11th December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು ಎಷ್ಟೆಲ್ಲಾ ಒತ್ತಡಗಳು, ವಿರೋಧಗಳು, ಜಾತಿ ಒತ್ತಡಗಳು, ಅಡೆತಡೆಗಳು ಬಂದರೂ ಕಂದಾಯ ಸಚಿವರಾದ ಶ್ರೀನಿವಾಸ್‌ಪ್ರಸಾದ್‌ರವರನ್ನು ಶ್ರೀ ಜಿ.ಎಸ್.ಬಸವರಾಜ್‌ರವರು, ಈ ವಿಚಾರವಾಗಿ ಮೊಟ್ಟಮೊದಲ ಭಾರಿ ಭೇಟಿಯಾದಾಗ ಏನು ಮಾತು ಹೇಳಿದರೋ ಅದಕ್ಕೆ ಕೊನೆವರೆಗೂ ಬದ್ಧರಾಗಿ ಜಮೀನು ನೀಡುವ ಮೂಲಕ ತಮ್ಮ ಮಾತು ಉಳಿಸಿಕೊಂಡರು.

  ಬಹಳ ಜನ ಈ ವಿಚಾರವಾಗಿ ಮಾತನಾಡಿದ್ದರು, ಯಾವುದೇ ಕಾರಣಕ್ಕೂ ಶ್ರೀನಿವಾಸ್ ಪ್ರಸಾದ್‌ರವರು ಜಮೀನು ನೀಡಲು ತೊಂದರೆ ಮಾಡಿಯೇ ಮಾಡುತ್ತಾರೆ, ಇವರೆಷ್ಟು ಆಟ ಆಡಿದರೂ ಸಾಧ್ಯಾವಾಗುವುದಿಲ್ಲ ಎಂಬ ಮಾತು ಸದಾ ತೇಲಾಡುತಿತ್ತು. ಇದಕ್ಕೆ ಪ್ರತಿತಂತ್ರ ನಮಗೂ ಗೊತ್ತಿತ್ತು.

 ಶ್ರೀನಿವಾಸ್‌ಪ್ರಸಾದ್ ರವರು ಅವರ ಆಪ್ತಕಾರ್ಯದರ್ಶಿಗೆ ಸೂಚನೆ ನೀಡಿ ಬಸವರಾಜ್‌ರವರು ಹೆಚ್.ಎ.ಎಲ್ ಜಮೀನು ವಿಚಾರವಾಗಿ ಯಾವತ್ತೇ ಬರಲಿ ನಾನಿಲ್ಲದಿದ್ದರೂ, ಈ ಕಡತಕ್ಕೆ ಸಹಿಬೇಕಾದಲ್ಲಿ ನಾನಿರುವ ಬಳಿಗೆ ಕಳುಹಿಸಿ ನನ್ನ ಆದೇಶ ಪಡೆದು ಕಳುಹಿಸ ಬೇಕು ವಿಳಂಬವಾಗಬಾರದು ಎಂದಿದ್ದರು. ಅದೇ ರೀತಿ ಒಮ್ಮೆ ಕಡತವನ್ನು ಮೈಸೂರಿಗೆ ಕಳುಹಿಸಿ ಕಡತಕ್ಕೆ ಸಹಿ ಹಾಕಿಸಿಕೊಂಡು ಬರಲಾಯಿತು.

 ಬಸವರಾಜ್ ಒಮ್ಮೆ ಮಾತನಾಡಿದರೆ, ಮಾತು ಬದಲಿಸುವವರಲ್ಲ ಆ ಕಾಲೋನಿ ಬಿಡುವುದಾಗಿ ಅವರೇ ಹೇಳಿರುವಾಗ ಬೇರೆಯವರ ವಿಷಯದ ಅಗತ್ಯ ನಮಗೆ  ಬೇಕಾಗಿಲ್ಲ ಎಂದು ಖಡಕ್ ಸೂಚನೆ ನೀಡುವ ಮೂಲಕ ಪರೋಕ್ಷವಾಗಿ ಕಾಲೋನಿಗೆ ತೊಂದರೆ ಬೇಡ ಬಸವರಾಜ್ ಎಂದು ಹೇಳಿದಂತಿಂತ್ತು.