9th October 2024
Share

TUMAKURU:SHAKTHIPEETA FOUNDATION 

ಕರ್ನಾಟಕ ರಾಜ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರು ಮತ್ತು ತುಮಕೂರು ಲೋಕಸಭಾ ಸದಸ್ಯರು ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯ ಸಮಿತಿ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ರಾಜ್ಯದ ಸಮಗ್ರ ನೀರಾವರಿ ಬಗ್ಗೆ ಸಮಾಲೋಚನೆ ನಡೆಸಿದರು.

  ದಿನಾಂಕ:29.04.2020 ರಂದು ವಿಧಾನಸೌಧಲ್ಲಿ ಕೋವಿಡ್-19 ಬಂದು ಸುಮಾರು ದಿವಸಗಳ ಕೆಲಸಗಳು ನೆನೆಗುದಿಗೆ ಬಿದ್ದಿವೆ. ದೇಶದ ಆರ್ಥಿಕ ಸಂಕಷ್ಟದಿಂದ ಹೊಸ ಯೋಜನೆಗಳ ಅನುಷ್ಠಾನ ಯಾವ ರೀತಿ ಸಾಗುತ್ತದೆಯೋ ಗೊತ್ತಿಲ್ಲ.

  ಆದರೇ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರಿಗೆ ಬರೆದಿರುವ ಮೂರು ಪತ್ರಗಳಲ್ಲಿನ ಅಂಶಗಳು, ಪೈಲಟ್ ಯೋಜನೆಯಾಗಿ ತುಮಕೂರು ಜಿಲ್ಲೆಯ ಮಾಸ್ಟರ್ ಪ್ಲಾನ್ ಮಾಡುವ ಬಗ್ಗೆ ಮತ್ತು 2020-21 ನೇ ಆಯವ್ಯಯಪತ್ರದಲ್ಲಿ ಮಂಡಿಸಿರುವ ಯೋಜನೆಗಳ ಅಂಶಗಳ ಜಾರಿಗೆ ಏನೇನು ಕ್ರಮಕೈಗೊಳ್ಳ ಬಹುದಾಗಿದೆ ಎಂಬ ಬಗ್ಗೆ ಚರ್ಚಿಸಿದರು.

  ಸಚಿವರು ಅಧಿಕಾರಿಗಳಿಗೆ  ಸೂಚನೆ ನೀಡಿ ಜಲಸಂಪನ್ಮೂಲ ಇಲಾಖೆ ನೀರಿನ ಮಾತೃ ಇಲಾಖೆ’ ನೀರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒಂದೇ ಸೂರಿನಡಿ ತರಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.

 ಈ ಹಿನ್ನಲೆಯಲ್ಲಿ  ರಾಜ್ಯ ಸರ್ಕಾರದ ಆಯವ್ಯಯದಲ್ಲಿನ ವಿವಿಧ ಇಲಾಖೆಗಳ ಅಡಿಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ ನೀರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ಇದೂವರೆಗೂ ಬಳಸುತ್ತಿರುವ ರಾಜ್ಯದ ಒಂದೊಂದು ಹನಿ ನೀರಿನ ಡಿಜಿಟಲ್ ಡೇಟಾ ಮತ್ತು ಡಿಜಿಟಲ್ ಮ್ಯಾಪ್’ ಮಾಡುವ ಮೂಲಕ ರಾಜ್ಯದ ಪ್ರತಿಯೊಂದು ಹಳ್ಳಿಗೂ ಸಾಮಾಜಿಕ ನ್ಯಾಯದಡಿ ನದಿ ನೀರು ಅಲೋಕೇಷನ್’ ಮಾಡಲು ಕಾಲಮಿತಿ ಯೋಜನೆ ರೂಪಿಸಲು ಮತ್ತು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ  Advanced Centre For Integrated Water Resources Management (ACIWRM) ಸಂಸ್ಥೆಯಡಿ ಎಲ್ಲಾ ಇಲಾಖೆಗಳ ಸಭೆ ನಡೆಸಲು ಅಗತ್ಯ ಮಾಹಿತಿ ಸಂಗ್ರಹಿಸುವ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಬಸವರಾಜ್‌ರವರು ಸಮಾಲೋಚನೆ ನಡೆಸಲಿದ್ದಾರೆ.

  ಕೇಂದ್ರ ಸರ್ಕಾರದ ಮುಂದಿನ ಜಲಶಕ್ತಿ ಸಚಿವಾಲಯದ ಸಭೆ ವೇಳೆಗೆ ಕರಾರುವಕ್ಕಾದ ಮಾಹಿತಿ ಸಂಗ್ರಹಿಸಿಕೊಂಡು ಸಭೆಗೆ ಹಾಜರಾಗಲು ಉದ್ದೇಶಿಸಿರುವುದಾಗಿ ಬಸವರಾಜ್‌ರವರು ತಿಳಿಸಿದ್ದಾರೆ.

  1. ಜಲಾಮೃತ: (2020-21 ರ ಆಯವ್ಯಯ ಸಂಖ್ಯೆ-39)
  2. ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ ನೀಗಿಸುವ ಕಾರ್ಯತಂತ್ರ ರಾಜ್ಯದ ಪ್ರತಿ ಗ್ರಾಮದ ಜಲಗ್ರಾಮ ಕ್ಯಾಲೆಂಡರ್: (2020-21 ರ ಆಯವ್ಯಯ ಸಂಖ್ಯೆ-47)
  3. ಕಿಂಡಿ ಯೋಜನೆ:- (2020-21 ರ ಆಯವ್ಯಯ ಸಂಖ್ಯೆ-48)
  4. ಅಟಲ್ ಭೂಜಲ್: (2020-21 ರ ಆಯವ್ಯಯ ಸಂಖ್ಯೆ-49)
  5. ಇಸ್ರೇಲ್ ಪದ್ಧತಿ  ಮೈಕ್ರೋ ಇರ್ರಿಗೇಷನ್: (2020-21 ರ ಆಯವ್ಯಯ ಸಂಖ್ಯೆ-50)
  6. ಮಹಾದಾಯಿ ಯೋಜನೆ: (2020-21 ರ ಆಯವ್ಯಯ ಸಂಖ್ಯೆ-51)
  7. ಎತ್ತಿನ ಹೊಳೆ: (2020-21 ರ ಆಯವ್ಯಯ ಸಂಖ್ಯೆ-52)
  8. ‘ತುಂಗಾಭದ್ರಾ ಜಲಾಶಯ’ ದ ಹೂಳಿಗೆ ಪರ್‍ಯಾಯ ಯೋಜನೆ: (2020-21 ರ ಆಯವ್ಯಯ ಸಂಖ್ಯೆ-53)
  9. ಅಗತ್ಯವಿರುವ ಕಡೆ ‘ಏತ ನೀರಾವರಿ ‘ ಯೋಜನೆಗಳು: (2020-21 ರ ಆಯವ್ಯಯ ಸಂಖ್ಯೆ-54)
  10. ಕೃಷ್ಣಾ ನದಿಗೆ ಬ್ರಿಡ್ಜ್ : (2020-21 ರ ಆಯವ್ಯಯ ಸಂಖ್ಯೆ-55)
  11. 2022 ರೊಳಗೆ ಎಲ್ಲರ ಮನೆಗಳಿಗೆ ನಲ್ಲಿ ನೀರು ಜಲಜೀವನ್ ಮಿಷನ್/ ಜಲಧಾರೆ/’ಮನೆ ಮನೆಗೆ-ಗಂಗೆ’: (2020-21 ರ ಆಯವ್ಯಯ ಸಂಖ್ಯೆ-149)
  12. ‘ಗ್ರಾಮೀಣ ಮತ್ತು ನಗರ ಕುಡಿಯುವ ನೀರಿನ ಸಮಗ್ರ ನೀತಿ’ ಮತ್ತು ಇಲಾಖೆ, ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಬಗ್ಗೆ:( 2020-21 ರ ಆಯವ್ಯಯ ಸಂಖ್ಯೆ-150)
  13. ‘ಪೂರಕ ಆಯವ್ಯದಲ್ಲಿ ಸೇರ್ಪಡೆ ‘ಮಾಡಿರುವ ಕೃಷ್ಣಾ ಮತ್ತು ಇತರೆ ಯೋಜನೆಗಳು
  14. ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆ ಸಿದ್ಧಪಡಿಸಿರುವ ‘ರಾಜ್ಯ ಇರ್ರಿಗೇಷನ್ ಮತ್ತು ಡಿಸ್ಟ್ರಿಕ್ ಇರ್ರಿಗೇಷನ್ ಪ್ಲಾನ್‌’ನಲ್ಲಿರುವ ಅಂಶಗಳು.
  15. ಕೇಂದ್ರ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಮಾಹಿತಿ.
  16. ನದಿ ಜೋಡಣೆಗಳಿಂದ ರಾಜ್ಯಕ್ಕೆ ದೊರೆಯುವ ನೀರಿನ ಮಾಹಿತಿ.

 ಇನ್ನೂ ಮುಂತಾದ ಮಾಹಿತಿ ಸಂಗ್ರಹಿಸಲು ಚಿಂತನೆ ನಡೆಸಿದ್ದಾರೆ. ರಾಜ್ಯದ ‘224 ವಿಧಾನಸಭಾ ಕ್ಷೇತ್ರಗಳಲ್ಲೂ ಜಲಗ್ರಾಮ ಕ್ಯಾಲೆಂಡರ್’ ಸಿದ್ಧಪಡಿಸುವ ಮೂಲಕ ಅವರವರ ಕ್ಷೇತ್ರದ ವ್ಯಾಪ್ತಿಯ ನೀರಿನ ಆಯವ್ಯಯ, ನೀರಿನ ಆಡಿಟ್ ಮತ್ತು ನೀರಿನ ಕೊರತೆ’ ನೀಗಿಸಲು ಚುನಾಯಿತ ಜನಪ್ರತಿನಿಧಿಗಳು ಶ್ರಮಿಸುವುದು ಅಗತ್ಯವಾಗಿದೆ.