24th November 2024
Share

TUMAKURU:SHAKTHIPEETA FOUNDATION 

  ಕೋವಿಡ್ –19’ ಅಡಿಯಲ್ಲಿ ನೀಡುವ ಎಲ್ಲಾ ವಿಧವಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಮಾಹಿತಿಗಳನ್ನು ಪಾರದರ್ಶಕವಾಗಿ ವ್ಯಕ್ತಿ, ಕುಟುಂಬವಾರು ಗ್ರಾಮವಾರು ಸಂಗ್ರಹಿಸಿ ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ದೊರೆಕಿಸಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ. ಈ ಮಾಹಿತಿಗಳು ಸಾರ್ವಜನಿಕರಿಗೂ ವೆಬ್ ಸೈಟ್‌ಗಳಲ್ಲಿ/ ಮಾಹಿತಿ ಹಕ್ಕು ಅಧಿನಿಯಮದಡಿ ಲಭ್ಯವಾಗಬೇಕು.

  ಹಲವಾರು ಕಾರಣಗಳಿಂದ ಕೆಲವರು ಇನ್ನೂ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜನಧನ ಬ್ಯಾಂಕ್ ಖಾತೆ ಮಾಡಿಸಿಲ್ಲ ಅಂಥಹವರಿಗೂ ಕೋವಿಡ್-19’ ಸವಲತ್ತು ದೊರೆಯಲೇಬೇಕು. ದೇಶದ ಪ್ರತಿಯೊಂದು ಗ್ರಾಮದಲ್ಲಿ/ನಗರ ಪ್ರದೇಶಗಳಲ್ಲಿ ಬಡಾವಾಣೆವಾರು ಶೇಕಡವಾರು ಎಷ್ಟು ಜನರಿಗೆ ಸೌಲಭ್ಯ ದೊರಕಿದೆ, ಎಷ್ಟು ಜನರಿಗೆ ದೊರಕಿಲ್ಲ, ಅವರಿಗೂ ದೊರೆಯಲು ಏನು ಮಾಡಬೇಕು ಎಂಬ ಬಗ್ಗೆ ಚರ್ಚೆಮಾಡಿ, ಶೇ ೧೦೦ ರಷ್ಟು ಫಲಾನಿಭವಿಗಳ ಪಟ್ಟಿ ಸಿದ್ಧಮಾಡುವುದು ಸರ್ಕಾರದ ಆಧ್ಯ ಕರ್ತವ್ಯ.

  ಬಡವರಿಗೆ ನೀಡುವ ಊಟ, ದಾನಿಗಳು ಯಾವ ವ್ಯಕ್ತಿಗೆ, ಯಾವ ಕುಟುಂಬಕ್ಕೆ, ಯಾವ ಅಗತ್ಯ ವಸ್ತುಗಳನ್ನು, ಯಾರು ನೀಡಿದ್ದಾರೆ ಎಂಬುದು ಗ್ರಾಮವಾರು ನಮೂದಾಗ ಬೇಕು. ಡೂಪ್ಲಿಕೇಟ್ ಆಗದೇ ಸಾಮಾಜಿಕ ನ್ಯಾಯದಡಿಯಲ್ಲಿ ಎಲ್ಲರಿಗೂ ಸವಲತ್ತು ದೊರೆಯಂತಿರಬೇಕು. ಅತಿವೃಷ್ಠಿ/ಅನಾವೃಷ್ಠಿ’ ನಿರಂತವಾಗಿ ಇದ್ದೇ ಇರುತ್ತದೆ. ಇದಕ್ಕೆಲ್ಲಾ ಒಂದು ನಿರ್ಧಿಷ್ಠ ವೇದಿಕೆ ಸದಾ ಸಿದ್ಧವಾಗಿರಬೇಕು.

  ಪ್ರತಿಯೊಂದು ಗ್ರಾಮದಲ್ಲಿನ ಕುಟುಂಬವಾರು ಮತದಾನದ ಪಟ್ಟಿಯ ಮಾದರಿಯಲ್ಲಿ, ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಶಿಶುಗಳಿಂದ ಆರಂಭಿಸಿ ಹಿರಿಯ ನಾಗರಿಕ’ ರವರೆಗೂ ನೀಡಿದ ಎಲ್ಲಾ ಸವಲತ್ತುಗಳ ಮಾಹಿತಿ ಒಂದೇ ಕಡೆ ಲಭ್ಯವಾಗ ಬೇಕು. 100 ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಎಂಬ ಗಾದೆಯಂತೆ ಅರ್ಹರು ಸರ್ಕಾರದ ಯಾವುದೇ ಸೌಲಭ್ಯದಿಂದ ವಂಚಿತರಾಗ ಬಾರದು.

  ಪ್ರತಿಯೊಂದು ಗ್ರಾಮದಲ್ಲಿನ ಕುಟುಂಬವಾರು ಮತದಾನದ ಪಟ್ಟಿಯ ಮಾದರಿಯಲ್ಲಿ, ಕುಟುಂಬದಲ್ಲಿರುವ ಪ್ರತಿಯೊಬ್ಬರಿಗೂ ಶಿಶುಗಳಿಂದ ಆರಂಭಿಸಿ ಹಿರಿಯ ನಾಗರಿಕ’ ರವರೆಗೂ ಕೋವಿಡ್‌ಗೆ ಸಂಬಂಧಿಸಿದ ಪ್ರಾಥಮಿಕ ಟೆಸ್ಟ್‌ನಿಂದ ಆರಂಭಿಸಿ, ಎಲ್ಲಾ ವಿಧವಾದ ಕಾಯಿಲೆಗಳ ಮಾಹಿತಿ ಒಂದೇ ಕಡೆ ಸಂಗ್ರಹ ಮಾಡಬೇಕು. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯ ವ್ಯಾಪ್ತಿಯ ಜಿಐಎಸ್ ಲೇಯರ್’ ಮಾಡಬೇಕು.  ಈ ವ್ಯಾಪ್ತಿಯಲ್ಲಿನ ವಲಸೆದಾರರ, ಕೋವಿಡ್ ವಾರಿಯರ್‍ಸ್, ದಾನಿಗಳ ಮಾಹಿತಿ ಸಂಗ್ರಹಿಸಬೇಕು.

  ಮನೆ ಮನೆಗೆ ಸರಬರಾಜು  ಮಾಡುವ ಅಗತ್ಯ ವಸ್ತುಗಳ ವಾಹನಗಳಿಗೆ ಜಿಪಿಎಸ್ ಮಾಡಿ, ಎಲ್ಲಾ ರಸ್ತೆಗಳಿಗೂ ಕಡ್ಡಾಯವಾಗಿ ಭೇಟಿನೀಡಲು ರೂಪುರೇಷೆ ನಿರ್ಧರಿಸಬೇಕಾಗಿದೆ. ಕೇಂದ್ರ ಸರ್ಕಾರದ ಅನುದಾನವಾಗಿರುವುದರಿಂದ ಜಿಲ್ಲಾ ಮಟ್ಟದ ದಿಶಾ ಸಮಿತಿ’ಗಳು ಈ ಬಗ್ಗೆ ವಿಶೇಷ ಗಮನಹರಿಸ ಬೇಕಿದೆ.

ಸರ್ವಪಕ್ಷಗಳ ಕಾರ್ಯಕರ್ತರು: ಪ್ರತಿಯೊಂದು ಗ್ರಾಮ/ಬಡಾವಣೆಯಲ್ಲಿ ಶೇಕಡ ನೂರರಷ್ಟು ಫಲಾನುಭವಿಗಳಿಗೆ ಸವಲತ್ತುಗಳು ದೊರಕಿದೆಯೇ ಎಂಬ ಬಗ್ಗೆ ಮನೆ, ಮನೆ ಸಮೀಕ್ಷೆ ಮಾಡುವ ಮೂಲಕ ಜಾಗೃತಿ ಮಾಡಿಸುವುದು ಅಗತ್ಯ.

ಬಿಜೆಪಿಯವರು ನಮ್ಮ ಸರ್ಕಾರ ಇಷ್ಟು ಅನುದಾನವನ್ನು ಈ ಗ್ರಾಮಕ್ಕೆ ನೀಡಿದೆ ಎಂದು ಖುಷಿ ಪಡಬಹುದು.

ಕಾಂಗ್ರೆಸ್/ಇತರೆ ಪಕ್ಷಗಳು ಇಷ್ಟು ಜನ ಬಡವರಿಗೆ ಇನ್ನೂ ಸವಲತ್ತು ತಲುಪಿಲ್ಲ, ತಲುಪುವವರೆಗೂ ನಮ್ಮ ಹೋರಾಟ ಎಂದು ಅಬ್ಬರಿಸಬಹದು.

ಒಟ್ಟಿನಲ್ಲಿ ಶೇಕಡ ನೂರರಷ್ಟು ಅರ್ಹ ಜನರಿಗೆ ಅನುಕೂಲವಾದರೆ ಸಾಕು. ವಿಶ್ವಕ್ಕೆ ಮಾದರಿಯಾಗುವ ಅವಕಾಶ ನಮ್ಮ ರಾಜ್ಯಕ್ಕೆ ದೊರೆಯಲಿದೆ.