16th September 2024
Share
ಜಲಗ್ರಾಮ ಕ್ಯಾಲೆಂಡರ್ ಎಲ್ಲಾ ಇಲಾಖೆಗಳು ವಾಟರ್ ಬಾಡಿ ಗುರತು ಮಾಡಬೇಕು.

TUMAKURU:SHAKTHIPEETA FOUNDATION

 ತುಮಕೂರಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕೇಂದ್ರ ಸರ್ಕಾರದ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಗ್ರಾಮ ಕ್ಯಾಲೆಂಡರ್’ ಪ್ರದರ್ಶನ ಮಾಡಿದ್ದರು.

  ಕೇಂದ್ರ ಸರ್ಕಾರದ ನಾಲ್ಕು ಇಲಾಖೆಯ ಕಾರ್ಯದರ್ಶಿಗಳು ಸಹಿ ಮಾಡಿರುವ ಈ ಪತ್ರದಲ್ಲಿನ ಅಂಶಗಳನ್ನು ಗಮನಸಿ ಎಷ್ಟೊಂದು ಸೊಗಸಾಗಿದೆ. ಇದೇ ಜಲಗ್ರಾಮ ಕ್ಯಾಲೆಂಡರ್’ ಪರಿಕಲ್ಪನೆ. ಮಾನ್ಯ ಮುಖ್ಯ ಮಂತ್ರಿಗಳು ಸಹ ಆಯವ್ಯಯದಲ್ಲಿ ವಿಷಯ ಮಂಡಿಸಿದ್ದಾರೆ. ತುಮಕೂರು ಜಿಲ್ಲಾ ದಿಶಾ ಸಮಿತಿ ಕೈಗೊಂಡ ನಿರ್ಣಯ, ಚಾಲನೆ ನೀಡಿದ ಯೋಜನೆಗಳು, ಕೇಂದ್ರ ಮತ್ತು ರಾಜ್ಯಸರ್ಕಾರಗಳ ಗಮನ ಸೆಳೆದ ಶ್ರಮಕ್ಕೆ ’ಪ್ರತಿಫಲ’ ದೊರೆದಂತಾಗಿದೆ.

ಜಿಲ್ಲಾ ಮಟ್ಟದ ದಿಶಾ ಸಮಿತಿಗಳು ದೃಢ ನಿಲುವು ತಳೆಯಬೇಕು. ಲೋಕಸಭಾ ಸದಸ್ಯರುಗಳು ಚುರುಕಾಗಬೇಕು. ಈ ಯೋಜನೆಗೆ ಅತಿ ಹೆಚ್ಚು ಅನುದಾನ ಬಳಸಿಕೊಳ್ಳಲು ಕಾರ್ಯತಂತ್ರ ರೂಪಿಸ ಬೇಕು. 224 ವಿಧಾನಸಭಾ ಕ್ಷೇತ್ರದ ಸದಸ್ಯರು ತಮ್ಮ ಪ್ರತಿ ಗ್ರಾಮ. ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಿಧಾನಸಭಾ ಕ್ಷೇತ್ರಗಳಲ್ಲೂ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರವನ್ನು ರೂಪಿಸಿ, ನದಿ ನೀರಿನ ಅಲೋಕೇಷನ್’ ನಿಗದಿಗೊಳಿಸಲು ಶ್ರಮಿಸ ಬೇಕಿದೆ.

ರಾಜ್ಯ ಸರ್ಕಾರ ಒಂದು ಸರ್ಕಾರಿ ಆದೇಶ ಹೊರಡಿಸುವುದು ಅಗತ್ಯವಾಗಿದೆ.

  ಪ್ರಧಾನ ಮಂತ್ರಿ ಶ್ರೀ ನರೇಂದ್ರಮೋದಿಯವರ ನೇತೃತ್ವದಲ್ಲಿನ ಕೇಂದ್ರ ಸರ್ಕಾರ  ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳನ್ನು ಒಂದೇ ಸೂರಿನಡಿ ತಂದು ಜಲಶಕ್ತಿ’ ಸಚಿವಾಲಯ ರಚಿಸಿ ಮಹತ್ತರವಾದ ನಿರ್ಧಾರ ಕೈಗೊಂಡಿದೆ.

  ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಈ ಬಗ್ಗೆ ಏಕೋ ಏನೋ ಇನ್ನೂ ಗಮನ ಹರಿಸಿಲ್ಲ, ರಾಜ್ಯದಲ್ಲಿ ದಿಕ್ಕು ದೆಸೆಯಿಲ್ಲದೆ ಸಚಿವರಿಗೊಂದು ನೀರಾವರಿ ಯೋಜನೆ ರೂಪಿಸುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.

ಜಲಸಂಪನ್ಮೂಲ  ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಇಲಾಖೆಯ ಅಧೀನದಲ್ಲಿರುವ Advanced Centre For Integrated Water Resources Management (ACIWRM) ಸಂಸ್ಥೆಗೆ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸ್ಥಾಪಿತವಾಗಿದ್ದು, ಇಲ್ಲಿನ ಪ್ರಮುಖ ಉದ್ದೇಶ ನೀರಾವರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಮನ್ವಯತೆಯೇ ಆಗಿದೆಯಂತೆ.

ಜಲಸಂಪನ್ಮೂಲ  ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ರವರ –  ವಿವಿಧ ಇಲಾಖೆಗಳಿಗೆ ಅಗತ್ಯವಿರುವ ನದಿ ನೀರು ನೀಡಲು ಮುಂದಾಗಬೇಕು.

2020-21 ನೇ ಆಯವ್ಯದಲ್ಲಿ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರ ರೂಪಿಸಲು ರಾಜ್ಯದ ಪ್ರತಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್’ ಮಾಡುವ ಮೂಲಕ ಪ್ರತಿ ಗ್ರಾಮದ ನೀರಿನ ಬಗ್ಗೆ ಗಮನಹರಿಸಲು ಉದ್ದೇಶಿಸಿದೆ. ಆದರೇ ಯಾವ ಇಲಾಖೆ ಎಂಬುದು ನಿಗದಿಯಾಗಿಲ್ಲ

ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪ ರವರ ಇಲಾಖೆ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರವನ್ನು ’ಜಲಾಮೃತ’ ಯೋಜನೆಯಲ್ಲಿ ನಾವೂ ಮಾಡುತ್ತೇವೆ ಎನ್ನುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಕೆ.ಎಸ್. ಈಶ್ವರಪ್ಪನವರ ಇಲಾಖೆ ‘ಅಂತರ್ಜಲ ಚೇತನ’ ಎಂಬ ಯೋಜನೆ ಬೇರೆ ಜಾರಿಗೆ ತಂದಿರುವುದಾಗಿ ಮಾಧ್ಯಮಗಳಲ್ಲಿ ಸಚಿವರು ಹೇಳಿಕೆ ನೀಡಿದ್ದಾರೆ.

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿ ಇಲಾಖೆ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರವನ್ನು ’ಅಟಲ್ ಭೂಜಲ್’ ಯೋಜನೆಯಲ್ಲಿ ನಾವೂ ಮಾಡುತ್ತೇವೆ ಎನ್ನುತ್ತಿದ್ದಾರೆ.

ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ. ಮಾಧುಸ್ವಾಮಿರವರ ಇಲಾಖೆಯ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ’ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರವನ್ನು ನಾವೂ ಮಾಡುತ್ತೇವೆ ಎನ್ನುತ್ತಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಈಗಾಗಲೇ ಕೃಷಿ ಸಚಿವರಾದ ಶ್ರೀ ಬಿ.ಸಿ.ಪಾಟೀಲ್ ರವರ ಇಲಾಖೆ  ರಾಜ್ಯ ಮತ್ತು ಜಿಲ್ಲಾ ಮಟ್ಟದ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ’ಯಡಿ ಸಿದ್ಧಪಡಿಸಿ ರಾಜ್ಯ ಇರ್ರಿಗೇಷನ್ ಮತ್ತು ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್ ಅನ್ನು ಕೇಂದ್ರ ಸರ್ಕಾರದ ವೆಬ್‌ಸೈಟ್‌ನಲ್ಲಿ ಅಫ್ ಲೋಡ್ ಮಾಡಿದೆ. 

ತುಮಕೂರಿನಲ್ಲಿ ಒಂದು ಮಾದರಿ ಪ್ರಯೋಗ’

ಶ್ರೀ ಜಿ.ಎಸ್.ಬಸವರಾಜ್‌ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿಯಲ್ಲಿ ನಿರ್ಣಯ ಮಾಡಿ ಜಾರಿಗೊಳಿಸಲು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶ್ರೀ ಮತಿ ಶಾಲಿನಿರಜನೀಶ್, ಈಗ  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಶ್ರೀ ರಾಕೇಶ್ ಸಿಂಗ್, ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿ.ಇ.ಹಾಗೂ ದಿಶಾ ಸಮಿತಿ ಕಾರ್ಯದರ್ಶಿ ಶ್ರೀಮತಿ ಶುಭಕಲ್ಯಾಣ್ ಮತ್ತು ಎಲ್ಲಾ ಇಲಾಖಾ ಅಧಿಕಾರಗಳು ಸಹ ಸ್ಪಂಧಿಸಿ ಕೆಲಸ ಆರಂಭಿಸಿದ್ದಾರೆ. ಕೇಂದ್ರದ ಪತ್ರ ಇವರಿಗೆ ಆನೆ ಬಲ ಬಂದಂತಾಗಿದೆ.

ಜಲಸಂಪನ್ಮೂಲ ಇಲಾಖೆ: ಕಾವೇರಿ ನೀರಾವರಿ ನಿಗಮದ ಮೂಲಕ ಇಲಾಖಾವಾರು ಅಗತ್ಯವಿರುವ ನದಿ ನೀರು ಕೊಡಲು ಮಾಸ್ಟರ್ ರೂಪಿಸಲು ಮುಂದಾಗಿದೆ. ಊರಿಗೊಂದು ಕೆರೆ- ಕೆರೆಗೆ ನದಿ ನೀರು’ ಹೇಮಾವತಿ, ಭಧ್ರಾ ಮೇಲ್ದಂಡೆ, ಎತ್ತಿನಹೊಳೆ, ತುಂಗಭಧ್ರಾ ಅಲೋಕೇಷನ್ ಜೊತೆಗೆ ಹೆಚ್ಚುವರಿ ನೀರಿನ ಮಾಲದ ಡಿಪಿಆರ್ ಮಾಡಲು ಮುಂದಾಗಿದೆ.

ಜಲಸಂಪನ್ಮೂಲ ಇಲಾಖೆ: ವಿಶ್ವೇಶ್ವರಯ್ಯ ಜಲ ನಿಗಮದ ಮೂಲಕ ಇಲಾಖಾವಾರು ಅಗತ್ಯವಿರುವ ನದಿ ನೀರು ಕೊಡಲು ಮಾಸ್ಟರ್ ರೂಪಿಸಲು ಮುಂದಾಗಿದೆ.

ಸಣ್ಣ ನೀರಾವರಿ ಇಲಾಖೆ: ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆಯ ಜಲಸಂಗ್ರಹಾಗಾರಗಳ ‘ಡಿಜಿಟಲ್ ಗಣತಿ’ ಮಾಡುತ್ತಿದೆ. (ಪ್ರಗತಿಯಲ್ಲಿದೆ)

ಸಣ್ಣ ನೀರಾವರಿ ಇಲಾಖೆ: ಅಟಲ್ ಭೂಜಲ್ ಇಲಾಖೆಯಿಂದ 5 ತಾಲ್ಲೂಕುಗಳಿಗೆ ಯೋಜನೆ ರೂಪಿಸಲಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ:  ಜಲಾಮೃತ ಇಲಾಖೆಯಿಂದ ಉಳಿದ 5 ತಾಲ್ಲೂಕುಗಳಿಗೆ ಯೋಜನೆ ರೂಪಿಸಬೇಕಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆ: ಜಿಲ್ಲೆಯ ಎಲ್ಲಾ ಗ್ರಾಮಗಳ ಜಲಗ್ರಾಮ ಕ್ಯಾಲೆಂಡರ್ ಯೋಜನೆಗೆ ಸಚಿವರ ಸಲಹೆ ಮೇರೆಗೆ ‘ನರೇಗಾ ಯೋಜನೆಯಡಿ ಹಣ ನೀಡಲು ನರೇಗಾ ಆಯುಕ್ತರು ‘ವಿಶೇಷ ಗಮನ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ: ಜಿಲ್ಲಾದ್ಯಾಂತ ಮನೆ ಮನೆಗೆ ಗಂಗೆ ಯೋಜನೆಗೆ ತುಮಕೂರು ಸೇರ್ಪಡೆ ಮಾಡಿಸಿ ಡಿಪಿಆರ್ ಮಾಡಬೇಕಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ: ಕೈಗಾರಿಕೆಗೆ ಅಗತ್ಯವಿರುವ ನೀರಿನ ಬೇಡಿಕೆಗೆ ಯೋಜನೆ ರೂಪಿಸಲು ಮುಂದಾಗಿದೆ.

ನಗರ ನೀರು ಸರಬರಾಜು ಮಂಡಳಿ: ನಗರ ಪ್ರದೇಶಗಳಿಗೆ ಅಗತ್ಯವಿರುವ ನೀರಿನ ಯೋಜನೆಗೆ ಮುಂದಾಗಿದೆ.

ಅರಣ್ಯ ಇಲಾಖೆ:- ಕಾಡು ಪ್ರಾಣಿಗಳಿಗೆ ಅಗತ್ಯವಿರುವ ನೀರಿನ ಯೋಜನೆಗೆ ಮುಂದಾಗಿದೆ.

ಜಲಸಂಗ್ರಹಾಗಾರಗಳ ಒತ್ತುವರಿ ತೆರವು: ಕಂದಾಯ ಇಲಾಖೆ ಒತ್ತುವರಿ ತೆರವು ಮಾಹಿತಿ ಸಂಗ್ರಹಿಸಿ ಒತ್ತುವರಿ ತೆರವು ಗೊಳಿಸಲು ಮುಂದಾಗಿದೆ.

ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ : ತುಮಕೂರು- ಜಿಐಎಸ್ ಮೂಲಕ ಎಲ್ಲಾ ಜಲಸಂಗ್ರಹಗಾರಗಳ ಜಿಐಎಸ್ ಲೇಯರ್ ಮಾಡುವ ಕೆಲಸ ಆರಂಭಿಸಿದೆ.

ಆಪ್: ಈ ಎಲ್ಲಾ ಮಾಹಿತಿಗಳನ್ನು ಆಫ್ ಮೂಲಕ ಸಂಗ್ರಹಿಸುವ ಕೆಲಸವನ್ನು ನೀರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಆರಂಭಿಸಿವೆ.