24th November 2024
Share
ಈ ಪುಸ್ತಕದಲ್ಲಿಯೇ ಲೋಕಸಭಾ ಕ್ಷೇತ್ರವಾರು ಯೋಜನೆಗಳು ಪ್ರಿಂಟ್ ಆಗಲಿ

TUMAKURU:SHAKTHIPEETA FOUNDATION 

  ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಯೋಜನೆಗಳಲ್ಲಿ ನೆನೆಗುದಿಗೆ ಬಿದ್ದಿರುವ ಮತ್ತು ಮಂಜೂರಾತಿ ಹಂತದಲ್ಲಿರುವ ಲೋಕಸಭಾ ಕ್ಷೇತ್ರವಾರು ಅಥವಾ ವಿಧಾನಸಭಾ ಕ್ಷೇತ್ರವಾರು ಮಾಹಿತಿ ಚುನಾಯಿತ ಜನಪ್ರತಿನಿಧಿಗಳಿಗೆ ಗೊತ್ತಿರಬೇಕು. ಆದರೇ ಅವರುಗಳಿಗೆ ಮಾಹಿತಿಯ ಕೊರತೆ’ ಎದ್ದು ಕಾಣುತ್ತಿದೆ.

 ಜಿಲ್ಲಾ ಮಟ್ಟದ ದಿಶಾ ಸಮಿತಿಗಳಲ್ಲಿ ಈ ವಿಚಾರಗಳ ಪ್ರಗತಿಯ ಬಗ್ಗೆ ಚರ್ಚೆಯಾಗಬೇಕು, ಹಲವಾರು ಯೋಜನೆಗಳು ಹಲವಾರು ಲೋಕಸಭಾ ಕ್ಷೇತ್ರವಾರು ಇರುತ್ತವೆ ಅಂತಹ ಯೋಜನೆಗಳನ್ನು ಸಂಭಂಧಿಸಿದ ಎಲ್ಲಾ ಜಿಲ್ಲೆಗಳ ದಿಶಾ ಸಭೆಯಲ್ಲೂ’ ಚರ್ಚೆಯಾಗಬೇಕು.

  ಲೋಕಸಭಾ ಅಧಿವೇಶನ ನಡೆಯುವಾಗ ದೆಹಲಿಯ ಕರ್ನಾಟಕ ಭವನದಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಲೋಕಸಭಾ ಸದಸ್ಯರ ಮತ್ತು ರಾಜ್ಯಸಭಾ ಸದಸ್ಯರ ಸಭೆ’ ನಡೆಸಿ ಈ ವಿಷಯಗಳ ಬಗ್ಗೆ ಚರ್ಚಿಸುವ ವಾಡಿಕೆಯಿದೆ. ಈ ಸಭೆಗಳಲ್ಲಿ ಕೆಲವು ವಿಚಾರಗಳು ಮಾತ್ರ ಚರ್ಚೆಗೆ ಬರುತ್ತವೆ ಉಳಿದ ವಿಚಾರಗಳು ಎಲ್ಲರ ಗಮನಕ್ಕೆ ಬರುವುದೇ ಇಲ್ಲಾ.

  ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮತ್ತು ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ ಹೊಸದಾಗಿ ಸಲ್ಲಿಸಿದ ಪ್ರಸ್ತಾವನೆಯ ಒಂದು ಪ್ರತಿ ಆಯಾ ಜಿಲ್ಲಾ ಮಟ್ಟದ ದಿಶಾ ಸಮಿತಿಗಳಿಗೆ ರವಾನಿಸಬೇಕು’ ಈ ವಿಷಯಗಳು ಪ್ರತಿ ದಿಶಾ ಸಭೆಯಲ್ಲೂ ಪ್ರಗತಿ ಬಗ್ಗೆ ಚರ್ಚೆಯಾಗುವ ಪರಿಪಾಠ ರೂಢಿಯಾಗಬೇಕು.

  ಲೋಕಸಭಾ ಸದಸ್ಯರಿಗೆ ಯೋಜನೆಯ ಪೂರ್ಣ ಮಾಹಿತಿ ಬರುವುದರಿಂದ ಅವರು ದೆಹಲಿಯಲ್ಲಿ ಕಡತ ಅನುಸರಣೆ ಮಾಡಲು ಅನೂಕೂಲವಾಗಲಿದೆ. ದೆಹಲಿಯ ಕರ್ನಾಟಕ ಭವನದಲ್ಲಿರುವ ಇಲಾಖಾವಾರು ಅಧಿಕಾರಿಗಳು ಆಯಾ ಲೋಕಸಭಾ ಕ್ಷೇತ್ರದ ವಿಚಾರಗಳ ಬಗ್ಗೆ ಅವರನ್ನು ಕರೆದುಕೊಂಡು ಕಚೇರಿಗಳಿಗೆ ಹೋಗುವ ಪದ್ಧತಿ ರೂಡಿಯಾಗಬೇಕು’.

  ರಾಜ್ಯ ಮಟ್ಟದ ದಿಶಾ ಸಮಿತಿ ಎಲ್ಲಾ ಜಿಲ್ಲೆಗಳಿಗೂ ಈ ಮಾಹಿತಿ ಕಳುಹಿಸುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದು ಅಗತ್ಯವಾಗಿದೆ. ಮುಂದಿನ ಜಿಲ್ಲಾ ಮಟ್ಟದ ದಿಶಾ ಸಮಿತಿ’ಗಳಲ್ಲಿ ಈ ಯೋಜನೆಗಳ ಬಗ್ಗೆ ಚರ್ಚೆಯಾಗುವುದೇ ಕಾದು ನೋಡೋಣ?

  ದೆಹಲಿ ಪ್ರತಿನಿಧಿ ಕಚೇರಿ, ರೆಸಿಡೆಂಟ್ ಕಮೀಷನರ್ ಕಚೇರಿ ಒಂದು ತರಹ ’ಪ್ರೋಟೋಕಾಲ್’ ಕಚೇರಿಯಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಶೇಷ ಗಮನಹರಿಸುತ್ತಿಲ್ಲ ಎಂಬುದು ಹಲವು ಲೋಕಸಭಾ ಸದಸ್ಯರುಗಳ ಅಭಿಪ್ರಾಯ.

  ಈ ಕಚೇರಿಯ ಅಧಿಕಾರಿಗಳಿಗೆ ಅಕೌಂಟಬಿಲಿಟಿ ಇಲ್ಲ, ಒಂದು ತರಹ ದಂಡಪಿಂಡಗಳು, ಒಬ್ಬೊಬ್ಬರು ಒಬ್ಬೊಬ್ಬ ಎಂಪಿ ಹಿಂದೆ ಓಡಾಡುವುದೇ ಇವರ ಪ್ರಮುಖ ಕೆಲಸ’ ಎಂದು ಹೊಸದಾಗಿ ಆಯ್ಕೆಯಾಗಿರುವ ಲೋಕಸಭಾ ಸದಸ್ಯರೊಬ್ಬರೂ ಹಾಸ್ಯ ಮಾಡುತ್ತಿದ್ದರು.