22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 06.03.2014 ರಂದು ಸಚಿವ ಸಂಪುಟ ಸಭೆ ನಿಗದಿಯಾಯಿತು. ಈ ವಿಷಯವನ್ನು ಮಂಡಿಸಲಾಯಿತು. ಆದರೆ ದಿನಾಂಕ:05.03.2014 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿ ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು.   

  ದಿನಾಂಕ: 11.09.2013 ರಂದು ನಾವು ಸ್ವಯಂ ಗಡುವು ನಿಗದಿ ಮಾಡಿಕೊಂಡು ಸಂಸದ ಶ್ರೀ ಜಿ.ಎಸ್.ಬಸವರಾಜ್‌ರವರ 4 ನೇ ಅವಧಿ ಮುಗಿದು ಚುನಾವಣೆ ಘೋಷಣೆಯಾಗುವ ಸುಮಾರು 192 ದಿನಗಳು ಪೂರ್ಣಗೊಂಡಿತು. ಆದರೆ ನಮ್ಮ ಗುರಿಯಂತೆ ಯೋಜನೆಗೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ ಈ ಹಂತಕ್ಕೆ ಬಂದು ತುದಿಗಾಲಲ್ಲಿ ನಿಲ್ಲಿಸಿತು.