19th April 2024
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂತು, ಶ್ರೀ ಎಸ್.ಸುರೇಶ್‌ಕುಮಾರ್‌ರವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದರು. ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯ ಮಂತ್ರಿಗಳಾಗಿದ್ದರು.ಸುರೇಶ್‌ಕುಮಾರ್ ರವರ ಬಳಿ ಸಮಾಲೋಚನೆ ನಡೆಸಿ ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಜಮೀನಿನನ್ನು ಕೈಗಾರಿಕಾ ವಸಾಹತು ಮಾಡಲು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಮನವಿ ಸಲ್ಲಿಸಿತು.

 ಮಾಜಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್‌ರವರು ಮತ್ತು ಶ್ರೀ ಎಸ್.ಸುರೇಶ್‌ಕುಮಾರ್‌ರವರು ಅನೀರೀಕ್ಷತವಾಗಿ ತುಮಕೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಶ್ರೀ ವೀರೇಶಾನಂದ ಸ್ವಾಮಿಗಳ ಸಮ್ಮುಖದಲ್ಲಿ ಭೇಟಿಯಾಯಿತು. ಅಂದು ಬಿದರೆಹಳ್ಳ ಅಮೃತ ಮಹಲ್ ಕಾವಲ್ ಬಗ್ಗೆ ಚರ್ಚಿಸಲಾಯಿತು. ಸಚಿವರು ಕುಂದರನಹಳ್ಳಿ ರಮೇಶ್ ಏನೇ ಹೇಳಿದರೂ ನಮ್ಮ ಕಚೇರಿ ಸದಾ ಸಿದ್ಧವಾಗಿದೆ. ಅವರು ತರುವ ಯೋಜನೆಗಳೆಲ್ಲಾ ಬೃಹತ್ ಮತ್ತು ಉತ್ತಮ ಯೋಜನೆಗಳೇ ಎಂದು ಹಾಸ್ಯ ಚಟಾಕಿ ಹಾರಿಸಿದರು.

   ಶ್ರೀ ಸುರೇಶ್‌ಕುಮಾರ್‌ರವರಿಗೆ ಸಲ್ಲಿಸಿದ  ಮನವಿಯ ಹಿನ್ನೆಲೆಯಲ್ಲಿ  ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್, ತಿಮ್ಮಳಿಪಾಳ್ಯ, ಸೋಪನಹಳ್ಳಿ, ಸಾಗರನಹಳ್ಳಿ, ಕುಂದರನಹಳ್ಳಿ ಗ್ರಾಮಗಳ ಜಮೀನು ಸೇರಿದಂತೆ ಸುಮಾರು 863 ಎಕರೆ ಪ್ರದೇಶವನ್ನು ಕೈಗಾರಿಕಾ ವಸಾಹತುಗಾಗಿ ಅಧಿಸೂಚನೆಯನ್ನು ದಿ: 23.10.2009 ರಂದು ಕೆ.ಐ.ಎ.ಡಿ.ಬಿ ಸರ್ಕಾರದ ಅದಿ ಸೂಚನೆ ಸಂಖ್ಯೆ ಸಿ.ಐ.389ಎಸ್.ಪಿ.ಕ್ಯು.2009 ರಲ್ಲಿ ಘೊಷಣೆ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದಂತಾಯಿತು. 

   ಶ್ರೀ ಎಸ್.ಸುರೇಶ್‌ಕುಮಾರ್‌ರವರ ಆಪ್ತಕಾರ್ಯದರ್ಶಿಯಾಗಿದ್ದ ಶ್ರೀ ಡಾ.ಎ.ಆರ್.ಮಂಜುನಾಥ್‌ರವರು ಮತ್ತು ಕೆಐಎಡಿಬಿ ವಿಶೇಷ ಭೂ ಸ್ವಾಧೀನಾಧಿಕಾರಿ ಶ್ರೀ ರಾಮಕೃಷ್ಣರವರು ಹಾಗೂ ಸಹಕರಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲೇ ಬೇಕು.