2nd March 2024
Share

 TUMAKURU: SHAKTHIPEETA FOUNDATION

  ವಿಶ್ವದ ಎಲ್ಲಾ ದೇಶಗಳು ಇಂದು ಕೊರೊನಾ ಮಹಾಮಾರಿಯಿಂದ ನರಳುತ್ತಿವೆ. ಮುಂದೊಂದು ದಿವಸ ಇದೇ ಮಾದರಿ ನರಳಾಟ ಕುಡಿಯುವ ನೀರಿನಿಂದ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಬೋರ್ ವೆಲ್ ಬಕಾಸುರರ’ ಹಾವಳಿಯಿಂದ ಆಳಕ್ಕೆ ಹೋದಂತೆಲ್ಲಾ ದೊರೆಯುವುದು ವಿಷದ ನೀರೇ.

 ನೀರಿಗಾಗಿ ಯುದ್ದ ನಡೆಯಲಿದೆ ಎಂಬುದು ಒಂದು ವಾದವಾದರೆ. ವಿಷದ ನೀರಿನಿಂದ ಬಯಾಲಜಿಕಲ್ ವಾಟರ್‌ವಾರ್’ ಮೂಂಚಣೆಗೆ ಬರಲಿದೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದಲ್ಲಿ ಅನುಭವಿಸಲು ಎಲ್ಲರೂ ಮಾನಸಿಕವಾಗಿ ಸಿದ್ಧರಾಗಬೇಕು.

 ನೀರಿನ ಅಧ್ಯಯನ, ಸ್ಥಿತಿಗತಿ, ಸಾಧಕ-ಭಾದಕಗಳನ್ನು ಅರಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸುತ್ತಿವೆ. ಆದರೇ ಈ ಎಲ್ಲಾ ಯೋಜನೆಗಳ ಪಲಿತಾಂಶ ಏನಾಗಿದೆ ಎಂಬ ಮಾಹಿತಿ ಯಾರ ಬಳಿ ಇದೆ’ ಎಂಬುದು ಒಂದು ಯಕ್ಷಪ್ರಶ್ನೆ.

 ಮಳೆ ನೀರಿನಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ತರುವುದು ಸರ್ಕಾರದಿಂದ ಸಾಧ್ಯವಿಲ್ಲ, ಪ್ರತಿ ಗ್ರಾಮದ ಜನತೆ ’ ಮಳೆ ನೀರು ಸಂಗ್ರಹದ ಹೊಣೆಗಾರಿಕೆ ಜವಾಬ್ಧಾರಿ ಪಡೆಯಲೇ ಬೇಕು. ಆದರೇ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಜಾರಿ ಸರ್ಕಾರಗಳ’ ಹೊಣೆಗಾರಿಕೆ.

 ಶಕ್ತಿಪೀಠ ಫೌಂಡೇಷನ್’ ಕರ್ನಾಟಕ ರಾಜ್ಯದ 29340 ಗ್ರಾಮಗಳಲ್ಲಿರುವ ಸುಮಾರು 38608 (ಗೊಂದಲವಿದೆ) ಜಲಸಂಗ್ರಹಾಗಾರಗಳನ್ನು   ಗಂಗಾಮಾತೆ’ ದೇವಾಲಯವೆಂದು ಭಾವಿಸಿ. ಪ್ರತಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್’ ರಚಿಸಿ, ಕರಾರುವಕ್ಕಾದ ಡಿಜಿಟಲ್ ಮಾಹಿತಿ ಸಂಗ್ರಹಿಸಿ, ಅವುಗಳನ್ನು ಸಂರಕ್ಷಣೆ ಮಾಡುವ ಜವಾಬ್ಧಾರಿಯನ್ನು ಪಡೆಯಲು ಮಹಿಳೆಯರು ಮುಂದಾಗಬೇಕು. ಈ ಕನಸಿನ/ಕಾಲ್ಪನಿಕ ಯೋಜನೆಯನ್ನು ಸರ್ಕಾರಗಳು ಅನುಷ್ಠಾನಕ್ಕೆ ತರಬೇಕು.

 ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಯೋಜನೆ ಘೋಶಿಸಿ ನದೀ ನೀರಿನಲ್ಲಿ ಸಾಮಾಜಿಕ ನ್ಯಾಯ ದೊರಕಿಸಲು, ವಿಶ್ವದ 108 ಶಕ್ತಿಪೀಠಗಳ ಅಡಿದಾವರೆಯಲ್ಲಿ ಪೊಡಮಟ್ಟು’ ಅವಿರತವಾಗಿ ಶ್ರಮಿಸಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ದಿನಾಂಕ: 07.01.1997 ರಿಂದ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಮತ್ತು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರ ಜೊತೆಯಲ್ಲಿ ರಾಜ್ಯದ ಸಮಗ್ರ ನೀರಾವರಿ ಜಾರಿಗಾಗಿ ಹೋರಾಟ ನಡೆಸಿದ ಅನುಭವ ಮತ್ತು ಈಗಲೂ ಜಿ.ಎಸ್.ಬಸವರಾಜ್‌ರವರ ಜೊತೆ ನಡೆಸುತ್ತಲೇ ಇರುವ ನಿರಂತರ ಶ್ರಮದ ಜೊತೆಗೆ ರಾಜ್ಯದ ಮೂಲೆ ಮೂಲೆಗಳಲ್ಲಿರುವ ನೀರಾವರಿ ಹೋರಾಟಗಾರರ ಮತ್ತು ವಿಶ್ವದ, ದೇಶದ, ರಾಜ್ಯ ಮಟ್ಟದ ನೀರಾವರಿ ಪರಿಣಿತ ತಜ್ಞರ ವರದಿಗಳು, ಅಭಿಪ್ರಾಯಗಳು, ಸಲಹೆಗಳನ್ನು ಒಂದೆಡೆ ಕ್ರೋಢಿಕರಿಸಲು ಚಿಂತನೆ ನಡೆದಿದೆ.

 ಸ್ವಾತಂತ್ರ್ಯ ಪೂರ್ವದಿಂದ ಇದೂವರೆಗೂ’ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ವಿಶ್ವದ ಇತರೆ ದೇಶಗಳ ಮತ್ತು ರಾಜ್ಯಗಳ ಯೋಜನೆ ಇತ್ಯಾದಿ ನೀರಿಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದೇ ಕಡೆ ತರುವ ವಿಶಿಷ್ಠವಾದ ಮತ್ತು ಕಷ್ಟಕರವಾದ ಯೋಜನೆಗೆ ಮುಂದಾಗಿದೆ.

 ಈ ಯೋಜನೆಗೆ ಸಾವಿರಾರು ಜನರ ಸಹಕಾರ ಅಗತ್ಯವಿದೆ, ಎಲ್ಲರೂ ಡಿಜಿಟಲ್ ಮೂಲಕ ಒಗ್ಗಟ್ಟಾಗೋಣ’ ನಿಮ್ಮ ತಲೆಯಲ್ಲಿ ಅಡಗಿ ಕುಳಿತಿರುವ ನೀರಿನ ಜ್ಞಾನ ಭಂಢಾರ’ವನ್ನು ಸರ್ಕಾರಗಳಿಗೆ ದಾನ ಮಾಡಲು ಮುಂದಾಗಲು ವಿಶ್ವದ ಜನತೆಯಲ್ಲಿ ಮನವಿ.

 ನಮ್ಮ ಮತ್ತು ನಿಮ್ಮ ಬರವಣೆಗೆಯನ್ನು ಕನ್ನಡ, ಇಂಗ್ಲೀಷ್ ಸೇರಿದಂತೆ ದೇಶದ, ವಿಶ್ವದ ಯಾವುದೇ ಭಾಷೆಯಲ್ಲಿ ಭಾಷಾಂತರ ಮಾಡುವ ಜನರ ಅವಶ್ಯಕತೆ’ಯಿದೆ. ಅವರಿಗೂ ಸಹ ಹೃತ್ಪೂರ್ವಕವಾದ ಆಹ್ವಾನ.

About The Author