TUMAKURU: SHAKTHIPEETA FOUNDATION
ಶಕ್ತಿಪೀಠ ಇತಿಹಾಸ:- ಪ್ರಜಾಪತಿ ದಕ್ಷಬ್ರಹ್ಮ ’ಭಾರತ ದೇಶದ ಉತ್ತರಖಾಂಡ ರಾಜ್ಯದ ಹರಿದ್ವಾರದ ಕಂಕಲ್‌ನಲ್ಲಿ ಯಜ್ಞ’ ಮಾಡುವಾಗ ಮಗಳು ಸತಿ ಹಾಗೂ ಅಕೆಯ ಪತಿ ಈಶ್ವರನನ್ನು ಆಹ್ವಾನಿಸಲಿಲ್ಲ. ಕರೆಯದೇ ಇದ್ದರೂ ತನ್ನ ತಂದೆಯ ಮನೆಗೆ ಬಂದ ಸತಿಯನ್ನು ಎಲ್ಲರ ಮುಂದೆ ದಕ್ಷನು ಅವಮಾನ ಮಾಡಿದ. ಇದರಿಂದ ನೊಂದ ’ಸತಿ ಯಜ್ಞ ಕುಂಡಕ್ಕೆ ಬಿದ್ದಳು’ ಸುಟ್ಟ ಸತಿಯ ದೇಹವನ್ನು ಹೊತ್ತು ಈಶ್ವರನು ಇಹ ಪರಗಳ ಪರಿವೆಯಿಲ್ಲದೆ ಸಂಚರಿಸುವಾಗ ಹೆದರಿದ ದೇವತೆಗಳು ಮಹಾವಿಷ್ಣುವಿನ ಮೊರೆಹೋದರು.
ಆಗ ’ವಿಷ್ಣುವು ಸುದರ್ಶನ ಚಕ್ರದಿಂದ ಸತಿ ದೇಹವನ್ನು ಛಿದ್ರ-ಛಿದ್ರ ಮಾಡಿದ’ ಇದರಿಂದ ’ಸತಿ ದೇಹದ ಭಾಗಗಳು ಚಿದ್ರ, ಚಿದ್ರವಾಗಿ’ ರಕ್ತದ ಕಣಗಳು ಸೇರಿದಂತೆ ಸುಮಾರು 6400 ಭಾಗಗಳಾಗಿ ವಿಶ್ವದ್ಯಾಂತ ಬಿದ್ದಿದ್ದು, ಅದರಲ್ಲಿ 108 ಕ್ಷೇತ್ರಗಳು ಪ್ರಾಮುಖ್ಯತೆ ಪಡೆದಿವೆ ಎಂಬ ಇತಿಹಾಸವಿದೆ, ಈ ಸ್ಥಳಗಳೇ ಶಕ್ತಿಪೀಠಗಳಾಗಿವೆ ಎಂಬುದು ಐತಿಹ್ಯ, ’108 ಶಕ್ತಿಪೀಠಗಳಲ್ಲಿ, 4 ಆದಿ ಶಕ್ತಿಪೀಠ, 9 ನವದುರ್ಗೆಯರು, 18 ಮಹಾಶಕ್ತಿಪೀಠ, 51 ಅಕ್ಷರ ಪೀಠಗಳು, ಮತ್ತು ಇತರೆ 57 ಉಪ ಪೀಠಗಳು’ ಎಂಬುದು ನಂಬಿಕೆ. ಕೆಲವರು 72 ಶಕ್ತಿಪೀಠಗಳಿವೆ ಎಂತಲೂ, ಕೆಲವರು 51 ಶಕ್ತಿಪೀಠಗಳಿವೆ ಎಂತಲೂ ದಾಖಲಿಸಿದ್ದಾರೆ. ಈ ಬಗ್ಗೆ ವಿವರವಾದ ಅಧ್ಯಯನ ಮಾಹಿತಿಗಳ ಸಂಗ್ರಹ ಆರಂಭವಾಗಿದೆ.
ಭಾರತ ದೇಶದಲ್ಲಿ-41 ಅಕ್ಷರ ಪೀಠಗಳು, ಬಾಂಗ್ಲಾದೇಶದಲ್ಲಿ-4, ನೇಪಾಳದಲ್ಲಿ-3, ಪಾಕಿಸ್ತಾನದಲ್ಲಿ-1, ಶ್ರೀಲಂಕಾದಲ್ಲಿ-1 ಮತ್ತು ಟಿಬಿಟ್‌ನಲ್ಲಿ -1 ಸೇರಿದಂತೆ ಒಟ್ಟು 51 ಅಕ್ಷರ ಪೀಠಗಳು ಮತ್ತು ಉಳಿದ 57 ಶಕ್ತಿ ಪೀಠಗಳು ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿವೆ ಎಂಬ ಮಾಹಿತಿ ಇದೆ.
ನಂಬಿಕೆಯೇ ಅಂತಿಮ:- ಸಂಗ್ರಹವಾಗುವ ಎಲ್ಲಾ ಮಾಹಿತಿಗಳು ನಮ್ಮ ನಂಬಿಕೆಯ ಮೇಲೆ ನಿಂತಿವೆ. ಯಾರು ನೋಡಿರುವವರು ಇಲ್ಲ, ಖಚಿತವಾಗಿ ಹೇಳುವವರು ಇಲ್ಲ. ಆದರೂ ’ನಂಬಿಕೆಯೇ ದೇವರು’
ಸರ್ವ ಜನಾಂಗ ಪೂಜಿಸುವ ದೇವತೆ:- ಆದಿಶಕ್ತಿಯನ್ನು ಪ್ರಪಂಚದಲ್ಲಿ ವಾಸಿಸುವ ಎಲ್ಲಾ ಜನಾಂಗದವರೂ ಆರಾಧಿಸುತ್ತಾರೆ ಕಾಲೋನಿಗಳಲ್ಲಿ ಶ್ರೀ ಕೆಂಪಮ್ಮ, ಶ್ರೀ ಮಾರಮ್ಮ ಎಂದು ಕರೆದರೆ, ಹಣವಂತರೂ ಶ್ರೀ ಕನಕಲಕ್ಮಿ ಎಂತಲೂ, ಬುದ್ದಿವಂತರೂ ಶ್ರೀ ಶಾರದಾಂಬೆ ಎಂತಲೂ, ಶಿವಭಕ್ತರು ಪಾರ್ವತಿ ಎಂತಲೂ ಮುಸ್ಲಿಂಮರು ಶ್ರೀ ಡೋಲಾಮಾತೆ ಎಂತಲೂ ಕರೆಯುತ್ತಾರೆ ಎಂಬ ಮಾತಿದೆ. ಪ್ರಗತಿಪರರು ಸಹ ನೀರನ್ನು ’ಶ್ರೀ ಗಂಗಾಮಾತೆ’ ಎಂದು ಒಪ್ಪುತ್ತಾರೆ, ಅರ್ಥಾತ್ ’ಎಲ್ಲರೂ ಪೂಜಿಸುವ ಏಕೈಕ ದೇವತೆ’ ದೇವಿಗೆ ಹೆಸರು ನೂರಾರು ಆದರೂ ಶ್ರೀ ಸತಿ ಒಬ್ಬಳೇ, ಭಕ್ತಿ ಮತ್ತು ಆರಾಧನೆ ಒಂದೇ.
ಹಿಂದಿನ ಇತಿಹಾಸದ ಪುಟಗಳನ್ನು ನೋಡಿದಾಗ ‘ಕೊರೊನಾ ಮಾದರಿಯ ಯಾವುದೇ ಇನ್ ಪ್ಲೂಯೆಂಝಾ,ಪ್ಲೇಗು, ಸಿಡುಬು ಇತ್ಯಾದಿ ರೋಗಗಳು ಬಂದಾಗಲೆಲ್ಲಾ ಪ್ರತಿಯೊಂದು ಗ್ರಾಮದ ಜನತೆ ತಮ್ಮ ಗ್ರಾಮದೇವತೆಗೆ ’ಅಮ್ಮ’ ಎಂದು ಪೂಜಿಸಿರುವುದು ಪ್ರಾಮುಖ್ಯತೆ ಪಡೆದಿದೆ.
ನಮ್ಮ ರಾಜ್ಯದ ಎಲ್ಲಾ ಪಕ್ಷಗಳ, ಯಾವುದೇ ಜಾತಿಯ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಒಂದಲ್ಲ ಒಂದು ಶಕ್ತಿಪೀಠಗಳಿಗೆ, ಸಿದ್ಧಿದೇವತೆಗಳಿಗೆ ಹೋಮ, ಯಜ್ಞ, ಇತ್ಯಾದಿ ವಿಶಿಷ್ಟ ಪೂಜೆ ಮಾಡುವ ’ಟೆಂಪಲ್‌ರನ್ ಯುಗ’ಆರಂಭವಾಗಿತ್ತು.
ಕೊರೊನಾ ಪ್ರಯುಕ್ತ ಶಕ್ತಿದೇವತೆಗಳ ಪೂಜೆಗೆ ಲಾಕ್‌ಡೌನ್ ಅಡ್ಡ ಬಂದಿರಬಹುದು. ಆದರೇ ಎಲ್ಲಾ ವರ್ಗದ ಜನರು ಅವರವರ ಮನೆಯಲ್ಲಿಯೇ ಶಕ್ತಿದೇವತೆಗಳ ಆರಾಧನೆ ಮಾಡುತ್ತಿರುವುದು ಮೌನ ಕ್ರಾಂತಿಯಂತಿದೆ. ಲಾಕ್‌ಡೌನ್ ಮುಗಿದ ತಕ್ಷಣ ಎಲ್ಲಾ ’ಗ್ರಾಮದೇವತೆಗಳ ವಿಶಿಷ್ಟ ಪೂಜೆ’ ಪ್ರತಿಯೊಂದು ಗ್ರಾಮದಲ್ಲಿಯೂ ಬಹುತೇಕ ನಡೆಯಲಿದೆ.
ಚುನಾಯಿತ ಜನಪ್ರತಿನಿಧಿಗಳು ಇದೂವರೆಗೂ ಆಹಾರ ಕಿಟ್, ಊಟ, ತಿಂಡಿ, ತರಕಾರಿ, ಔಷಧಿ ಹೀಗೆ ಅವರವರ ಮನಸ್ಸಿಗೆ ಬಂದ ಎಲ್ಲಾ ಸೇವೆಗಳನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ಮುಗಿದ ತಕ್ಷಣ ’ಶಕ್ತಿದೇವತೆಗಳ ಮಹಾಪೂಜೆಗೆ’ ಎಲ್ಲರೂ ಸಿದ್ಧವಾಗುವುದು ಅನಿವಾರ್‍ಯವಾಗಲಿದೆ.
ಯಜ್ಞ ನಡೆದ ಸ್ಥಳವನ್ನು ನೋಡಿಕೊಂಡು ಬರಲು ಒಂದು ಭಕ್ತರ ತಂಡದೊಂದಿಗೆ ಹೋಗಿದ್ದೇವು, ಅಲ್ಲಿನ ಒಬ್ಬರು ಪೋಲೀಸ್ ಐಪಿಎಸ್ ಅಧಿಕಾರಿ ನೀಡಿದ ಆತಿಥ್ಯ ನಿಜಕ್ಕೂ ಅದ್ಭುತವಾಗಿತ್ತು. ಅವರ ಹೆಸರು ಪ್ರಕಟಿಸಲು ಅವರ ಅನುಮತಿ ಸಿಕ್ಕಿಲ್ಲ.
ಕೊರೊನಾ ಲಾಕ್‌ಡೌನ್ ಮುಗಿದ ನಂತರ 108 ಶಕ್ತಿಪೀಠಗಳಿಗೂ ಪ್ರವಾಸ ಯಾತ್ರೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. www.shakthipeeta.in ತಾವು ಭೇಟಿ ನೀಡಿ ನೀವೂ ಮಾಡಿದ್ದ ಪ್ರವಾಸ ಯಾತ್ರೆಯ ಅನುಭವಗಳನ್ನು ಆಯಾ ರಾಜ್ಯದ ಶಕ್ತಿಪೀಠಗಳಲ್ಲಿ ಕಾಮೆಂಟ್ ಮಾಡಲು ಮನವಿ ಮಾಡಲಾಗಿದೆ.
ಶಕ್ತಿಪೀಠ ಫೌಂಡೇಷನ್ ಮನವಿ.
ವಿಶ್ವದ, ದೇಶಗಳವಾರು, ರಾಜ್ಯವಾರು ಮತ್ತು ಜಿಲ್ಲೆಗಳ ಮಟ್ಟಗಳಲ್ಲಿ ಇರುವ 108 ಶಕ್ತಿಪೀಠಗಳ ಮಾಹಿತಿಯನ್ನು ಸಂಗ್ರಹಿಸಿ www.shakthipeeta.in ಪ್ರಕಟಿಸಲಾಗಿದೆ. ತಮಗೆ ಗೊತ್ತಿರುವ ಮಾಹಿತಿ ನೀಡಲು ಮನವಿ.
SHAKTHIPEETA FOUNDATION APPEAL
www.shakthipeeta.in published known information on World Wise, Country wise, state wise & District level of 108 shakthipeetas, we request to Comment/send information from your side also.
-Kundaranahalli Ramesh