TUMAKURU:SHAKTHIPEETA FOUNDATION
ಭಾರತ ದೇಶದ ಮಾಜಿ ಪ್ರಧಾನಿಗಳಾದ ದಿ.ಇಂದಿರಾಗಾಂಧಿಯವರು, ದಿ.ರಾಜೀವ್ ಗಾಂಧಿಯವರು ಬಳಿ ಆಪ್ತ ಬಳಗದಲ್ಲಿ ಕಾರ್ಯನಿರ್ವಹಿಸಿದ್ದ ಮತ್ತು ದಿ.ನರಸಿಂಹರಾವ್‌ರವರ ಪೊಲಿಟಿಕಲ್ ಅಡ್ವೈಸರ್ ಆಗಿದ್ದ ಮತ್ತು ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರವರು ಪ್ರಧಾನಿಯಾಗುವಾಗ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ರಾಜ್ಯಸಭಾ ಸದಸ್ಯರು ಆದ ಶ್ರೀ ಸಚ್ಚಿದಾನಂದಸ್ವಾಮಿಜಿಯವರು ಮತ್ತು ಶ್ರೀ ಜಿ.ಎಸ್.ಬಸವರಾಜ್‌ರವರ ಸ್ನೇಹ ಬಹಳ ಅನೋನ್ಯವಾಗಿತ್ತು.
ಸ್ವಾಮೀಜಿಯವರು ವಿಶ್ವದ ಯಾವುದೇ ದೇಶಕ್ಕೆ ಯಾರೇ ಹೋಗಬೇಕು ಅಂದರೆ ಅಲ್ಲಿ ಅವರಿಗೆ ಗೊತ್ತಿರುವ ಜನರ ಪಟ್ಟಿಯೇ ಇರುತ್ತಿತ್ತು. ಅವರಿಗೆ ಹೇಳುತ್ತೇನೆ ಸಹಾಯ ಮಾಡುತ್ತಾರೆ ಎಂದು ಹೇಳುತ್ತಿದ್ದರು. ದೇಶದ ಯಾವುದೇ ಹಿರಿಯ ಐಎಎಸ್ ಅಧಿಕಾರಿಗಳು, ಯಾವುದೇ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ನೇರವಾಗಿ ಹೋಗುವ ಮತ್ತು ಹಲವಾರು ಜನ ಇವರ ಕಾಲಿಗೆ ಬೀಳುವುದು ವಾಡಿಕೆ.
ಅಂತಹ ಹಿರಿಯರ ಸಹಕಾರ ಗುಬ್ಬಿಗೆ ಹೆಚ್.ಎ.ಎಲ್ ಬರಲು ಪ್ರಮುಖ ಕಾರಣವೂ ಆಗಿತ್ತು. ಬಸವರಾಜ್ ರವರು ತುಮಕೂರು ಜಿಲ್ಲೆಗೆ ಯಾವುದೇ ಬೃಹತ್ ಯೋಜನೆ ಮಂಜೂರು ಮಾಡಿಸಿದ್ದರು ಸ್ವಾಮಿಜಿಯವರ ಸಹಕಾರ ಇದ್ದೇ ಇರುತ್ತಿತ್ತು. ದೆಹಲಿಯಲ್ಲಿ ಬಸವರಾಜ್‌ರವರ ಈ ಮಟ್ಟದ ಸಂಪರ್ಕಕಕ್ಕೆ ಸ್ವಾಮಿಜಿಯವರು ಗಾಡ್ ಫಾದರ್ ಎಂದರೆ ತಪ್ಪಾಗಲಾರದು.
ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಗೋಕುಲ್ ಚಂದ್ರ ಪತಿಯವರು ಐಎಎಸ್ ಮತ್ತು ಜಂಟಿಕಾರ್ಯದರ್ಶಿ ಶ್ರೀ ಕಮಲೇಶ್ ಕುಮಾರ್ ಪಂತ್‌ರವರು ಐಎಎಸ್ ಇವರ ಜೊತೆ ಸಮಾಲೋಚನೆ ಮಾಡಿ ಗುಬ್ಬಿಯ ಜಮೀನು ಬಗ್ಗೆ ಗಮನಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.
ಸ್ವಾಮೀಜಿಯವರು ಅಧಿಕಾರಿಗಳಿಗೆ ಹೇಳಿ ಅಷ್ಟಕ್ಕೆ ಸುಮ್ಮನಾಗುತ್ತಿರಲಿಲ್ಲ, ಆ ಅಧಿಕಾರಿಗಳ ಬ್ಯಾಚ್ ಮೆಟ್ಸ್ ಅಥವಾ ಅವರ ಹಿರಿಯ ಅಧಿಕಾರಿಗಳನ್ನು ಶ್ರೀ ಜಿ.ಎಸ್.ಬಸವರಾಜ್‌ರವರ ಮನೆಗೆ ಊಟಕ್ಕೆ ಕರೆದು ನಿಮ್ಮ ಸ್ನೇಹಿತರಿಗೆ ಹೇಳ್ರಪ್ಪಾ ನೀವು ಒಂದು ಮಾತು, ನಮ್ಮ ಬಸವರಾಜ್ ಹೆಚ್.ಎ.ಎಲ್ ಗೆ ಬಹಳ ತಲೆಕೆಡಿಸಿಕೊಂಡು ಬಿಟ್ಟವ್ರೆ, ನಾನು ಬಸವರಾಜ್ ಹೋಗಿ ಹೇಳಿದಿವಿ ಆದರೂ ಮರೆತು ಬಿಟ್ಟರೂ ಎಂದು ಹೇಳುವ ಖ್ಯಾತಿ ಅವರದು.
ಬಸವರಾಜ್‌ರವರು ಕನಿಷ್ಟ ತಿಂಗಳಿಗೆ ಒಂದು ಭಾರಿಯಾದರೂ ಅವರ ಬೆಂಗಳೂರಿನ ಮನೆಗೆ ಹೋಗಿ ಊಟ ಮಾಡಿಯೇ ಬರಬೇಕಿತ್ತು, ಬಹುಷಃ ಪ್ರತಿ ದಿನ ಫೋನ್ ಮೂಲಕ ಮಾತನಾಡುತ್ತಿದ್ದರು, ಇತ್ತೀಚೆಗೆ ನಿಧನ ಹೊಂದಿದರು. ಮಾಜಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‌ರವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ಅಂದರೆ ಅವರಿಗೆ ಬಹಳ ಇಷ್ಟ. ಪುಣ್ಯಾತ್ಮರು ಗುಬ್ಬಿಗೆ ಹೆಚ್.ಎ.ಎಲ್ ಬರಲು ಬಹಳ ಸಹಾಯ ಮಾಡಿದ್ದರು.