28th March 2024
Share

TUMAKURU:SHAKTHIPEETA FOUNDATION  

2002  ರಿಂದ 2004 ರವರೆಗೆ ಶ್ರೀ ಜಿ.ಎಸ್.ಬಸವರಾಜ್‌ರವರು ಎಂಪಿ ಇದ್ದರೂ, ಯಾವುದೇ ಯೋಜನೆಯನ್ನು ಬಿದರೆಹಳ್ಳಕಾವಲ್‌ಗೆ ತರಲು ಶ್ರಮಿಸಲಿಲ್ಲ. ಕಾರಣ   ಮಾಜಿ ಸಚಿವರಾದ ಶ್ರೀ ಸಾಗರನಹಳ್ಳಿ ರೇವಣ್ಣನವರು ಮತ್ತು ನನಗೆ ಬಹಳ ಆತ್ಮೀಯತೆ ಬಂದಿತ್ತು. ನಾನು ಯಾವುದೇ ಒಂದು ಯೋಜನೆ ಮಂಜೂರು ಮಾಡಿಸಿದರು ಲೋಕಾಯುಕ್ತಕೆಂದು ಅರ್ಜಿ ಗ್ಯಾರಂಟಿ ಎಂಬ ವಾತಾವಾರಣ ಸೃಷ್ಠಿಯಾಯಿತು.

  ಶ್ರೀ ಜಿ.ಎಸ್.ಬಸವರಾಜ್‌ರವರು ಸುಮ್ಮನೆ ಈಗ ಟೈಮ್ ವೇಸ್ಟ್ ಮಾಡುವುದು ಬೇಡ, ನೀನು ಬೇಕು ಅಂದರೆ ನಿಮ್ಮ ತಾತಾ ಬೇಡ ಅಂತಾರೆ, ಅದರ ಬದಲು ಜಿಲ್ಲೆಗೆ ಬೇರೆ ಯೋಜನೆಗಳ ಜಾರಿಗೆ ಶ್ರಮಿಸುವುದು ಸೂಕ್ತ ಎಂಬ ಸಲಹೆ ನೀಡಿದರು. ನನಗೂ ಇದೇ ಸರಿ ಎನಿಸಿತು. ಬಿದರೆಹಳ್ಳಕಾವಲ್ ಯೋಜನೆಗಳಿಗೆ ತಾತ್ಕಾಲಿಕ ರಜೆ ಘೋಶಿಸಿದೆ.

  ನನ್ನ ಎರಡನೇ ಇನ್ನಿಂಗ್ಸ್ 2007 ರಲ್ಲಿ ಪುನಃ ಆರಂಭವಾಯಿತು. ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಜಮೀನಿನ ಸಮಸ್ಯೆ  ಕಾಡತೊಡಗಿದಾಗ ಬಿದರೆಹಳ್ಳಕಾವಲ್ ಸುತ್ತಮುತ್ತಲಿನ ರೈತರ ಸಭೆ ಕರೆದು ಸಮಾಲೋಚನೆ ನಡೆಸಿದಾಗ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಶಂಕರ್‌ರವರು, ಶ್ರೀ ಬೋರೆಗೌಡರವರು, ಶ್ರೀ ಸಿದ್ಧರಾಮಣ್ಣ, ಶ್ರೀ ವಿಶ್ವನಾಥ್, ಶ್ರೀ ಗುಬ್ಬಣ್ಣ, ಶ್ರೀ ಕೆ.ಆರ್.ಮಹೇಶ್. ಶ್ರೀ ಶಿವಣ್ಣ, ಶ್ರೀ ಉಮೇಶ್ ಸೇರಿದಂತೆ ಹಲವಾರು ಆಸಕ್ತರು ಕುಂದರನಹಳ್ಳಿ ಗೇಟ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಹೋರಾಟ ಆರಂಭಿಸಲು ನಿರ್ಣಯಕೈಗೊಂಡರು

   ಶ್ರೀ ಪಾವಗಡ ಶ್ರೀರಾಮ್ ಮತ್ತು ಅವರ ತಂಡ ಯುಗಾದಿ ಹಬ್ಬದ ದಿವಸ ನಡೆದ ಸಭೆಗೆ ಬಂದು. ಬಿದರೆಹಳ್ಳ ಕಾವಲ್‌ನಲ್ಲಿ ವಿಶ್ವವಿದ್ಯಾನಿಲಯ ಬಂದರೆ ಸುತ್ತಮುತ್ತಲಿನ ಜನರಿಗೆ ಆಗುವ ಪ್ರಯೋಜನದ ಬಗ್ಗೆ ಮಾತನಾಡಿದರು. ಸಭೆಯ ನಂತರ ಅವರಿಗೆ ಒಂದು ಟಾಸ್ಕ್ ಇತ್ತು, ಬಿದರೆಹಳ್ಳಕಾವಲ್ ಕಾಲೋನಿ ಮತ್ತು ಕುಂದರನಹಳ್ಳಿ ಕಾಲೋನಿಗೆ ಭೇಟಿ ನೀಡಿ ಯೋಜನೆಗೆ ವಿರೋಧ ಮಾಡುತ್ತಿದ್ದ ಅವರ ಸಮಾಜದ ಜನರ ಮನವೋಲಿಸುವುದು. ಅವರು ಎರಡು ಕಾಲೋನಿಗಳಿಗೂ ಭೇಟಿ ನೀಡಿ ಅವರ ಮನಸ್ಥಿತಿ ವರದಿ ನೀಡುವ  ಕಾರ್ಯವನ್ನು ಮಾಡಿದ್ದು ನಿಜಕ್ಕೂ ಅಭಿನಂದನೀಯ.

  ನೋಡಿ ಸಾರ್ ಇಲ್ಲಿ ನಮ್ಮ ಜನದ್ದು ಏನೂ ಸಮಸ್ಯೆ ಇಲ್ಲ, ಎಲ್ಲಾ ನಿಮ್ಮ ಜಾತಿಯವರದ್ದೇ ಕಿತಾಪತಿ, ಬಿದರೆಹಳ್ಳಕಾವಲ್ ಜನರಿಗೆ ಮಂಜೂರಾಗಿರೋ ಆಸ್ತಿ ಬಿಟ್ಟು ನೀವು ಏನುಬೇಕಾದರೂ ಮಂಜೂರು ಮಾಡಿಸಿ, ನಾನೂ ಇಂದಿನಿಂದ ನಿಮ್ಮ ಜೊತೆ ಇರುತ್ತೇನೆ.

  ದಿ: 21.03.2007 ರಂದು ಅಭಿವೃಧ್ಧಿ ರೆವೂಲ್ಯೂಷನ್ ಫೋರಂ ವತಿಯಿಂದ ಗುಬ್ಬಿ ತಾಲ್ಲೂಕು ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿಯ  ಅಧ್ಯಕ್ಷರಿಗೆ ಬಿದರೆಹಳ್ಳ ಅಮೃತ್ ಮಹಲ್ ಕಾವಲ್‌ನಲ್ಲಿ  ತುಮಕೂರು ವಿಶ್ವವಿದ್ಯಾಲಯ ಸ್ಥಾಪಿಸುವುದಕ್ಕೆ ನಿರ್ಣಯ ಕೈಗೊಳ್ಳಲು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ದಿ: 24.03.2007 ರಂದು ನಡೆದ  ಪಂಚಾಯಿತಿ ಸಭೆಯ ನಡವಳಿಕೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. 

 ಆಗಿನ ಮುಖ್ಯಮಂತ್ರಿಯವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಚನ್ನೀಗಪ್ಪರವರಿಗೆ, ಸಚಿವರಾದ ಶ್ರೀ ಸೊಗಡು ಶಿವಣ್ಣನವರಿಗೆ,  ಲೋಕಸಭಾ ಸದಸ್ಯರಾದ ಶ್ರೀ ಎಸ್. ಮಲ್ಲಿಕಾರ್ಜುನಯ್ಯನವರಿಗೆ ಮತ್ತು ಗುಬ್ಬಿ ಶಾಸಕರಾದ  ಶ್ರೀ ಎಸ್.ಆರ್. ಶ್ರೀನಿವಾಸ್ ರವರಿಗೆ ಈ ಜಮೀನಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಸ್ಥಾಪಿಸಲು ಮನವಿ ಸಲ್ಲಿಸಲು ತೀರ್ಮಾನಿಸುವ ಮೂಲಕ ಗ್ರಾಮ ಪಂಚಾಯಿತಿ ಮಹತ್ತರವಾದ ತೀರ್ಮಾನ ಮಾಡಿತು.