5th February 2025
Share

TUMAKURU:SHAKTHIPEETA FOUNDATION

  ದಿನಾಂಕ:01.03.2014 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡುವ ಸಂಬಂದ ಕರ್ನಾಟಕ ರಾಜ್ಯದ  ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಕೌಶಿಕ್ ಮುಖರ್ಜಿರವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ಮುನ್ನ ಶ್ರೀ ವಿ.ಸೋಮಣ್ಣವರ ಪಾತ್ರ ಬಹಳ ಮುಖ್ಯವಾಗಿತ್ತು

ವಿ.ಸೋಮಣ್ಣವರು ಯಾವುದೇ ಪಕ್ಷದಲ್ಲಿರಲಿ ಮುಖ್ಯ ಮಂತ್ರಿಗಳ ಮತ್ತು ಅಧಿಕಾರಿ ವಲಯದಲ್ಲಿ ಅವರ ನಿಕಟ ಸಂಪರ್ಕದ ಫಲವಾಗಿ ಬಿದರೆಹಳ್ಳ ಕಾವಲ್ ಜಮೀನಿನ್ನು ಹೆಚ್.ಎ.ಎಲ್ ಘಟಕಕ್ಕೆ ಕೊಡುವ ಸಂಬಂದ ಅವರ ಸಹಕಾರ ಮರೆಯಲಾಗದು.  

 ಅವರು ಅಧಿಕಾರಿಗಳ ವಲಯದಲ್ಲಿ ಮಾತನಾಡಿದಾಗ ಇನ್ನೂ ಜಮೀನಿನ ನಕ್ಷೆಯನ್ನೆ ಕೊಟ್ಟಿಲ್ಲವಂತೆ ಇದೇನು ಜಿಲ್ಲಾಡಳಿತನಪ್ಪ ಅವರ ಸ್ಟೈಲ್‌ನಲ್ಲಿ ಏನೇನು ಹೇಳಬೇಕು ಅದೆಲ್ಲವನ್ನೂ ಹೇಳಿದರು.

ತಕ್ಷಣ ನಾನೇ ನನ್ನ ಸ್ನೇಹಿತ ಶ್ರೀ ವೇದಾನಂದಾಮೂರ್ತಿ ಕಚೇರಿಗೆ ಹೋಗಿ ಕುಮಾರಿ ಚಾಂದಿನಿಯವರ ಸಹಕಾರದಿಂದ ಸಂಜೆ ವೇಳೆಗೆ ಈ ನಕ್ಷೆಯನ್ನು ಮಾಡಿಸಿ ಸಲ್ಲಿಸಲಾಯಿತು.