TUMAKURU:SHAKTHIPEETA FOUNDATION
ತಮಿಳುನಾಡಿನಲ್ಲಿರುವ ಈಶಾ ಫೌಂಡೇಷನ್‌ನ ಸಂಸ್ಥಾಪಕರಾದ ಶ್ರೀ ಸದ್ಗುರು ಜಗ್ಗಿ ವಾಸುದೇವ್ ರವರು ಮತ್ತು ಪುದುಚೇರಿಯ ರಾಜ್ಯಪಾಲರಾದ ಡಾ.ಕಿರಣ್ ಬೇಡಿಯವರು ಸಮಾಲೋಚನೆ ನಡೆಸುತ್ತಿರುವ ಸೋಶಿಯಲ್ ಮಿಡಿಯಾದಲ್ಲಿ ಬಂದ ಒಂದು ವಿಡಿಯೋ ನೋಡಿದಾಗ ಅವರು ಪ್ರಮುಖವಾದ ಚರ್ಚೆಯನ್ನು ನಡೆಸುತ್ತಿರುವ ಅಂಶ ತಿಳಿಯಿತು.
ಸದ್ಗುರು ಜಗ್ಗಿ ಪ್ರಕಾರ ನಮ್ಮ ದೇಶ ಭಾರತ, ಈ ಭಾರತ ಇಂಡಿಯಾ ಆದದ್ದು ಯಾಕೆ? ಇಂಡಿಯಾ ಅರ್ಥ ಏನು ’ಭಾರತದ ಅರ್ಥ ಭಾ= ಭಾವ, ರ= ರಾಗ, ತ=ತಾಳ’ ಎಂಬ ಚರ್ಚೆಯನ್ನು ಮಾಡುತ್ತಿದ್ದರು.
ಕಿರಣ್ ಬೇಡಿಯವರು ಮತ್ತೆ ಈ ಹೆಸರು ಏಕೆ ಬಂತು ಎಂದು ಕೇಳಿದಾಗ ಸದ್ಗುರು ಜಗ್ಗಿಯವರು ಯಾವುದಾದರೂ ದೇಶವನ್ನು ಇನ್ನೊಂದು ದೇಶ ಆಕ್ರಮಿಸಿಕೊಂಡಾಗ ಮೊದಲು ಹೆಸರು ಬದಲಾವಣೆ ಮಾಡುವುದು ಸಾಮಾನ್ಯವಂತೆ.
ಹೌದು ಯಾವುದೇ ನಾಮಪದ ಇಂಗ್ಲೀಷ್‌ನಲ್ಲಿ ಒಂದು ಹೆಸರು, ಬೇರೆ ಭಾಷೆಯಲ್ಲಿ ಇನ್ನೊಂದು ಹೆಸರು ಇರುವುದು ಸಾಧ್ಯವಾ? ’ಭಾರತ ನ ಅಥವಾ INDIA’ ನ
ಈ ಬಗ್ಗೆ ಸಂಶೋಧಕರು ಏನು ಹೇಳುತ್ತಾರೆ, ಇತಿಹಾಸ ಏನು ಹೇಳುತ್ತದೆ. ಈ ಹೆಸರುಗಳು ಹೇಗೆ ಯಾವಾಗ ಜನ್ಮ ತಾಳಿದವು?
ಈ ಚರ್ಚೆಗೆ ಅಂತಿಮ ತೆರೆಯನ್ನು ‘ಈ ದೇಶದ ಪ್ರಧಾನಿಯವರೇ ಎಳೆಯಬೇಕು’ ಈ ಧ್ವನಿ ಯಾವ ಮಟ್ಟದಲ್ಲಿ ಮುನ್ನುಗುತ್ತದೆ ಕಾದು ನೋಡೋಣ.
ವಿಷಯ ಪರಿಣಿತರು ತಮ್ಮ ಜ್ಞಾನಧಾರೆ ಮಾಡುವುದು ಸೂಕ್ತ.