25th April 2024
Share

TUMAKURU:SHAKTHIPEETA FOUNDATION

  ದಿನಾಂಕ:04.04.2009 ರಂದು ಅಂದರೆ ಇಂದಿಗೆ ಸರಿಯಾಗಿ 11 ವರ್ಷದಲ್ಲಿ ಬಿಡುಗಡೆ ಗೊಳಿಸಿದ ಈ ಪ್ರಣಾಳಿಕೆಯಲ್ಲಿನ  11 ನೇ ಪುಟದಲ್ಲಿ ಜಿಲ್ಲಾಡಳಿತದ ವಿಷಯಗಳ 14  ನೇ ವಿಷಯವಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ರಕ್ಷಣಾ ಇಲಾಖೆಯ ಘಟಕ ಸ್ಥಾಪಿಸುವುದು’ ಆಗಿತ್ತು.

  ದಿನಾಂಕ:23.04.2009 ರಂದು ನಡೆಯುವ ಲೋಕಸಭಾ ಚುನಾವಣೆ ಚುನಾವಣೆಯಲ್ಲಿ ಗೆಲ್ಲುವವರು ಈ ಯೋಜನೆಗಳನ್ನು ಜಾರಿಗೊಳಿಸಲು ಶ್ರಮಿಸಲು ತುಮಕೂರು ನಗರದ ನಾನಾ ಸಂಘಟನೆಗಳ ನೇತೃತ್ವದಲ್ಲಿ  ಮತದಾರರ ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿತ್ತು. ದಿವಂಗತ ಪಾಟೀಲ್ ಪುಟ್ಟಪ್ಪನವರು ಬಿಡುಗಡೆ ಮಾಡಿದ್ದರು.

  ಈ ವಿಷಯವನ್ನು ಸೇರ್ಪಡೆ ಮಾಡಲು ತುಮಕೂರಿನ ಅಭಿವೃದ್ಧಿ ಚಿಂತಕರಾದ ಶ್ರೀ ಟಿ.ಆರ್.ರಘೋತ್ತಮರಾವ್ ಸಲಹೆ ನೀಡಿದ್ದರು. ಸಭೆಯಲ್ಲಿದ್ದವರು ಕುಂದರನಹಳ್ಳಿಯಲ್ಲಿ ಏಕೆ-47 ತಯಾರಿಸುವ ಘಟಕ ಆರಂಭಿಸಿ ರಮೇಶ್ ರವರಿಗೆ ಒಂದು ಕೊಡಬೇಕು, ಯಾರ್‍ಯಾರು ಅಧಿಕಾರಿಗಳು, ರಾಜಕಾರಣಿಗಳು ಕೆಲಸ ಮಾಡಲ್ವೋ ಅವರಿಗೆಲ್ಲಾ ಡಮಾರ್ ಅಂತ ಜೋಕ್ ಮಾಡಿದ್ದರು.

  ಅಂದು ರಘೋತ್ತಮರಾವ್‌ರವರಿಗಾಗಲಿ, ನನಗಾಗಲಿ, ಸಭೆಯಲ್ಲಿದ್ದವರಿಗಾಗಲಿ ರಕ್ಷಣಾ ಇಲಾಖೆಯ ಹೆಚ್.ಎ.ಎಲ್ ವತಿಯಿಂದ ಯುದ್ಧದ ಹೆಲಿಕ್ಯಾಪ್ಟರ್‌ಗಳನ್ನು ತಯರಿಸುವ ಘಟಕ’ ವನ್ನು ಇಲ್ಲಿ ಆರಂಭಿಸ ಬಹುದು ಎಂಬ ಸಣ್ಣ ಸುಳಿವು ಇರಲಿಲ್ಲ. ಅವರು ಹೇಳಿದ ನಂತರ ನನಗೂ ಪ್ರಯತ್ನಿಸೋಣ ಅಂತ ಅನಿಸಿತು, ಕೂಡಲೇ ಸೇರ್ಪಡೆ ಮಾಡಿದ್ದು ಒಂದು ಇತಿಹಾಸ.

  ದೇವಿ ಜಗನ್ಮಾತೆ ಶಕ್ತಿದೇವತೆಯ ಆಶಿರ್ವಾದ ಇಲ್ಲಿ ಹೆಲಿಕ್ಯಾಪ್ಟರ್‌ಗಳನ್ನು ತಯರಿಸುವ ಘಟಕ’ ಸ್ಥಾಪನೆ ಆಗಬೇಕು ಎಂಬುದಾಗಿತ್ತು. ಇದಕ್ಕೋಸ್ಕರ ಇಷ್ಟು ವರ್ಷ ನಾವು ಯಾವುದೇ ಯೋಜನೆಗೆ ಪ್ರಯತ್ನ ಪಟ್ಟರೂ ಅಗಿರಲಿಲ್ಲ ಎಂದು ನನಗೆ ಈಗ ಅನಿಸುತ್ತಿದೆ.