21st November 2024
Share
ಹೆಚ್.ಎ.ಎಲ್ ಕಟ್ಟಡ

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಹೆಚ್.ಎ.ಎಲ್ ಸೇರಿದ್ದರಿಂದ ಯಾವ ಜಾಗ ಸೂಕ್ತ ಎಂಬ ಆಯ್ಕೆ ಮಾಡುವುದು ಕೇಂದ್ರಕ್ಕೆ ಸೇರಿದ್ದು ಅಲ್ಲಿಂದಲೇ ತೀರ್ಮಾನವಾಗುವುದು ಒಳ್ಳೆಯದು ಎಂಬ ’ಐಡಿಯಾ’ ಹೊಳೆಯಿತು. 8 ಗಂಡುಗಳು ಮದುವೆ ಆಗಲು ತಾನು ಮುಂದು ನಾನು ಮುಂದು ಎಂದು ಬಂದಿವೆ, ’ಹೆಲಿಕ್ಯಾಪ್ಟರ್ ಎಂಬ ಸುರಸುಂದರಿಗೆ ತನ್ನ ಗಂಡನ ಆಯ್ಕೆಗೆ ಅವಕಾಶವಾಗಬೇಕು ಎಂಬ ತೀರ್ಮಾನಕ್ಕೆ ಬಂದೆವು, ಈ ತಂಡದ ಸದಸ್ಯರ ಹೆಸರು ಹೇಳುವುದು ಸೂಕ್ತವಲ್ಲ. ಇದೊಂದು ಅತ್ಯುತ್ತಮ ಪರಿಣಿತರ ಜವಾಬ್ಧಾರಿಯುತ ತಂಡ ಈ ತಂಡದ ಶ್ರಮ ಹೆಚ್.ಎ.ಎಲ್ ಗುಬ್ಬಿಗೆ ಬರಲು ಬಹಳ ಮುಖ್ಯ.

  ಗುಜರಾತ್ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಕಾಂಗ್ರೆಸ್ ಅಮ್ಮ ನಮಗೆ ಬೆಡಗು ಹೊಂದುವುದಿಲ್ಲ ಆ ಗಂಡು ಬಿಜೆಪಿಯದು ಬೇಡ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

 ತಮಿಳುನಾಡು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಕು.ಜಯಲಲಿತರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಕಾಂಗ್ರೆಸ್ ಅಮ್ಮ ಅತ್ತೆ ಬಹಳ ಘಾಟಿ ನಮ್ಮ ಮಗಳಿಗೆ ಹೊಂದುವುದಿಲ್ಲ ಆ ಗಂಡು ಬೇಡ’ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

 ಆಂಧ್ರ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಎಂ.ಪಲ್ಲಂರಾಜುರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಕಾಂಗ್ರೆಸ್ ಅಮ್ಮ ಆಂದ್ರ ಮತ್ತು ತೆಲಂಗಾಣ ಎಂದು ಕಿತ್ತಾಡುತ್ತಿದ್ದಾರೆ, ಈ ದಾಯಾದಿಗಳ ಜಗಳದಲ್ಲಿ ನಮ್ಮ ಮಗಳನ್ನು ಅಲ್ಲಿಗೆ ಕೊಡುವುದು ಬೇಡ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

 ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನಾವು ಶಿವಮೊಗ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಹೆಲಿಕ್ಯಾಪ್ಟರ್ ಎಂಬ ಸುರಸಂದರಿ ಅಲ್ಲಿ ಮಳೆ ಜಾಸ್ತಿ ನಾನು ಹಾರಾಡಲು ತೊಂದರೆಯಾಗಲಿದೆ ನನಗೆ ಆ ಗಂಡು ಬೇಡ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

 ಕರ್ನಾಟಕ ರಾಜ್ಯದ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎನ್.ಧರ್ಮಸಿಂಗ್ರವರು ನಾವು ಬೀದರ್‌ನಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಹೆಲಿಕ್ಯಾಪ್ಟರ್ ಎಂಬ ಸುರಸಂದರಿ ಅಲ್ಲಿ ಬಿಸಿಲು ಜಾಸ್ತಿ ಮತ್ತು ನನ್ನ ತವರು ಮನೆ ಬೆಂಗಳೂರಿಗೆ ಬಲು ದೂರ  ನನಗೆ ಆ ಗಂಡು ಬೇಡ ಎಂದರೆ ಹಾಗೂ ಕಾಂಗ್ರೆಸ್ ಅಮ್ಮ ಇಬ್ಬರೂ ಒಬ್ಬರಿಗಿಂತ ಒಬ್ಬರು ಬಲಿಷ್ಠರು, ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಸಿಟ್ಟು ಅದ್ದರಿಂದ ಈ ಭಾಗಕ್ಕೆ ಬೇಡ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

  ಕರ್ನಾಟಕ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಮಲ್ಲಿಕಾರ್ಜುನ್ ಖರ್ಗೆರವರು ನಾವು ಗುಲ್ಬರ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ  ಎಂಬ ಬೇಡಿಕೆಗೆ ’ಹೆಲಿಕ್ಯಾಪ್ಟರ್ ಎಂಬ ಸುರಸಂದರಿ ಅಲ್ಲಿ ಬಿಸಿಲು ಜಾಸ್ತಿ ಮತ್ತು ನನ್ನ ತವರು ಮನೆ ಬೆಂಗಳೂರಿಗೆ ಬಲು ದೂರ  ನನಗೆ ಆ ಗಂಡು ಬೇಡ ಎಂದರೆ ಹಾಗೂ ಕಾಂಗ್ರೆಸ್ ಅಮ್ಮ ಇಬ್ಬರೂ ಒಬ್ಬರಿಗಿಂತ ಒಬ್ಬರು ಬಲಿಷ್ಠರು, ಒಬ್ಬರಿಗೆ ಕೊಟ್ಟರೆ ಇನ್ನೊಬ್ಬರಿಗೆ ಸಿಟ್ಟು ಅದ್ದರಿಂದ ಈ ಭಾಗಕ್ಕೆ ಬೇಡ ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

  ಕರ್ನಾಟಕ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಟಿ.ಬಿ.ಜಯಚಂದ್ರರವರು ನಾವು ಶಿರಾದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಹೆಲಿಕ್ಯಾಪ್ಟರ್ ಎಂಬ ಸುರಸಂದರಿ ಅಲ್ಲಿ ರಣ ಹದ್ದುಗಳ ಹಾರಾಟ ಜಾಸ್ತಿ  ನಾನು ಹಾರಾಡಲು ತೊಂದರೆಯಾಗಲಿದೆ ನನಗೆ ಆ ಗಂಡು ಬೇಡ  ಎಂದರೆ ಈ ಒಂದು ಗಂಡಿನ ಕತೆ ಮುಗಿಯಿತು.

  ಕರ್ನಾಟಕ ರಾಜ್ಯದ ತುಮಕೂರು ಲೋಕಸಭಾ ಸದಸ್ಯರಾದ ಮಾನ್ಯ  ಶ್ರೀ ಜಿ.ಎಸ್.ಬಸವರಾಜ್ ರವರು ನಾವು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‌ನಲ್ಲಿ  ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ’ಹೆಲಿಕ್ಯಾಪ್ಟರ್ ಎಂಬ ಸುರಸಂದರಿ ಇದು ಬಹಳ ಚೆನ್ನಾಗಿದೆ, ತಂಪಾಗಿದೆ, ಸುತ್ತಲೂ ಪರಿಸರವೂ ಚೆನ್ನಾಗಿದೆ ಆದರೆ ಮೂರು ಹೆಚ್.ಟಿ. ಲೈನ್ ಇವೆ, ಹಾರಾಡಲು ತೊಂದರೆಯಾಗುವುದರಿಂದ ಇವನ್ನು ತೆಗೆದರೆ  ನಾನು ಓಕೆ. ಜೊತೆಗೆ ನನ್ನ ತವರು ಮನೆ ಬೆಂಗಳೂರು ಹತ್ತಿರವಾಗಲಿದೆ ಓಡಾಡಲು ಅನೂಕೂಲ ಎಂದರೆ ಹಾಗೂ ಕಾಂಗ್ರೆಸ್ ಅಮ್ಮ ಬಸವರಾಜ್ ನಮ್ಮ ಹತ್ತಿರದವರು ಯಾವುದೋ ಕಾರಣಕ್ಕೆ ಮುನಿಸಿಕೊಂಡು ಬಿಜೆಪಿ ಮನೆಗೆ ಹೋಗಿದ್ದಾರೆ, ನಮ್ಮ ಮನೆಗೆ ಯಾವಾಗ ಬೇಕಾದರೂ ಬರಬಹುದು ಇಲ್ಲಿಗೆ ಕೊಡುವುದು ಉತ್ತಮ’ ಎಂಬ ವಾತಾವಾರಣ ಸೃಷ್ಠಿ ಮಾಡಲು ಮಾಸ್ಟರ್ ಪ್ಲಾನ್ ರೆಡಿಮಾಡಿ, ಸಮರೋಪಾದಿಯಲ್ಲಿ ಕಾರ್ಯಸಾಧನೆಗೆ ಇಳಿದೆವು ಅದು ’ದೇವಿಯ ಕೃಪೆಯಿಂದ ಸಕ್ಸಸ್’ ಆಯಿತು. 

  ಗೋವಾ ರಾಜ್ಯದ ಕೇಂದ್ರ ರಕ್ಷಣಾ ಸಚಿವರಾದ ಮಾನ್ಯ  ಶ್ರೀ ಮನೋಹರ್ ಪರಿಕ್ಕರ್‌ವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ, ಈ ಗಂಡು ಇನ್ನೂ ಗೊತ್ತೆ ಇರಲಿಲ್ಲ ‘ಲಗ್ನ ಕಟ್ಟಿದ ಮೇಲೆ ಬಂದ ಗಂಡು’ ಇದು. ಆ ಕತೆ ಮುಂದೆ ಹೇಳುತ್ತೇನೆ.