TUMAKURU:SHAKTHIPEETA FOUNDATION
ಈಗಂತೂ 30, 60, 90 ಇದು ವಿಶ್ವಧ್ಯಾಂತ ಭಾರಿ ಸುದ್ಧಿ ಮಾಡುತ್ತಿದೆ. ಕರ್ನಾಟಕ ರಾಜ್ಯದ ಕೆಳಕಂಡ 90 ಜನ ಅಧಿಕಾರಿಗಳು ಮನಸ್ಸು ಮಾಡಿದರೆ ಇಡೀ ವಿಶ್ವವೇ ನಮ್ಮ ರಾಜ್ಯದ ಕಡೆ ನೋಡುವಂತಹ ಬಹುಪಯೋಗಿ ಯೋಜನೆ ಜಾರಿ ಮಾಡಬಹುದು.
ಇದರಿಂದ ಕೋವಿಡ್ ನಂತರ ರಾಜ್ಯದಲ್ಲಿ ಆಹಾರ ಸಮಸ್ಯೆ ಬರದ ಹಾಗೆ ನೋಡಿಕೊಳ್ಳುವ ಮುಂದಾಲೋಚನೆ. ವಿದೇಶದಲ್ಲಿರುವ ನಮ್ಮ ದೇಶದ ಬುದ್ಧಿಜೀವಿಗಳು ನಮ್ಮಲ್ಲಿಯೇ ಉದ್ಯೋಗ ಸೃಷ್ಠಿಸುವ ಕಣಜವಾಗಲೂ ಬಹುದು. ’ಪ್ರಚಾರ – ಸಕಾಲ – ತತ್ಕಾಲ್’ ಯೋಜನೆಯಾಗ ಬೇಕು. ತಿನ್ನುವ ಅನ್ನವನ್ನಾದರೂ ಸರಿಯಾಗಿ ತಿನ್ನೋಣ, ಆರೋಗ್ಯದಿಂದ ಇರೋಣ. ಜಿಲ್ಲೆಯ ಯಾವುದೇ ಯೋಜನೆಯ ಚಿತ್ರಗುಪ್ತರು ನೀವೇ?
’ಈ ಮೂರು ಹುದ್ದೆಗಳ ಜವಾಬ್ಧಾರಿ, ನಿಜಕ್ಕೂ ದೇವರು ನಿಮಗೆ ಒಳ್ಳೆ ಅವಕಾಶ ನೀಡಿದ್ದಾನೆ, ಈ ಯೋಜನೆ ಜಾರಿಗೆ ಒಂದು ಪ್ರಯತ್ನ ಮಾಡಿದರೆ ಜೀವನದಲ್ಲಿ ನಿಮಗೆ ತೃಪ್ತಿ ಸಿಗಲಿದೆ. ಆರಂಭ ಮಾಡಬಹುದು ಮುಗಿಯಲು ಸಮಯ ಬೇಕಾಗುತ್ತದೆ. ಸಂವಿಧಾನ ಶಿಲ್ಪಿಯ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡಲು ಇದೊಂದು ಸುವರ್ಣ ಅವಕಾಶ’
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ – 30
ಜಿಲ್ಲಾಧಿಕಾರಿಗಳು-30
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ/ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯ ಕಾರ್ಯದರ್ಶಿ-30
ರಾಜ್ಯಾಧ್ಯಂತ 340 ಬಹುಪಯೋಗಿ ಕ್ಯಾಂಪಸ್ :- ’ಕೋವಿಡ್-19 ಎಕನಾಮಿಕ್ ವಿಲೇಜ್’ ಎಂದು ಕರೆಯಬಹುದು ಇದೊಂದು ‘ಟ್ರೆಂಡ್’ ಆಗಲಿದೆ. 340 ರೈತರ ಕೃಷಿ, ತೋಟಗಾರಿಕಾ, ಪಶು, ಆಯುಷ್, ಅರಣ್ಯ ಹೀಗೆ ರಾಜ್ಯದಲ್ಲಿ ಆಯಾ ಪ್ರದೇಶಗಳಲ್ಲಿ ಬೆಳೆಯುವ/ದೊರೆಯುವ ಎಲ್ಲಾ ಉತ್ಪನ್ನವಾರು ಅಂತರರಾಷ್ಟ್ರೀಯ ಮಟ್ಟದ ಕ್ಲಸ್ಟರ್, ರಾಜ್ಯದ ನಿರ್ಧಿಷ್ಠ ಬೆಳೆಯ ಡೇಟಾಬೇಸ್, ತರಬೇತಿ, ಫಾರ್‌ವಾರ್ಡ್ – ಬ್ಯಾಕ್‌ವಾರ್ಡ್ ಲಿಂಕೇಜ್ ವ್ಯವಸ್ಥೆ ಇರಬೇಕು.
ಬಹುಪಯೋಗಿ ಕ್ಯಾಂಪಸ್‌ನಲ್ಲಿ ಮಾಡಬಹುದಾದ ಯೋಜನೆಗಳು
ಕೇಂದ್ರ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜಾರಿ.
ಇವೆಲ್ಲಾ ಕೇಂದ್ರ ಸರ್ಕಾರದ ಯೋಜನೆಗಳಾಗಿರುವುದರಿಂದ ಕೇಂದ್ರದಿಂದ ಹೆಚ್ಚಿಗೆ ಅನುದಾನ ಪಡೆಯಬಹುದು.
- ಡಿಸ್ಟ್ರಿಕ್-1 ಪ್ರಾಡಕ್ಟ್-1 :- ರಾಜ್ಯದ 30 ಜಿಲ್ಲೆಗಳಲ್ಲೂ ಒಂದು ಎಸ್.ಇ.ಝಡ್/ಮೆಗಾ ಪಾರ್ಕ್
- ಡಿಸ್ಟ್ರಿಕ್-1 ಮೆಡಿಕಲ್ ಕಾಲೇಜ್-1.
- ಡಿಸ್ಟ್ರಿಕ್-1 ರಫ್ತು ಹಬ್-1 :- ರಾಜ್ಯದ 30 ಜಿಲ್ಲೆಗಳಲ್ಲೂ ಒಂದೊಂದು ಕಡೆ ಅಥವಾ ವಿಧಾನಸಭಾ ಕ್ಷೇತ್ರಕ್ಕೊಂದು ರಫ್ತು ಹಬ್
- ವಿಧಾನಸಭಾ ಕ್ಷೇತ್ರಕ್ಕೊಂದು ಡೇಟಾ ಪಾರ್ಕ್:- ಆಯಾ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಡೇಟಾ.
- ವಿಧಾನಸಭಾ ಕ್ಷೇತ್ರಕ್ಕೊಂದು ಗೋಡಾನ್ :- ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆ – ಸಂಗ್ರಹ ಮಾಡವಂತಹ ಬೃಹತ್ ಮಟ್ಟದಲ್ಲಿರಬೇಕು.
- ವಿಧಾನಸಭಾ ಕ್ಷೇತ್ರಕ್ಕೊಂದು ಕೋಲ್ಡ್ ಸ್ಟೋರೇಜ್:- ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಬೆಳೆಯುವ ಬೆಳೆ – ಸಂಗ್ರಹ ಮಾಡವಂತಹ ಬೃಹತ್ ಮಟ್ಟದಲ್ಲಿರಬೇಕು.
- ವಿಧಾನಸಭಾ ಕ್ಷೇತ್ರಕ್ಕೊಂದು ಸ್ಮಾರ್ಟ್ ಎಕನಾಮಿಕ್ಸ್ ಸಿಟಿ/ವಿಲೇಜ್.
- ವಿಧಾನಸಭಾ ಕ್ಷೇತ್ರಕ್ಕೊಂದು ಪ್ರಾಡಕ್ಟ್ ವೈಸ್ ಕ್ಲಸ್ಟರ್:- ಪುದುಚೇರಿಯ ಏರೋವೆಲ್ಲಿ ಮಾಡೆಲ್
- ನಿರ್ಧಿಷ್ಠ ಬೆಳೆ ಕ್ಲಸ್ಟರ್:- ಒಂದೇ ಕಡೆ ಈ ಬಹುಯೋಗಿ ಕ್ಯಾಂಪಸ್ ಸುತ್ತ-ಮುತ್ತ ವಿರುವ ಕನಿಷ್ಠ 5 ಗ್ರಾಮ ಪಂಚಾಯಿತಿಗಳಲ್ಲಿ ಒಂದು ಬೆಳೆ ಕ್ಲಸ್ಟರ್.
ರಾಜ್ಯ ಸರ್ಕಾರದ 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳ ಜಾರಿ.
ಗ್ರಾಮ-1 ಮತ್ತು ಜಲಗ್ರಾಮ ಕ್ಯಾಲೆಂಡರ್ ಯೋಜನೆ ಅನುಷ್ಠಾನ
ರಾಜ್ಯದಲ್ಲಿನ ಅತಿವೃಷ್ಟಿ ಅಥವಾ ಅನಾವೃಷ್ಟಿ ಸಮಯದ ಬಳಕೆಗಾಗಿ
ವಿಧಾನಸಭಾ ಕ್ಷೇತ್ರಕ್ಕೊಂದು ಹೆಲ್ತ್ ಹಬ್ (ಹೈಟೆಕ್ ಆಸ್ಪತ್ರೆ.).
ವಿಧಾನಸಭಾ ಕ್ಷೇತ್ರಕ್ಕೊಂದು ಧರ್ಮಛತ್ರ.
ವಿಧಾನಸಭಾ ಕ್ಷೇತ್ರಕ್ಕೊಂದು ಗೋಶಾಲೆ.
ವಿಧಾನಸಭಾ ಕ್ಷೇತ್ರಕ್ಕೊಂದು ಆಯುಷ್ ರೆಸಾರ್ಟ್.
ವಿಧಾನಸಭಾ ಕ್ಷೇತ್ರಕ್ಕೊಂದು ಸಂಪನ್ಮೂಲ ಕೇಂದ್ರ ಕ್ಯಾಂಪಸ್.
ವಿಧಾನಸಭಾ ಕ್ಷೇತ್ರಕ್ಕೊಂದು ಗುರುಕುಲ.
ವಿಧಾನಸಭಾ ಕ್ಷೇತ್ರಕ್ಕೊಂದು ಸ್ಕಿಲ್ ಸಿಟಿ.
ವಿಧಾನಸಭಾ ಕ್ಷೇತ್ರಕ್ಕೊಂದು ಸಿ.ಎಸ್.ಆರ್ ಫಂಡ್ ಬಳಸುವ ಕ್ಯಾಂಪಸ್ ಆಗಲೂ ಬಹುದು.
ನೀವೂ 90 ಜನರ ಐಡಿಯಾಗಳನ್ನು ಸೇರ್ಪಡೆ ಮಾಡಿ, ಯೋಜನೆಗೆ ಒಂದು ರೂಪು ರೇಷೆ ನೀಡ ಬಹುದಾಗಿದೆ. ಜಿಲ್ಲಾ ಮಟ್ಟದ ದಿಶಾ ಸಮಿತಿಯಲ್ಲಿಟ್ಟು ನಿರ್ಣಯ ಮಾಡಿ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಅನುದಾನಕ್ಕೆ ಸಲ್ಲಿಸಬಹುದು ಅಥವಾ ರಾಜ್ಯ ಮಟ್ಟದ ದಿಶಾ ಸಮಿತಿ ನಿರ್ಣಯ ಮಾಡಿ ಜಿಲ್ಲೆಗಳಿಗೆ ಕಳುಹಿಸ ಬಹುದು.
ಜಮೀನು ಕಾಯ್ದಿರಿಸುವಿಕೆ:- ಕನಿಷ್ಟ 100 ರಿಂದ ಗರಿಷ್ಟ ದೊಕಿದಷ್ಟು ಎಕರೆ ಸರ್ಕಾರಿ ಭೂಮಿ, ಪಾವಗಡ ಮಾದರಿ ರೈತರ ಭೂಮಿ ಲೀಸ್. ಬೆಟ್ಟ-ಗುಡ್ಡಗಳ, ಹಳ್ಳಕೊಳ್ಳಗಳ ಪಕ್ಕ, ಅರಣ್ಯ ಪಕ್ಕ, ಕೆರೆ-ಕಟ್ಟೆ ಪಕ್ಕ. ಹಾಲಿ ಇರುವ ತೋಟಗಾರಿಕಾ ಫಾರಂ, ರೇಷ್ಮೇ ಫಾರಂ, ಅಮೃತ್ ಮಹಲ್ ಕಾವಲ್ ರೆವಿನ್ಯೂ ಬದಲಾವಣೆ ಆಗಿದ್ದಲ್ಲಿ ಈ ತರಹ ಇನ್ಯಾವುದೇ ಹೆಸರಿನ ಸರ್ಕಾರಿ ಜಮೀನುಗಳ ’ಜಿಐಎಸ್ ಲೇಯರ್’ ಮಾಡಬೇಕು.
ನದಿ ನೀರು ಮೈಕ್ರೋ ಇರ್ರಿಗೇಷನ್:- ಈ ಕ್ಯಾಂಪಸ್ ಮತ್ತು ಸುತ್ತ- ಮುತ್ತ 5 ಗ್ರಾಮ ಪಂಚಾಯತ್ ವ್ಯಾಪ್ತಿಯ ನಿರ್ಧಿಷ್ಠ ಬೆಳೆ ಕ್ಲಸ್ಟರ್‌ಗಳಿಗೆ, ರಾಜ್ಯ ಸರ್ಕಾರದ ಆಯವ್ಯಯ 2020-21 ರಲ್ಲಿ ಘೋಷಣೆ ಮಾಡಿರುವ ಯೋಜನೆ ಜಾರಿ.
ಮಹಾತ್ಮಗಾಂಧಿ ನರೇಗಾ ಯೋಜನೆ:- ಕ್ಯಾಂಪಸ್‌ನ ಆವರಣ ಗೋಡೆ, ಆಯುಷ್ ಪಾರ್ಕ್, ಜಲಸಂಗ್ರಹಾಗಾರಗಳು. ಷೆಡ್‌ಗಳು. ಗೋಶಾಲೆ ಷೆಡ್‌ಗಳು. ಆಯಾ ವಿಧಾನಸಭಾ ಕ್ಷೇತ್ರದ ಜಾಬ್‌ಕಾರ್ಡ್ ಇರುವವರು ಯಾರು ಬೇಕಾದರೂ ಕೆಲಸ ಮಾಡುವ ಆದೇಶ. ಈ ಯೋಜನೆಯಡಿ ಮಾಡಬಹುದಾದ ಎಲ್ಲಾ ಕಾಮಗಾರಿಗಳನ್ನು ಮಾಡುವುದು. ಇದು ‘ಶುಭಾರಂಭ’ ನಂತರ ಯಾವ ಯೋಜನೆ ಮಂಜೂರಾಗುತ್ತದೆಯೋ ಅದನ್ನು ಆರಂಭ ಮಾಡುವುದು.
ರಾಜ್ಯದಲ್ಲಿರುವ ಸುಮಾರು 229 ಇಂಜಿನಿಯರ್ ಕಾಲೇಜುಗಳ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್ ಸೇವೆಯನ್ನು ಬಳಸಿಕೊಳ್ಳಬಹುದು. ರಾಜ್ಯದಲ್ಲಿರುವ ಸುಮಾರು 365 ಕ್ಕೂ ಹೆಚ್ಚು ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೂ ಕೇಂದ್ರ ಸರ್ಕಾರದ ಆಕ್ಟಿವಿಟಿ ಪಾಯಿಂಟ್ಸ್ ಮಾದರಿ ಜಾರಿಗೊಳಿಸಿ ಅವರ ಸೇವೆಯನ್ನು ಬಳಸಿಕೊಳ್ಳಬಹುದು. ಪ್ರತಿ ಗ್ರಾಮದ ತಾಜಾ ಡೇಟಾ ಸಂಗ್ರಹಿಸಲು ಅನುಕೂಲವಾಗಲಿದೆ.
ಆಫೀಸರ್ ಗೆಸ್ಟ್ ಹೌಸ್:- ಕ್ಯಾಂಪಸ್‌ನಲ್ಲಿ ಹೌಸಿಂಗ್ ಫಾರ್ ಆಲ್ 2022 ಯೋಜನೆಯಡಿ ಆಫೀಸರ್‍ಸ್ ಗೆಸ್ಟ್ ಹೌಸ್ ಮಾದರಿಯಲ್ಲಿ ವಸತಿ ಸೌಲಭ್ಯ ಇದ್ದರೆ ಒಳ್ಳೆಯದು.
ಜಿಲ್ಲಾ ಮಟ್ಟದ ನೋಡೆಲ್ ಅಧಿಕಾರಿ :- ರಾಜ್ಯ ಮಟ್ಟದ ದಿಶಾ ಸಮಿತಿಯಿಂದ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ನಾಮ ನಿರ್ಧೇಶನ ಮಾಡುವ ಅಧಿಕಾರಿ.
340 ಚುನಾಯಿತ ಜನ ಪ್ರತಿನಿಧಿಗಳು:- ಚುನಾಯಿತ ಜನ ಪ್ರನಿಧಿಗಳಾದ 225 ವಿಧಾನಸಭಾ ಸದಸ್ಯರು, 75 ಜನ ವಿಧಾನ ಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು 12 ರಾಜ್ಯಸಭಾ ಸದಸ್ಯರು ಸೇರಿದಂತೆ 340 ಜನರ ಹೊಣೆಗಾರಿಕೆ ಇರಬೇಕು.
ಅವರು ಇಚ್ಚೆ ಪಡುವ ನಿಗಮ. ಮಂಡಳಿ, ಕಾರ್ಪೋರೇಷನ್, ಎಫ್.ಫಿ.ಓ/ಸಿ.ಪಿ.ಓ/ಸ್ತ್ರೀಶಕ್ತಿ ಸಂಘಗಳ ಫೆಡ್‌ರೇಷನ್ ಎಸ್.ಪಿ.ವಿ. ಮುಖಾಂತರ ಯೋಜನೆ ಕೈಗೊಳ್ಳಬಹುದು. ಪಿಪಿಪಿ ಮಾದರಿ ಯೋಜನೆಯಾಗಿರ ಬೇಕು. ಎನ್.ಆರ್.ಐಗಳಿಗೂ ಆಹ್ವಾನ ನೀಡಬಹುದು. ಎಸ್.ಡಿ.ಜಿ ಅಡಿಯಲ್ಲಿ ಈ ಯೋಜನೆಗೆ ವಿಶ್ವದ ಯಾವುದೇ ದೇಶಗಳಿಂದ ಸಾಲ ಪಡೆಯುವ ಅವಕಾಶವಿರಬೇಕು.