29th March 2024
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಸದಸ್ಯರು-28 (ಕೇಂದ್ರ ಸಚಿವರು ಸೇರಿ), ರಾಜ್ಯಸಭಾ ಸದಸ್ಯರು-12 (ಕೇಂದ್ರ ಸಚಿವರು ಸೇರಿ) ವಿಧಾನಸಭಾ ಸದಸ್ಯರು-225 (ಸಚಿವರು ಮತ್ತು 2 ಖಾಲಿ ಸ್ಥಾನ ಸೇರಿ), ವಿಧಾನಪರಿಷತ್ ಸದಸ್ಯರು-75 (ಸಚಿವರು ಸೇರಿ), ಒಟ್ಟು-340 ಜನ ಪ್ರಮುಖ ಚುನಾಯಿತ ಜನಪ್ರತಿನಿಧಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು-30, ಜಿಲ್ಲಾಧಿಕಾರಿಗಳು-30, ಜಿಲ್ಲಾ ಪಂಚಾಯತ್ ಸಿಇಓ ಮತ್ತು ದಿಶಾ ಸಮಿತಿ ಸದಸ್ಯಕಾರ್ಯದರ್ಶಿ-30, ಒಟ್ಟು-90 ಜನ ಆಯಾ ಒಂದು ಜಿಲ್ಲೆಯ ಸ್ಪಷ್ಟ ಚಿತ್ರಣವಿರುವ ಅಧಿಕಾರಿಗಳಿರುತ್ತಾರೆ. ಎಲ್ಲಾ ಸೇರಿ ಒಟ್ಟು= 430

  ಶಾಸಕಾಂಗದ 340 ಜನ ಹೇಳಬಹುದು ಅವರಿಗೆ ಅನುಷ್ಠಾನ ಮಾಡಲು ಅಧಿಕಾರವಿಲ್ಲ, ಅವರೆಲ್ಲರ ಸಲಹೆಗಳನ್ನು ಕಾನೂನು ಮೂಲಕ ನಿಯಾಮನುಸಾರ ಅನುಷ್ಠಾನ ಮಾಡುವ ಅಧಿಕಾರವನ್ನು  ‘ಸಂವಿಧಾನ’ ಕಾರ್ಯಾಂಗಕ್ಕೆ ನೀಡಿದೆ.

 ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಸಂಸದರ ಆದರ್ಶಗ್ರಾಮ ಯೋಜನೆ’ ಜಾರಿಗೆ ತಂದರು. ಇಡೀ ದೇಶದಲ್ಲಿ ಬೆಸ್ಟ್ ಪ್ರಾಕ್ಟೀಸ್’ ಯಾವುದು ಎಂಬ ಬಗ್ಗೆ ಅಧ್ಯಯನ ಮಾಡುವುದು ಅಗತ್ಯವಾಗಿದೆ. ನಮ್ಮ ಕರ್ನಾಟಕದಲ್ಲಿ ಸ್ಮಾರ್ಟ್ ವಿಲೇಜ್’ ಯೋಜನೆ ಜಾರಿಗೊಳಿಸಬೇಕು ಎಂದು ಮಾನ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಶ್ರೀ ಎಸ್. ಆರ್. ಪಾಟೀಲ್ ರವರು ಅವರ ಕನಸಿನ ಯೋಜನೆಯ ಬಗ್ಗೆ ಚರ್ಚಿಸಿದ್ದೇವು.

   ಇಲ್ಲಿ ಪಕ್ಷಗಳ, ಜಾತಿಗಳ, ವ್ಯಕ್ತಿಗಳ ಸಿದ್ಧಾಂತ ಬರಲೇಬಾರದು. ಸಂವಿಧಾನದ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸಿದ ಸ್ಪೀಕರ್‌ರವರಾದ ಮಾನ್ಯ ಶ್ರೀ ವಿಶ್ವೇಶ್ವರ ಕಾಗೇರಿರವರ ಉದ್ದೇಶ, ಸದನದಲ್ಲಿ ಭ್ರಷ್ಠಾಚಾರದ ಬಗ್ಗೆ ಮಾತನಾಡಿದ ಅರಸೀಕೆರೆ ಶಾಸಕರಾದ ಶ್ರೀ ಶಿವಲಿಂಗೇಗೌಡರ ನಿಲುವು, ಮೈಸೂರು ನಗರದಲ್ಲಿ ಬೀದಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿರುವ ಶಾಸಕರಾದ ಶ್ರೀ ರಾಮದಾಸ್‌ರವರ ಉದ್ದೇಶ, ರೈತರ ಜಮೀನುಗಳಿಗೆ ಹೋಗಿ ತರಕಾರಿಕೊಂಡು ಬಡವರಿಗೆ ನೀಡುತ್ತಿರುವ ಬೆಂಗಳೂರು ಗ್ರಾಮಾಂತರ ಸಂಸದ ಶ್ರೀ ಡಿ.ಕೆ.ಸುರೇಶ್‌ರವರ ಉದ್ದೇಶ ಹೀಗೆ ಕೊರೊನಾ ಬಂದಾಗಿನಿಂದ ಒಂದಲ್ಲ ಒಂದು ರೀತಿಯ ವಿನೂತನವಾದ ಯೋಜನೆಗಳನ್ನು ಅವರವರ ಕ್ಷೇತ್ರದಲ್ಲಿ 340 ಜನ ಚುನಾಯಿತ ಜನಪ್ರತಿನಿಧಿಗಳು, 90 ಜನ ಅಧಿಕಾರಿಗಳು ಮಾಡುತ್ತಿದ್ದಾರೆ.

 ಜೊತೆಗೆ ಅವರವರ ಅಧಿಕಾರದ ಅನುಭವದಲ್ಲಿನ ಬೆಸ್ಟ್ ಪ್ರಾಕ್ಟೀಸ್’ ಯೋಜನೆಗಳು. ವಿವಿಧ ಇಲಾಖಾ ಅಧಿಕಾರಿಗಳ ತಂಡ, ಕೊರೊನಾ ಬಂದಾಗಿನಿಂದ ಕಾರ್ಯನಿರ್ವಹಿಸುತ್ತಿರುವ ಸಂಘ ಸಂಸ್ಥೆಗಳು, ದಾನಿಗಳು, ಸಮಾಜ ಸೇವಕರು, ಆರಕ್ಷಕರು, ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು, ಪೌರ ಕಾರ್ಮಿಕರು, ಮಾಧ್ಯಮಗಳು, ಧಾರ್ಮಿಕ ಮುಖಂಡರು ಹೀಗೆ ಎಲ್ಲಾ ವರ್ಗದವರ ಅನುಭವ ಪಡೆದು ಕೋವಿಡ್-19 ಎಕನಾಮಿಕ್ ವಿಲೇಜ್’ ಆಗಿ ಒಂದೇ ಕಡೆ ೫ ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳನ್ನು ಪರಿವರ್ತಿಸಲು ಚಿಂತನೆ ನಡೆಸುವುದು ಸೂಕ್ತವಾಗಿದೆ.

 ಕರ್ನಾಟಕ ರಾಜ್ಯ ಸರ್ಕಾರ 2020-21 ನೇ ಆಯವ್ಯಯದಲ್ಲಿ ಮಂಡಿಸಿರುವ ಗ್ರಾಮ-1’ ಯೋಜನೆಯ ಮೂಲಕವೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ವಿವಿಧ ಯೋಜನೆಗಳ ನೆರವು’ ಪಡೆಯುವುದು ಅಗತ್ಯವಾಗಿದೆ.

ಗ್ರಾಮ-1’ ಯೋಜನೆ ರೂಪಿಸುವಾಗಲೇ ಮಾದರಿಯಾಗಿ  ಎಲ್ಲಾ ಯೋಜನೆಗಳ ಜಾರಿಗೆ ಶ್ರಮಿಸಲು 340 ಜನರಲ್ಲಿ ಯಾರಾದರೂ ಮುಂದಾಗುತ್ತಾರೆಯೇ ಕಾದು ನೋಡೋಣ? ಎಲ್ಲರ ಅಭಿಪ್ರಾಯ, ಚಿಂತನೆ, ಸಲಹೆ ಅಳವಡಿಸಿಕೊಳ್ಳಲು ಉದ್ದೇಶಿಸಿರುವುದರಿಂದ ಈ ಯೋಜನೆಗೆ 430 ಮಾಡೆಲ್’ ಎಂದು ಕರೆಯುವುದು ಉಚಿತವಾಗ ಬಹುದು ಎಂದು ಹಲವಾರ ಅಭಿಪ್ರಾಯವಾಗಿದೆ.

 ಎನ್.ಆರ್.ಐ ನ ಒಂದು ತಂಡ ‘ಸಸ್ಟನಬಲ್ ಡೆವಲಪ್‌ಮೆಂಟ್ ಗೋಲ್ಸ್’  ಅಡಿಯಲ್ಲಿ ವಿದೇಶಗಳ ಆರ್ಥಿಕ ನೆರವು ಪಡೆದು ಇಂಥಹ ಯೋಜನೆ ಜಾರಿ ಮಾಡುವುದರಿಂದ ಬೇರೆ ದೇಶಗಳ ಕಂಪನಿಗಳು ಸಹ ಭಾರತದಲ್ಲಿ ಹೂಡಿಕೆ ಮಾಡಲು ತುದಿಗಾಲಲ್ಲಿ ನಿಂತಿವೆ. ಈ ಪ್ರಯೋಜನ ಪಡೆಯಲು ಶ್ರಮಿಸಬಹುದು ಎಂಬ ಸಲಹೆಯನ್ನು ಸರ್ಕಾರಗಳಿಗೆ ನೀಡಲು ಮುಂದಾಗಿವೆ.