21st November 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡುವ ಮುನ್ನ ‘ಹೇಮಾವತಿ ನೀರು ಸರಬರಾಜು ಮಾಡುವುದೇ ಒಂದು ಪವಾಡ’ ವಾಗಿತ್ತು.

  ಇದೇ ವೇಳೆಯಲ್ಲಿ ತುಮಕೂರು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಮೊದಲೂರು ಕೆರೆಗೆ ಹೇಮಾವತಿ ನೀರಿನ ಅಲೋಕೇಷನ್ ಮಾಡಿಸಲು ಪಟ್ಟು ಹಿಡಿದಿದ್ದರು. ಜೊತೆಗೆ ಯೋಜನೆ ಶಿರಾಕ್ಕೆ ತೆಗೆದು ಕೊಂಡು ಹೋಗಲೇಬೇಕು ಎಂದು ಪ್ರಯತ್ನಿಸಿದ್ದು ಇತಿಹಾಸ.

 ಈ ಹಿಂದೆ ಶ್ರೀ ಬಸವರಾಜ್ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಇದೇ ಜಾಗಕ್ಕೆ ಅನಿಲ ಆಧಾರಿತ ವಿದ್ಯುತ್ ಘಟಕಕ್ಕೆ ಹೇಮಾವತಿಯಲ್ಲಿ ನೀರಿಲ್ಲ ಎಂಬ ಕಾರಣ ಹೇಳಿದ್ದರು. ಯೋಜನೆಯೇ ಮಂಜೂರಾಗಲಿಲ್ಲ. ಇದು ನಿಜಕ್ಕೂ ಒಳ್ಳೆಯದೆ ಆಯಿತು. ಏಕೆಂದರೆ ಯೋಜನೆಗಿಂತ ಯೋಜನೆ ಒಳ್ಳೆಯದು’.

 ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿರವರು, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮತ್ತು ಶ್ರೀ ಹೆಚ್.ಎಸ್.ಮಲ್ಲೇಶ್‌ರವರಿಗೆ ಈ ಯೋಜನೆಗೆ ಹೇಮಾವತಿ ನೀರು ನೀಡುವುದು ಒಂದು ದೊಡ್ಡ ತಲೆನೋವಿನ ವಿಚಾರ, ಬಿಸಿ ತುಪ್ಪ ಉಗುಳುವ ಆಗಿಲ್ಲ- ನುಂಗುವ ಆಗಿಲ್ಲ’.

 ಸಚಿವರಾದ ಶ್ರೀ ಎಂ.ಬಿ.ಪಾಟೀಲ್‌ರವರು ಈ ಯೋಜನೆಗೆ ಹೇಮಾವತಿ ನೀರು ಕೊಡಲೇ ಬೇಕು, ನಾನು ಶ್ರೀ ಜಿ.ಎಸ್.ಬಸವರಾಜ್‌ರವರಿಗೆ   ನೀರು ಕೊಡುವುದಾಗಿ ಹೇಳಿದ್ದೇನೆ. ಇಂತಹ ಯೋಜನೆಗೆ ನೀರು ಕೊಡದಿದ್ದರೇ ಹೇಗೆ, ಇದು ರಾಜ್ಯಕ್ಕೆ ಹೆಸರು ತರುವ ಯೋಜನೆ ಅಲ್ಲವೇ? ನೀವು ಏನಾದರೂ ಮಾಡಿ ನಾನು ಆದೇಶ ನೀಡುತ್ತೇನೆ ಒಟ್ಟಿನಲ್ಲಿ ನೀರು ಕೊಡಿ ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದರಂತೆ.

 ಒಂದು ದಿನ ರಾತ್ರಿ 9 ಗಂಟೆಯಲ್ಲಿ ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿರವರು, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‌ರವರು ಮತ್ತು ಶ್ರೀ ಹೆಚ್.ಎಸ್.ಮಲ್ಲೇಶ್‌ರವರು ಹೇಮಾವತಿ ನೀರು ಅಲೋಕೇಷನ್ ಮಾಡುವ ಬಗ್ಗೆ ಮೊಬೈಲ್‌ನಲ್ಲಿಯೇ  ಚರ್ಚೆ, ಎಂಪಿಯವರು ದಿನ ಬೇಗ ಮಲಗಿದ್ದರು ಅವರಿಗೆ ತೊಂದರೆ ಕೊಡುವುದು ಬೇಡ ಎಂದು ತೀರ್ಮಾನಿಸಿ, ಯಾವ ರೀತಿ, ಎಲ್ಲಿಂದ, ಹೇಗೆ ನೀಡಬೇಕು ಎಂಬ ಬಗ್ಗೆ ಮಧ್ಯೆ ರಾತ್ರಿ 12 ಗಂಟೆವರೆಗೂ ಸಮಾಲೋಚನೆ ನಡೆಯಿತು.

 ಕೊನೆಗೂ ಒಂದು ಬಂಪರ್ ಐಡಿಯಾ ಒಳೆಯಿತು. ಎಲ್ಲರೂ ಸಮಾಧಾನವಾದರು ಬೆಳಿಗ್ಗೆ 10 ಘಂಟೆಗೆ ಶ್ರೀ ಗುರುಪಾದಸ್ವಾಮಿರವರ ಕಚೇರಿಗೆ ಎಂಪಿಯವರು ಮತ್ತು ನಾನು ಹೋದೆವು. ನೀರಿನ ಅಲೋಕೇಷನ್ ಮಂಜೂರಾತಿ ಕಸರತ್ತಿನ ಬಗ್ಗೆ ಚರ್ಚೆಯಾಯಿತು, ಎಂಪಿಯವರು ಓಕೆ ಒಳ್ಳೆ ಐಡಿಯಾ ಅವರು ಚಾಪೆ ಅಡಿ ತೂರಿದರೆ ನಾವು ರಂಗೋಲಿ ಕೆಳಗೆ ತೂರಿದ’ ಗಾದೆ ಹಾಗಿದೆ ಎಂದು ನಕ್ಕರು.

  ಆದೇಶದ ಪ್ರತಿ ರೆಡಿಯಾಯಿತು, ‘ಶ್ರೀ ಎಂ.ಬಿ.ಪಾಟೀಲ್ ಪುಣ್ಯಾತ್ಮ ಕಳುಹಿಸಿ ಬಿಡಿ’ಇದು ಒಂದು ಸಲಹೆ ನಾನು ಬಂದು ಸಹಿ ಹಾಕುತ್ತೇನೆ, ಇನ್ನೂ ಸಚಿವ ಸಂಪುಟದಲ್ಲಿ ಚರ್ಚೆಯಾಗಲೇ ಬೇಕಲ್ಲವೇ ಎಂದು ಫೋನ್ ಮುಖಾಂತರವೇ ಒಪ್ಪಿಗೆ ಸೂಚಿಸಿದರು. ನಂತರ ಆ ದಿನ ಅವರೇ ಬಂದು ಆದೇಶ ನೀಡಿದರಂತೆ. ‘ಒಳ್ಳೆಯ ಕೆಲಸಕ್ಕೆ ದೇವರು ಒಂದು ಮಾರ್ಗ ತೋರಿಸಿಯೇ ತೀರುತ್ತಾನೆ’ ಎಂಬುದಕ್ಕೆ ಇದು ಒಂದು ಸ್ಪಷ್ಟ ಉದಾಹರಣೆ.