7th December 2023
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಬೇಕಾದರೆ ಯೋಜನೆಗೆ ವಿದ್ಯುತ್ ಸರಬರಾಜು ಮಾಡುವುದು ಒಂದಾದರೆ, ಈ ಜಾಗದಲ್ಲಿದ್ದ ‘ಮೂರು ಹೈಟೆನ್ಸ್‌ಷನ್  ವಿದ್ಯುತ್‌ಲೈನ್‌ಗಳನ್ನು ಶಿಫ್ಟ್ ‘ಮಾಡುವುದು ಒಂದು ಅಸಾಧ್ಯದ ಕೆಲಸ ಎಂದು ಬಿಂಬಿತವಾಗಿತ್ತು.

 ಇಂಧನ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್‌ರವರು ಬಹುತೇಕ ಬಸವರಾಜ್‌ರವರಿಗೆ 2011 ರಿಂದ ಎದುರಿಗೆ ಸಿಕ್ಕಿದಾಗ ಪ್ರಸ್ತಾಪವಾಗುವ ಮೊದಲನೆ ವಿಷಯ ಹೆಚ್.ಟಿ. ಲೈನ್‌ಶಿಪ್ಟ್ ಮಾಡುವುದು ಇದ್ದೇ ಇರುತ್ತಿತ್ತು. ಕೊನೆ-ಕೊನೆಗೆ ಬಸವರಾಜ್‌ರವರಿಗಿಂತ ಮೊದಲೇ ಶಿವಕುಮಾರ್‌ರವರು ವಿಚಾರ ಹೇಳಿ ನಂತರ ಬೇರೆ ಮಾತನಾಡುವಷ್ಟು ಹಾಸ್ಯ ನಡೆಯುತ್ತಿತ್ತು.

  ಒಮ್ಮೆ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಬಳಿ ಬಸವರಾಜ್‌ರವರು ಮಾತನಾಡುವಾಗ ಶ್ರೀ ಡಿ.ಕೆ.ಶಿವಕುಮಾರ್‌ರವರು ಅಲ್ಲಿಗೆ ಬಂದ ತಕ್ಷಣ ಮುಖ್ಯ ಮಂತ್ರಿಯವರಿಗೆ ಸಾರ್ ನೀವು ಹೆಚ್.ಎ.ಎಲ್ ಯೋಜನೆಗೆ ಮಂಜೂರಾತಿ ಕೊಡಿ, ನಾನು ಕರೆಂಟ್ ಕೊಡುವುದರ ಜೊತೆಗೆ ಹೆಚ್.ಟಿ. ಲೈನ್‌ಶಿಪ್ಟ್ ಮಾಡಿ ಕೊಡುತ್ತೇನೆ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದರಂತೆ.

 ನಂತರ ಶಿವಕುಮಾರ್‌ರವರು ಬಸಣ್ಣ ಭಂಡ ಬೀಡಲ್ಲ ಸಾರ್,  ನಮಗೆ ಮೊದಲೇ ಗೊತ್ತಿದ್ದರೆ ನಾವೋ – ನೀವೋ ಮಾಡಿಸಿಕೊಳ್ಳ ಬಹುದಿತ್ತು, ಕಾಲ ಮೀರಿದೆ ಮಾಡಿ ಬಿಡಿ ಸಾರ್ ಎನ್ನುವ ಮೂಲಕ ಇಡೀ ಯೋಜನೆಯ ಮಂಜೂರಾತಿಗೂ ಬೆಂಬಲಿಸಿದ್ದರು.

  ಇಂಜಿನಿಯರ್ ಆದ ಶ್ರೀ ಚಂದ್ರಶೇಖರ್‌ರವರು ಯುಗಾದಿ ಹಬ್ಬದ ದಿವಸವೇ   ರಮೇಶ್ ಈವತ್ತೇ ನಿಮ್ಮ ಲೈನ್‌ಶಿಪ್ಟ್ ಮಾಡೋದನ್ನು ನೋಡಿಕೊಂಡು ಬರೋಣ ಬನ್ನಿ, ಎಂದು ಸ್ಥಳಕ್ಕೆ ಬೇಟಿ ನೀಡಿ ಎರಡು ಮೂರು ದಿವಸದಲ್ಲಿಯೇ ವರದಿ ನೀಡಿದ್ದರು. ಅಂದರೆ ಇಡೀ ಅಧಿಕಾರಿಗಳು ಯೋಜನೆ ತರಲು ಕಂಕಣ ಕಟ್ಟಿ ನಿಂತಿದ್ದರು.

About The Author