1st October 2023
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನಿಗೆ ಮೂರು ಜನ ಮುಖ್ಯ ಮಂತ್ರಿಗಳು ಮಹೂರ್ತ ನಿಗದಿ ಮಾಡಿದ್ದಾರೆ.

2009 ರಲ್ಲಿ ಕೈಗಾರಿಕಾ ವಸಾಹತು ಮಾಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ನೀಡಿದ್ದಾರೆ.

2012 ರಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಜಮೀನು ನೀಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದಗೌಡರವರು  ನಿರ್ಧೇಶನ ನೀಡಿದ್ದಾರೆ.

2014 ರಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಜಮೀನು ಮಂಜೂರು ಮಾಡಲು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಆದೇಶ ನೀಡಿದ್ದಾರೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ತುಮಕೂರು ಜಿಲ್ಲೆಯ ಶಿರಾ, ಬೀದರ್, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲೆ ಯಾವುದು ಬೇಡ,  ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ಕೊಡಿ,  ಹೆಚ್.ಎ.ಎಲ್ ನವರೇ ಈ ಜಮೀನು ಕೊಡಿ ಎಂದ ಮೇಲೆ ನಮ್ಮಿಂದ ಯಾವ ತಕರಾರು ಬೇಡ ಎಂಬ ಗಟ್ಟಿ ನಿರ್ಧಾರ ಮಾಡಿದರು.

2016 ನೇ ಜನವರಿ 3 ನೇ ತಾರೀಖು ಹೆಚ್.ಎ.ಎಲ್ ಘಟಕಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಜೊತೆ ಶಂಕುಸ್ಥಾಪನೆ ಮಾಡುವ ಅವಕಾಶವೂ  ಶ್ರೀ ಸಿದ್ಧರಾಮಯ್ಯನವರಿಗೆ ದೊರಕಿತು.  

 ಹೆಚ್.ಎ.ಎಲ್ ಘಟಕದ ಉದ್ಘಾಟನೆ ಭಾಗ್ಯ ಯಾರಿಗಿದೆ ಕಾದು ನೋಡೋಣ?

About The Author