡಿದ್ದಾರಂತೆ.

 ಗೊರೂರು ಡ್ಯಾಂನಿಂದ ತುಮಕೂರು ಬುಗಡನಹಳ್ಳಿ ಕೆರೆವರೆಗಿನ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಸದಸ್ಯರು ಪ್ರತಿ ವರ್ಷ ನಾವು ಗದರಿಸಿ ನೀರು ಪಡೆಯುತ್ತಿದ್ದೆವು. ಈಗ ಇಷ್ಟೊಂದು ‘ಡಿಜಿಟಲ್ ಆಗಿದ್ದಾರಲ್ಲಪ್ಪಾ’ ಎಂದು ಯೋಚಿಸುವ ಕಾಲ ಬಂದಿದೆಯಂತೆ.

 ಸಾಧ್ಯವಾದಲ್ಲಿ ಹೇಮಾವತಿ ಕೆನಾಲ್ ಮೇಲೆ ಡ್ರೋನ್ ನಿಂದ ಚಿತ್ರೀಕರಣ, ನೀರಿನ ಬಳಕೆಗೆ ಸುಗ್ರೀವಾಜ್ಞೆ ತರುವುದು, 144 ಸೆಕ್ಷನ್ ಜಾರಿ ಇತ್ಯಾದಿ ಬಗ್ಗೆ ಯೋಚಿಸುತ್ತಿದ್ದಾರಂತೆ. ಕಷ್ಟ ಕಾಲದಲ್ಲಿ ನೀರನ್ನು ಹಂಚಿ ಬಳಸಲು ಅಧಿಕಾರಿಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುತ್ತಿದ್ದಾರಂತೆ.