12th September 2024
Share
KUNDARANAHALLI RAMESH

TUMAKURU:SHAKTHIPEETA FOUNDATION

 ತುಮಕೂರಿನ ಶಕ್ತಿಪೀಠ ಫೌಂಡೇಷನ್ ಹೊರತಂದಿರುವ ನಿಮಗಿದು ಗೊತ್ತೆ ? https://epaper.shakthipeeta.in ಕೇವಲ ನಾಲ್ಕು ತಿಂಗಳ ಹಸುಗೂಸು. ನಾಲ್ಕು ತಿಂಗಳಲ್ಲಿ 258 ಪೋಸ್ಟ್‌ಗಳನ್ನು ಮಾತ್ರ ಪ್ರಕಟಿಸಿದೆ, ವಿಶ್ವದ 33 ದೇಶಗಳ, ಬಹುಷಃ ಗೂಗಲ್‌ನ 133 ಪ್ರಾಂತೀಯ ಪ್ರದೇಶಗಳ/ವಿಭಾಗದ 11,389 ಜನ, ಈವರೆಗೂ 29,071 ಕ್ಲಿಕ್ ಮಾಡಿ ಓದುವ  ಮೂಲಕ ಬೆಂಬಲ ವ್ಯಕ್ತಪಡಿಸಿರುವುದು ‘ಮನಸ್ಸಿಗೆ ತುಸು ನೆಮ್ಮದಿ’ ತಂದಿದೆ.

 ಅಭಿವೃದ್ಧಿ ಒಂದು ಡ್ರೈ ಸಬ್ಜೆಟ್’ ಯಾರಿಗೂ ಅಷ್ಟು ಬೇಗ ಹಿಡಿಸುವುದಿಲ್ಲ. ನನ್ನ 31 ವರ್ಷದ ಅಭಿವೃದ್ಧಿ ತಪಸ್ಸಿನ ಅಂಶಗಳ ಆಧಾರದ ಮೇಲೆ ನಡೆಯುವವನು ಎಡವದೇ ಇರುತ್ತಾನೇಯೇ?’ ಎಂಬ ಗಾದೆಯಂತೆ  ’ನೋಡೋಣ – ಆರಂಭ ಮಾಡೋಣ – ತಪ್ಪಾದಲ್ಲಿ ತಿದ್ದಿಕೊಳ್ಳೋಣ’ ಎಂಬ ಭಾವನೆ ನನ್ನದಾಗಿದೆ ನೀವೂ ಓದಿ ಅಭಿಪ್ರಾಯ ತಿಳಿಸಿ, ನಮ್ಮೊಂದಿಗೆ ಕೈಜೋಡಿಸಿ, ಇತರರಿಗೂ ಕಳುಹಿಸಲು ಮನವಿ. ನಿಮ್ಮ ಬೆಂಬಲ ನಮ್ಮ ನೈತಿಕ ಆಸ್ತಿ’

 ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಳೆದ 20 ವರ್ಷಗಳಿಂದ ಈವರೆಗೂ ನಡೆಸಿರುವ ಎಲ್ಲಾ ಅಭಿವೃದ್ಧಿ ಪರ ಚಟುವಟಿಕೆಗಳನ್ನು ಡಿಜಿಟಲ್ ದಾಖಲೆ ಮಾಡಲು ಒಂದು ಸುವರ್ಣ ಅವಕಾಶವೂ ದೊರಕಿದಂತಾಗಿದೆ.  https://epaper.shakthipeeta.in ನ ಪ್ರತಿಯೊಂದು ಪೋಸ್ಟ್ ಬಗ್ಗೆ, ದಿನದ ಬಗ್ಗೆ, ವಾರದ ಬಗ್ಗೆ  ರೇಟಿಂಗ್ ಅನಾಲೀಸಿಸ್ ನೋಡಿ ನಾನೇ ಚಕಿತನಾದೆ.

  ಜನ ಹೆಚ್ಚಾಗಿ ಓದಲಿ ಎಂದು ಬರೆಯುವ ಪತ್ರಿಕೆಯಲ್ಲ ಇದು. ಜಿಲ್ಲೆಯ, ರಾಜ್ಯದ, ದೇಶದ ಮತ್ತು ವಿದೇಶಗಳ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಜನ ಜಾಗೃತಿ ಮೂಡಿಸಲು, ಬರೆಯುವ ನಿರ್ಧಿಷ್ಠ ಉದ್ದೇಶ ನನ್ನದಾಗಿದೆ. ಅಭಿವೃದ್ಧಿ ಪರ ಆಸಕ್ತಿ ಇರುವ ಜನತೆಗೆ ಅನುಕೂಲವಾಗಬಹುದು.